ಮಂಗಳೂರು ಏರ್ಪೋರ್ಟಲ್ಲಿ ಏಕಕಾಲಕ್ಕೆ 8 ವಿಮಾನಗಳಿಗೆ ಪಾರ್ಕಿಂಗ್

ಈ ಮೊದಲು ಮಂಗಳೂರು ವಿಮಾನ ನಿಲ್ದಾಣದಲ್ಲಿ 6 ವಿಮಾನ ನಿಲ್ಲಿಸಲು ಮಾತ್ರ ಅವ‌ಕಾಶವಿತ್ತು. ಇದೀಗ ನೂತನ ಪಾರ್ಕಿಂಗ್‌ ಬೇಗಳ ನಿರ್ಮಾಣದೊಂದಿಗೆ ಏಕಕಾಲಕ್ಕೆ 8 ವಿಮಾನಗಳನ್ನು ನಿಲ್ಲಿಸಲು ಅವಕಾಶ ಲಭ್ಯವಾಗಿದೆ.

ಮಂಗಳೂರು, ಏಪ್ರಿಲ್ 28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ 2 ಪಾರ್ಕಿಂಗ್‌ ಬೇ ಕಾರ್ಯಾರಂಭ ಮಾಡಿವೆ. ಇದರೊಂದಿಗೆ ಏಕಕಾಲಕ್ಕೆ 8 ವಿಮಾನಗಳನ್ನು ನಿಲ್ಲಿಸಲು ಅವಕಾಶ ಲಭ್ಯವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು 6 ವಿಮಾನ ನಿಲ್ಲಿಸಲು ಮಾತ್ರ ಅವ‌ಕಾಶವಿತ್ತು. ನೂತನ ಪಾರ್ಕಿಂಗ್‌ ಬೇಗಳನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.[ಕಡಲತಡಿಯಲ್ಲಿ ಶ್ರೀಕೃಷ್ಣ ಪ್ರಿಯ ನೇರಳೆ ಹಣ್ಣಿನ ದರ್ಬಾರ್]

Two Parking bay at Mangaluru International Airport has began to work

ಈ ಮೊದಲು ಸಂಚಾರ ದಟ್ಟಣೆ ವೇಳೆ ಪಾರ್ಕಿಂಗ್‌ ಬೇ ಲಭ್ಯತೆ ಕೊರತೆಯಿಂದ ಕೆಲವು ಬಾರಿ ವಿಮಾನ 5ರಿಂದ 10 ನಿಮಿಷ ವಿಳಂಬವಾಗುತ್ತಿತ್ತು. ಆದರೆ ಇದೀಗ ನೂತನ ಪಾರ್ಕಿಂಗ್ ಬೇ ಆರಂಭದೊಂದಿಗೆ ಈ ಸಮಸ್ಯೆ ನಿವಾರಣೆಯಾಗಿದೆ.

ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಿನ ವರ್ಷದಲ್ಲಿ 8 ಕೋ. ರೂ. ವೆಚ್ಚದಲ್ಲಿ ಇನ್ನೂ 4 ಪಾರ್ಕಿಂಗ್‌ ಬೇಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ.[ಡಿಜಿಟಲ್ ಇಂಡಿಯಾ: ಕರಾವಳಿಯ ಆಟೋ ರಿಕ್ಷಾಗಳಿಗೆ ಬಂತು ಟ್ಯಾಬ್‌!]

ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ:
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಜೆ. ಟಿ. ರಾಧಾಕೃಷ್ಣ , ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2016-17ನೇ ಸಾಲಿನಲ್ಲಿ 7,09,462 ಅಂತಾರಾಷ್ಟ್ರೀಯ ಹಾಗೂ 10,37,330 ಆಂತರಿಕ ಪ್ರಯಾಣಿಕರು ಸೇರಿದಂತೆ ಒಟ್ಟು 17,46,792 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

2015-16ರಲ್ಲಿ 16,76,112 ಪ್ರಯಾಣಿಕರು ಸಂಚರಿಸಿದ್ದರು. ವರ್ಷದಿಂದ ವರ್ಷಕ್ಕೆ ಒಟ್ಟು ಶೇ. 5 ಪ್ರಗತಿ ಸಾಧಿಸಲಾಗಿದೆ. ಹೊಸ ಪಾರ್ಕಿಂಗ್‌ ಬೇಗಳ ಆರಂಭದೊಂದಿಗೆ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿಯಾಗಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+