Get Updates
Get notified of breaking news, exclusive insights, and must-see stories!

ಇಂಡಿಯನ್ ಓಪನ್ ಸರ್ಫಿಂಗ್: 2ನೇ ದಿನ ಚೆನ್ನೈ ಸರ್ಫರ್ ಗಳ ಪಾರಮ್ಯ

ಸಸಿಹಿತ್ಲುವಿನಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್ ಶಿಪ್ ನ ದ್ವಿತೀಯ ದಿನವಾದ ಶನಿವಾರ ಚೆನ್ನೈ ಸ್ಪರ್ಧಾಳುಗಳು ಪಾರಮ್ಯ ಮೆರೆದಿದ್ದಾರೆ.

ಮಂಗಳೂರು, ಮೇ 28: 'ಇಂಡಿಯನ್ ಓಪನ್ ಆಫ್ ಸರ್ಫಿಂಗ್‍'ನ ಎರಡನೇ ದಿನ ಚೆನ್ನೈ ಸರ್ಫರ್ ಗಳು ಪಾರಮ್ಯ ಮೆರೆದರು. ಆದರೆ ಮಹಿಳೆಯರ ವಿಭಾಗದಲ್ಲಿ ಸ್ಥಳೀಯರು ಗಮನ ಸೆಳೆದರು.

ಬಹುತೇಕ ಎಲ್ಲ ವಿಭಾಗಗಳಲ್ಲಿ ಚೆನ್ನೈ ಸರ್ಫರ್‍ಗಳು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಮಹಿಳೆಯರ ಮುಕ್ತ ವರ್ಗದಲ್ಲಿ ಮಂಗಳೂರಿನ ಸ್ಥಳೀಯ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಬೀಚ್ ಉತ್ಸವದ ಅಂಗವಾಗಿ ಸಸಿಹಿತ್ಲು ಬೀಚ್‍ನಲ್ಲಿ ನಡೆಯುತ್ತಿರುವ 2ನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್‍ನ 2ನೇ ದಿನ ಸ್ಪರ್ಧಿಗಳಿಗೆ ಸವಾಲಾಗುವ ಅಲೆಗಳು ಸಮುದ್ರದಲ್ಲಿದ್ದುದರಿಂದ ತೀವ್ರ ಪೈಪೋಟಿ ಕಂಡುಬಂತು.

Indian Open of Surfing in Mangaluru

ಭಾನುವಾರ ಕೂಟ ಮುಕ್ತಾಯವಾಗಲಿದ್ದು, ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಮಾನ್ಯತೆ ಪಡೆದಿರುವ ಈ ಕೂಟವನ್ನು ಸ್ಥಳೀಯ ಮಂತ್ರ ಕ್ಲಬ್ ಮತ್ತು ಕೆನರಾ ವಾಟರ್ ಸ್ಪೋಟ್ರ್ಸ್ ಪ್ರಮೋಷನ್ ಕೌನ್ಸಿಲ್ ಆಯೋಜಿಸಿದೆ.

ಸೆಮಿಫೈನಲ್, ಫೈನಲ್ ಭಾನುವಾರ

ಸೆಮಿಫೈನಲ್, ಫೈನಲ್ ಭಾನುವಾರ

ಎರಡನೇ ದಿನದ ಕೂಟದಲ್ಲಿ ಕಿರಿಯರ ವಿಭಾಗದ (17 ರಿಂದ 21ವರ್ಷ ವಯೋಮಿತಿ)ಯ ಮೊದಲ ಹಾಗೂ ಎರಡನೇ ಸುತ್ತು, ಮಹಿಳಾ ಮುಕ್ತ ಸ್ಪರ್ಧೆಯ ಮೊದಲ ಸುತ್ತು, ಹಿರಿಯರ ವಿಭಾಗ (22 ರಿಂದ30 ವರ್ಷ) ಎರಡನೇ ಸುತ್ತು, ಹಾಗೂ 16ರ ವಯೋಮಿತಿಯ ಬಾಲಕರ ಸ್ಪರ್ಧೆಗಳು ನಡೆದವು. ಎಲ್ಲ ವರ್ಗಗಳ ಸೆಮಿಫೈನಲ್ ಹಾಗೂ ಫೈನಲ್, ಪುರುಷರ ಎಸ್‍ಯುಪಿ ರೇಸ್‍ನ ಎರಡನೇ ಹಂತದ ಸ್ಪರ್ಧೆಗಳುಭಾನುವಾರ ನಡೆಯಲಿವೆ.

ಆರು ಮಂದಿ ಸೆಮಿಫೈನಲ್ ಗೆ

ಆರು ಮಂದಿ ಸೆಮಿಫೈನಲ್ ಗೆ

ದಿನದ ಮೊದಲ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಭಾರತದ ಭವಿಷ್ಯದ ಆಶಾಕಿರಣ ಎನಿಸಿದ ಸ್ಪರ್ಧಿಗಳು ತುರುಸಿನ ಪೈಪೋಟಿಯ ಪ್ರದರ್ಶನ ನೀಡಿದರು. 23 ಕಿರಿಯ ಸರ್ಫರ್ ಗಳ ಪೈಕಿ ಆರು ಮಂದಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದರು. ಚೆನ್ನೈನ ಟಿ.ಮಣಿವಣ್ಣನ್, ಪಿ,ಸೂರ್ಯ, ಅಜಿತ್ ಗೌಡ, ರಾಹುಲ್ ಗೋವಿಂದ್ ಹಾಗೂ ಸತೀಶ್ ಸೆಮಿಫೈನಲ್‍ಗೆ ಅರ್ಹತೆ ಪಡೆದಿದ್ದು, ಕೇರಳದ ಏಕೈಕ ಸರ್ಫರ್ ರಮೇಶ್ ಕೂಡಾ ಈ ಹಂತಕ್ಕೆ ಮುನ್ನಡೆದಿದ್ದಾರೆ.

ಮಣಿಪಾಲದ ಇಶಿತಾಗೆ ಸೆಮಿಫೈನಲ್ ಅರ್ಹತೆ

ಮಣಿಪಾಲದ ಇಶಿತಾಗೆ ಸೆಮಿಫೈನಲ್ ಅರ್ಹತೆ

ಮಹಿಳೆಯರ ಮುಕ್ತ ವಿಭಾಗದಲ್ಲಿ ಸ್ಥಳೀಯ ಪ್ರತಿಭೆಗಳು ಮಿಂಚುವ ಮೂಲಕ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸರ್ಫಿಂಗ್ ಪ್ರೇಮಿಗಳಿಗೆ ಮುದ ನೀಡಿದರು. ಸೆಮಿಫೈನಲ್‍ಗೆ ಅರ್ಹತೆ ಪಡೆದ ಎಂಟು ಮಂದಿಯ ಪೈಕಿ ಮೂವರು ಮಂಗಳೂರಿನವರಾಗಿದ್ದು, ಸ್ಥಳೀಯರಾದ ತನ್ವಿ ಜಗದೀಶ್, ಅನೀಶಾ ನಾಯಕ್ ಹಾಗೂ ಸಿಂಚನಾ ಗೌಡ ಭರವಸೆಮೂಡಿಸಿದ್ದಾರೆ.
ಚೆನ್ನೈನ ವಿಲಾಸಿನಿ ಸುಂದರ್ ಹಾಗೂ ಸೃಷ್ಟಿ ಸೆಲ್ವಂ, ಪುದುಚೇರಿಯ ಸುಹಾಸಿನಿ ದಮಿಯನ್, ಮಣಿಪಾಲದ ಇಶಿತಾ ಮಾಳವೀಯ ಮತ್ತು ರಷ್ಯಾದ ಓಲ್ಗಾ ಕೊಸೆಂಕೊ ನಾಳೆ ನಡೆಯುವ ಸೆಮಿಫೈನಲ್‍ಗೆ ಅರ್ಹತೆ ಸಂಪಾದಿಸಿದ್ದಾರೆ.

ಗೋವಾ ಕೇರಳ ಕೂಡ ಪೈಪೋಟಿಯಲ್ಲಿ

ಗೋವಾ ಕೇರಳ ಕೂಡ ಪೈಪೋಟಿಯಲ್ಲಿ

ಪುರುಷರ ಹಿರಿಯರ ವಿಭಾಗದಲ್ಲಿ (22-30 ವರ್ಷ) ತಮಿಳುನಾಡಿದ ಸ್ಪರ್ಧಿಗಳು ಏಕಸ್ವಾಮ್ಯ ಮೆರೆದರು. ಸೆಮಿಫೈನಲ್‍ಗೆ ಅರ್ಹತೆ ಪಡೆದ ಎಂಟು ಮಂದಿಯ ಪೈಕಿ ಆರು ಮಂದಿ ತಮಿಳುನಾಡಿನವರು. ಚೆನ್ನೈನಶೇಖರ್ ಪಿಚ್ಚೈ, ಧರಣಿ ಸೆಲ್ವಕುಮಾರ್, ಮಣಿಕಂಠನ್, ಅಪ್ಪು ದೇಸಪ್ಪನ್, ವಿಘ್ನೇಶ್ ವಿಜಯಕುಮಾರ್ ಮತ್ತು ಮಹಾಬಲಿಪುರದ ಸಂತೋಷ್ ಮೂರ್ತಿ ಹಾಗೂ ರಾಗುಲ್ ಪನ್ನೀರಸೆಲ್ವಂ. ಗೋವಾದ ಸ್ವಪ್ನಿನ್ ಭಿಂಹೆ ಹಾಗೂ ಕೇರಳದ ವರ್ಗೀಸ್ ಆಂಟೋನಿ ಕೂಡಾ ಸೆಮಿಫೈನಲ್ ಬರ್ತ್ ಖಚಿತಪಡಿಸಿಕೊಂಡರು.

ಸಸಿಹಿತ್ಲು ಬೀಚ್ ತುಂಬಾ ಅಭಿಮಾನಿಗಳು

ಸಸಿಹಿತ್ಲು ಬೀಚ್ ತುಂಬಾ ಅಭಿಮಾನಿಗಳು

16 ವರ್ಷ ವಯೋಮಿತಿ ವಿಭಾಗದಲ್ಲಿ ಕೂಡಾ ತಮಿಳುನಾಡಿನ ಸ್ಪರ್ಧಿಗಳು ಪಾರಮ್ಯ ಮೆರೆದರು. ಸೆಮಿಫೈನಲ್ ಹಂತದ ಎಲ್ಲ ಸ್ಪರ್ಧಿಗಳೂ ತಮಿಳುನಾಡಿನವರಾಗಿರುವುದು ವಿಶೇಷ. ಸಂತೋಷ್ ಶಾಂತಕುಮಾರ್, ಎಂ.ಮಣಿಕಂಠನ್, ಅಜೀಶ್ ಅಲಿ ಹಾಗೂ ಐ.ಮಣಿಕಂಠನ್. ಮಹಾಬಲಿಪುರದ ಸುನೀಲ್ ದಯಾಳನ್ ಹಾಗೂ ಶಿವರಾಜ್‍ಬಾಬು ಕೂಡಾ ಈ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸುಮಾರು ಆರು ಸಾವಿರಕ್ಕೂ ಹೆಚ್ಚು ಸರ್ಫಿಂಗ್ ಅಭಿಮಾನಿಗಳು ಶನಿವಾರ ಸಸಿಹಿತ್ಲು ಬೀಚ್‍ಗೆ ಭೇಟಿ ನೀಡಿ, ಕ್ರೀಡೆಗಳನ್ನು ಆಸ್ವಾದಿಸಿದರು.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಟಿಟಿ ಗ್ರೂಪ್ ಆಫ್ ಕಂಪನೀಸ್ ಹಾಗೂ ಕಾಕ್ಸ್ ಅಂಡ್ ಕಿಂಗ್ಸ್‍ನ ಟ್ರಿಪ್ 360, ಪ್ರಾಯೋಜಕತ್ವ ವಹಿಸಿಕೊಂಡಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+