• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರಬ್ಬಿ ಸಮುದ್ರದ ಪಾಲಾದ ಜ್ಯೂಸ್ ಅಂಗಡಿ!

|

ಮಂಗಳೂರು, ಜು. 20: ಹಡಗು, ದೋಣಿ, ಬೋಟ್ ಇತ್ಯಾದಿಗಳು ಸಮುದ್ರದ ಪಾಲಾಗುವುದು ಸಹಜ. ಆದರೆ ಜ್ಯೂಸ್ ಅಂಗಡಿಯೊಂದು ಕಡಲ ಪಾಲಾಗಿರುವ ಘಟನೆ ಮಂಗಳೂರು ಸಮೀಪದ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದೆ.

ಮಂಗಳೂರು ಸಮೀಪದ ಸುರತ್ಕಲ್‌ನ ಸಸಿಹಿತ್ಲು ಬೀಚ್‌ ಅಂತರಾಷ್ಟ್ರೀಯ ಸರ್ಫಿಂಗ್ ಕ್ರೀಡೆಗೆ ಪೂರಕ ವಾತಾವರಣ ಹೊಂದಿದೆ. ಆದರೆ ಸರ್ಕಾರ ಮಾತ್ರ ಬೀಚ್ ಅಭಿವೃದ್ಧಿಗೆ ಗಮನ ಕೊಡುತ್ತಿಲ್ಲ. ಪ್ರತಿ ಮಳೆಗಾಲದಂತೆ ಈ ಸಲವೂ ಕರಾವಳಿಯಲ್ಲಿ ಕಡಲ್ಕೊರೆತದ ಅಬ್ಬರ ತೀವ್ರಗೊಂಡಿದೆ. ಹೀಗಾಗಿ ಸಸಿಹಿತ್ಲು ಬೀಚ್‌ನಲ್ಲಿ ಬ್ರೇಕ್ ವಾಟರ್ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸಿದ್ದರು. ಆದರೆ ಸ್ಥಳೀಯರ ಒತ್ತಾಯಕ್ಕೆ ಈವರೆಗೆ ಮನ್ನಣೆ ಸಿಕ್ಕಿಲ್ಲ.

ಕೋವಿಡ್: ಜನರ ಆರೋಗ್ಯ ತಪಾಸಣೆಗೆ ಕಾಂಗ್ರೆಸ್ ತಂಡ

ಈ ಮಧ್ಯೆ ಕಡಲು ಕೊರೆತಕ್ಕೆ ಸಸಿಹಿತ್ಲು ಬೀಚ್‌ನಲ್ಲಿ ಕಡಲ ಅಬ್ಬರಕ್ಕೆ ಜ್ಯೂಸ್ ಅಂಗಡಿಯೊಂದು ಸಮುದ್ರದ ಪಾಲಾಗಿದೆ. ಭಾನುವಾರ ಕಡಲ ಕಿನಾರೆಯಲ್ಲಿದ್ದ ಜ್ಯೂಸ್ ಅಂಗಡಿ ಸಮುದ್ರ ಅಲೆಗಳಿಗೆ ಸಿಕ್ಕು ಮುಳುಗಡೆಯಾಗಿದೆ.

ಅಂಗಡಿ ಮಾತ್ರವಲ್ಲ ಇದೀಗ ಕಡಲ್ಕೊರೆತದಿಂದ ಹಲವು ಮರ, ಸಿಮೆಂಟ್ ಬೆಂಚ್‌ಗಳು ಸಮುದ್ರದ ಪಾಲಾಗಿವೆ. ಕಳೆದ ವರ್ಷವೂ ಕಡಲ್ಕೊರೆತದ ಅಬ್ಬರಕ್ಕೆ ಅಂಗಡಿಯೊಂದು ನೀರು ಪಾಲಾಗಿತ್ತು. ಇವೆಲ್ಲವೂ ಹಳೆಯಂಗಡಿ ಗ್ರಾಮ ಪಂಚಾಯತಿ ನಿರ್ಮಾಣ ಮಾಡಿದ್ದ ಅಂಗಡಿಗಳು. ಅದರಿಂದಾಗಿ ಇದೀಗ ಶಾಶ್ವತ ಪರಿಹಾರಕ್ಕಾಗಿ ಸ್ಥಳೀಯರ ಒತ್ತಾಯಿಸುತ್ತಿದ್ದಾರೆ. ಆದ್ರೆ ಪ್ರವಾಸಿಗರ ನೆಚ್ಚಿನ ತಾಣ ಇದೀಗ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಹಿಂದೆ ಅಂತರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗೆ ಈ ಸಸಿಹಿತ್ಲು ಬೀಚ್ ವೇದಿಕೆಯಾಗಿತ್ತು.

English summary
The juice shop on the beach is a tangle of sea waves in Sasihitlu Beach, Suratkla, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X