ಲೈಟ್ ಫಿಶಿಂಗ್ ವಿರುದ್ಧ ಮಂಗಳೂರಿನಲ್ಲಿ ಮೀನುಗಾರರ ಪ್ರತಿಭಟನೆ
ಮಂಗಳೂರು ಜನವರಿ 26: ಸಮುದ್ರ ದಲ್ಲಿ ಲೈಟ್ ಫಿಶಿಂಗ್ ಹಾಗು ಬುಲ್ ಟ್ರಾಲಿಂಗ್ ಮೀನುಗಾರಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅವೈಜ್ಞಾನಿಕ ಲೈಟ್ ಫಿಶಿಂಗ್ ಚಟುವಟಿಕೆ ವಿರುದ್ಧ ಮೀನುಗಾರರು ಸಿಡಿದ್ದೆದ್ದಿದ್ದಾರೆ. ಕಡಲಲ್ಲಿ ಲೈಟ್ ಫಿಶಿಂಗ್ ನಡೆಯುತ್ತಿರುವ ಬಗ್ಗೆ ಪ್ರಕರಣ ಕೂಡ ದಾಖಲಿಸಿಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ , ಮೀನುಗಾರಿಕಾ ಅಭಿವೃದ್ದಿ ಆಯುಕ್ತರು, ಪಶುಸಂಗೋಪನೆ , ಹೈನುಗಾರಿಕೆ ಮತ್ತು ದೆಹಲಿಯ ಮೀನುಗಾರಿಕಾ ಇಲಾಖೆ ಸೂಚನೆಯಂತೆ ಮೀನುಗಾರಿಕಾ ನಿರ್ದೇಶನಾಯಲ ದಿಂದ ಮುಂದಿನ ಆದೇಶದ ವರೆಗೆ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲಿಂಗ್ ಮೀನುಗಾರಿಕೆಯನ್ನು ಕಡ್ಡಾಯವಾಗಿ ನಡೆಸಬಾರದು ಎಂದು ಸೂಚನೆ ನೀಡಿದೆ.
ಈ ನಡುವೆ ಲೈಟ್ ಫಿಶಿಂಗ್ ಮೀನುಗಾರಿಕೆಗೆ ಮುಂದಾಗಿರುವ ಪರ್ಸಿನ್ ಬೋಟುಗಳ ವಿರುದ್ಧ ಮಂಗಳೂರಿನಲ್ಲಿ ನಾಡದೋಣಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಳಗ್ಗೆ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬೆಳಕು ಹಾಯಿಸಿ ಮೀನುಗಾರಿಕೆ ನಡೆಸಲು ಸರಕಾರ ಹೇರಿರುವ ನಿಷೇಧವನ್ನು ಉಲ್ಲಂಘಿಸಿ ಪರ್ಸಿನ್ ಮೀನುಗಾರರು ಸೋಮವಾರದಿಂದ ಮೀನುಗಾರಿಕೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಟ್ರಾಲ್ ಬೋಟ್ ಹಾಗೂ ಗಿಲ್ ನೆಟ್ ಮೀನುಗಾರರು.
ಲೈಟ್ ಫಿಶಿಂಗ್ ಗೆ ಮುಂದಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪರ್ಸಿನ್ ಬೋಟುಗಳಲ್ಲಿನ ಮೀನುಗಳನ್ನು ಖರೀದಿಸದಂತೆ ಒತ್ತಾಯಿಸಿರುದ ಪ್ರತಿಭಟನಾಕಾರರು ಬಳಿಕ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದಾರೆ.












Click it and Unblock the Notifications