ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಳ್ಯ ಮಠದಿಂದ 900 ವರ್ಷ ಪುರಾತನ ವಿಗ್ರಹಗಳ ಕಳ್ಳತನ

|
Google Oneindia Kannada News

ಮಂಗಳೂರು, ನವೆಂಬರ್ 09: ಅತೀ ಪುರಾತನ ವಿಗ್ರಹ ಗಳನ್ನು ದುಷ್ಕರ್ಮಿಗಳು ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುತ್ತೂರಿನ ಪೋಳ್ಯ ಎಂದಬಲ್ಲಿ ಈ ಘಟನೆ ನಡೆದಿದೆ. ಪೋಳ್ಯ ದಲ್ಲಿರುವ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಇಂದು ಬೆಳ್ಳಂಬೆಳಿಗ್ಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ಅತೀ ಪುರಾತನ ಮೂರು ಪಂಚಲೋಹದ ವಿಗ್ರಹಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಇಂದು ಬೆಳಿಗ್ಗಿನ ಜಾವ ಸುಮಾರು ಸುಮಾರು 1.50 ರ ಹೊತ್ತಿಗೆ ಈ ಕಳ್ಳತನ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಕಳ್ಳರು ಸುಮಾರು 900 ವರ್ಷಗಳ ಹಿಂದಿನ ಲಕ್ಷ್ಮೀ ವೆಂಕಟರಮಣ, ಗಣಪತಿ ಸೇರಿದಂತೆ ಮೂರು ವಿಗ್ರಹಗಳನ್ನು ಕಳವು ಮಾಡಿದ್ದಾರೆ.

Theft in Polya Lakshmi Venkataramana Matt

ಅಲ್ಲದೆ ಇನ್ನು ಮೂರು ವಿಗ್ರಹಗಳಿಗೆ ಹೊದಿಸಿದ ಬೆಳ್ಳಿಯ ಕವಚ, ಪ್ರಭಾವಳಿ ಗಳನ್ನು ಕದ್ದೊಯ್ದಿದ್ದಾರೆ. ಮುಂಜಾನೆ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳ್ಳತನ ನಡೆದ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಬೆರಳಚ್ಚು ತಜ್ಞರ ತಂಡ ಸೇರಿದಂತೆ ಶ್ವಾನದಳವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Theft in Polya Lakshmi Venkataramana Matt

English summary
900 hundred year old Idols stolen from Polya Lakshmi Venkataramana Matt at Putturu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X