ಮಂಗಳೂರು: ಹಡಗು ಮುಳುಗಡೆ, ತಪ್ಪಿದ ಭಾರೀ ಅನಾಹುತ
ಮಂಗಳೂರು, ಮೇ 25 : ಇಲ್ಲಿನ ಅಳಿವೆ ಬಾಗಿಲು ಬಳಿ ಬುಧವಾರ ಸಂಜೆ ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದ ವೇಳೆ ಹಡಗು ಮುಳುಗಡೆಯಾಗಿದೆ.
ಲೋಕನಾಥ್ ಬೋಳಾರ್ ಅವರಿಗೆ ಸೇರಿದ ಹಡಗು ಬುಧವಾರ ಅಳಿವೆ ಬಾಗಿಲಿ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಬೋಟ್ ನವರು ರಕ್ಷಿಸಿದ್ದಾರೆ.[ಹಡಗು ಯಾತ್ರಿಗಳಿಗೆ ಮಂಗಳೂರು ಬಂದರಿನಲ್ಲಿ ಇ-ವೀಸಾ ಸೌಲಭ್ಯ!]

ಬೋಟ್ ಮುಳುಗಡೆಯಿಂದಾಗಿ ಸುಮಾರು 70 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದ್ದು ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications