ಗಾಳಿಪಟ ಹಾರಿಸಲು ಇಚ್ಛಿಸುವಿರಾ ಮಂಗಳೂರಿಗೆ ಬನ್ನಿ

ಮಂಗಳೂರು,ಜನವರಿ,16: ವರ್ಣಮಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲಿ ಕ್ಷಣಗಣನೆ ಆರಂಭವಾಗಿದೆ. ವಿವಿಧ ದೇಶಗಳ ಹವ್ಯಾಸಿಗಳು ಜ.16 ಮತ್ತು 17ರಂದು ಗಾಳಿಪಟ ಹಾರಿಸುವ ಮೂಲಕ ಬಾನಂಗಳದಲ್ಲಿ ಓಕುಳಿಯಾಡಲಿದ್ದಾರೆ.

ಈ ಸಂಭ್ರಮದ ಜೊತೆಗೆ ನಮ್ಮೊಳಗಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ 'ಎಬಿಸಿಡಿ-2016-ಎನಿಬಡಿ ಕ್ಯಾನ್ ಡು' ಎಂಬ ವಿಶಿಷ್ಟ, ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಮಂದಿ ಈ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ. 'ಸಮಾನತೆ ಮತ್ತು ಏಕತೆ' ಎಂಬ ದೃಷ್ಟಿಕೋನದಿಂದ 'ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ' ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಧ್ಯೇಯವಾಗಿದೆ.[ಎಲ್ಲೆಂದ್ರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್]

Mangaluru

ಶನಿವಾರ ಹಾಗೂ ಭಾನುವಾರ ಸಂಜೆ 6.30ರಿಂದ ರಾತ್ರಿವರೆಗೂ ಪ್ರತಿಭೆಗಳಿಗೆ ಮೀಸಲಿರಿಸಲಾದ ಈ ವೇದಿಕೆಯಲ್ಲಿ ಜಾತಿ, ಧರ್ಮ, ಸಂಸ್ಕೃತಿಯ ಬೇಲಿಯನ್ನು ಕಿತ್ತೊಗೆಯುವ ಆಲೋಚನೆ ಬೆಳೆಸುವ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.[ಮೈಸೂರಲ್ಲಿ ಬಹುರೂಪಿ ನಾಟಕೋತ್ಸವ]

ಇಂದು ಪ್ರತಿಭೆಗಳಿಗೆ ಬರವಿಲ್ಲ. ಆದರೆ, ಹುಡುಕಾಟದಲ್ಲಿ ಸಮಸ್ಯೆಯಿದೆ. ಕೇವಲ ಪ್ರಭಾವಶಾಲಿಗಳಷ್ಟೇ ಇಂದು ದೊಡ್ಡ ವೇದಿಕೆಯಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಬಲ್ಲರು. ಪ್ರತಿಭೆಗಳನ್ನು ಪ್ರದರ್ಶಿಸುವಲ್ಲಿ ಸಮರ್ಥರಾಗಿದ್ದಾರೆ. ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ 'ಮಧುವನ್ ಈವೆಂಟ್' ಸಾಂಸ್ಕೃತಿಕ ವೈಭವಕ್ಕೆ ದೊಡ್ಡ ವೇದಿಕೆ ಸಜ್ಜುಗೊಳಿಸಿದೆ. ಇಲ್ಲಿ ಯಕ್ಷಗಾನ, ಭರತನಾಟ್ಯ, ಕಥಕ್ಕಳಿ, ಡಫ್ಫ್, ಒಪ್ಪಾನೆ, ಕವ್ವಾಲಿ, ಧಾಂಡಿಯಾದಂತಹ ಸಾಂಪ್ರದಾಯಿಕ ನೃತ್ಯ, ಹುಲಿವೇಷದಂತಹ ಜನಪದ ಶೈಲಿ ಗುಂಪು ಅಥವಾ ಏಕವ್ಯಕ್ತಿ ಪ್ರದರ್ಶನಕ್ಕೆ ಅವಕಾಶವಿದೆ.[ಶನಿವಾರದಿಂದ ಮಂಡ್ಯದಲ್ಲಿ ಬಾಯಿ ಚಪ್ಪರಿಸೋ ತಿನಿಸುಗಳು...]

ಗಾಳಿಪಟದ ಉತ್ಸವದ ಕುರಿತು ಹೆಚ್ಚಿನ ವಿವರಗಳಿಗೆ ಮೊ. 96115 86293,96115 86302,98442 66053ಕ್ಕೆ ಸಂಪರ್ಕಿಸಬಹುದು. ಒಟ್ಟಿನಲ್ಲಿ ನೂರಾರು ಗಾಳಿಪಟಗಳು ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡಲು ತಯಾರಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+