ಬಜಿಲಕೇರಿಯಲ್ಲಿ 'ತಲ್ವಾರ್' ಕಾಳಗ: ಮೂವರಿಗೆ ಗಾಯ
ಮಂಗಳೂರು, ಜುಲೈ 14: ದುಷ್ಕರ್ಮಿಗಳ ತಂಡವೊಂದು ಏಕಾಏಕಿ ಮೂವರು ಯುವಕರ ಮೇಲೆ ತಲ್ವಾರ್ ದಾಳಿ ಮಾಡಿದ ಘಟನೆ ಮಂಗಳೂರಿನ ಬಜಿಲಕೇರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ತಲ್ವಾರ್ ದಾಳಿ ವೇಳೆ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ತಲ್ವಾರ್ ದಾಳಿ ನಡೆಸಿದ್ದಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಯುವಕರ ತಂಡದ ನಡುವೆ ವಾಗ್ವಾದ ನಡೆದಿದ್ದು, ಆಗ ತಲ್ವಾರ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದ ಮೇಲೂ ದುಷ್ಕರ್ಮಿಗಳು ಮನೆಯ ಮೇಲೆ ಪೊಲೀಸರ ಎದುರಲ್ಲೇ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕೆಲ ಪೊಲೀಸರನ್ನು ಬಜಿಲಕೇರಿ ಭಾಗದಲ್ಲಿ ನಿಯೋಜನೆ ಮಾಡಿದ್ದಾರೆ.












Click it and Unblock the Notifications