• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಮತ್ತೆ ಸುದ್ದಿಯಾದ ಶಿರವಸ್ತ್ರ ವಿವಾದ

|

ಮಂಗಳೂರು, ಏಪ್ರಿಲ್ 24: ಶಿರವಸ್ತ್ರ ವಿವಾದ ಮಂಗಳೂರಿನಲ್ಲಿ ಮತ್ತೆ ಸುದ್ದಿಯಾಗಿದೆ. ಈ ವಿವಾದ ಮಂಗಳೂರಿನ ಆಗ್ನೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.

ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿಗೆ ಶಿರವಸ್ತ್ರ ಧರಿಸಿದ್ದಕ್ಕೆ ದ್ವಿತೀಯ ವರ್ಷದ ದಾಖಲಾತಿ ನಿರಾಕರಿಸಿದ ಘಟನೆ ನಗರದ ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಬುರ್ಖಾ ಧರಿಸಿದ ಫೋಟೋ ವೈರಲ್

ಈ ಬಾರಿ ಪ್ರಥಮ ಪಿಯು ಫಲಿತಾಂಶ ಬಂದ ನಂತರ ದ್ವಿತೀಯ ಪಿಯುಗಾಗಿ ದಾಖಲಾತಿಗೆಂದು ತಾಯಿಯೊಂದಿಗೆ ಕಾಲೇಜಿಗೆ ಹೋದ ಉಡುಪಿ ಜಿಲ್ಲೆಯ ಉಚ್ಚಿಲದ ವಿದ್ಯಾರ್ಥಿನಿ ಫಾತಿಮಾ ಫಾಝಿಲಾಗೆ ಆಘಾತ ಕಾದಿತ್ತು.

St Agnes college management refused to admit student with head scarf

ಕಾಲೇಜಿನ ಪ್ರಾಂಶುಪಾಲರು ಶಿರವಸ್ತ್ರ ತೆಗೆದು ಕಾಲೇಜಿಗೆ ಬರುವುದಾದರೆ ದಾಖಲಾತಿ ನೀಡುತ್ತೇವೆ. ಇಲ್ಲದಿದ್ದರೆ ಈ ಕಾಲೇಜಿನಲ್ಲಿ ದಾಖಲಾತಿಗೆ ಅವಕಾಶ ನೀಡುವುವಿಲ್ಲ ಎಂದಿದ್ದಾರೆ. ಇದರಿಂದ ವಿದ್ಯಾರ್ಥಿನಿ ಆಘಾತಕ್ಕೆ ಒಳಗಾಗಿದ್ದಾಳೆ.

ಬುರ್ಖಾ ತೊಟ್ಟಿದ್ದ ವಿದ್ಯಾರ್ಥಿನಿಗೆ ಅಧಿವೇಶನಕ್ಕೆ ಪ್ರವೇಶ ನಿರಾಕರಣೆ

ಬಳಿಕ ಹಲವು ಬಾರಿ ಪೋಷಕರೊಂದಿಗೆ ವಿದ್ಯಾರ್ಥಿನಿ ಪ್ರಾಂಶುಪಾಲರನ್ನು ಭೇಟಿಯಾಗಿದ್ದಾರೆ. ಶಿರವಸ್ತ್ರದೊಂದಿಗೆ ದಾಖಲಾತಿಗೆ ಮನವಿ ಮಾಡಿದರೂ ಕೂಡ ಪ್ರಾಂಶುಪಾಲರು ನಿಲುವನ್ನು ಬದಲಾಯಿಸಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಪೋಷಕರು ದಾಖಲಾತಿ ನಿರಾಕರಣೆಗೆ ಲಿಖಿತ ರೂಪದಲ್ಲಿ ಕಾರಣ ನೀಡಿ ಎಂದು ಕೇಳಿಕೊಂಡರೂ ಸ್ಪಂದಿಸದೆ ಟಿಸಿ ಬರೆದು ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಬೆಳಗಾವಿ: ಬುರ್ಖಾ ಧರಿಸಿದ್ದಕ್ಕೆ ಮತಗಟ್ಟೆಗೆ ಪ್ರವೇಶ ನಿರಾಕರಣೆ

ಈ ಹಿನ್ನೆಲೆಯಲ್ಲಿ ನೊಂದ ವಿದ್ಯಾರ್ಥಿನಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ತಾನು ತನ್ನ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುವಂತಾಗಿದ್ದು, ಈ ಬಗ್ಗೆ ಸೂಕ್ತ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಈ ಕಾಲೇಜಿನ ಪದವಿ ವಿಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ನಿಯಮದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ದಕ್ಷಿಣ ಕನ್ನಡ ರಣಕಣ
ಮತದಾರರು
Electors
15,65,281
 • ಪುರುಷ
  7,74,500
  ಪುರುಷ
 • ಸ್ತ್ರೀ
  7,90,781
  ಸ್ತ್ರೀ
 • ತೃತೀಯ ಲಿಂಗಿ
  N/A
  ತೃತೀಯ ಲಿಂಗಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
St Agnes college management refused to admit second PUC student with head scarf.Now student complaint against St Agens college management to Police commissioner and Dakshina Kannada ADC.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+000
CONG+000
OTH000

Arunachal Pradesh

PartyLWT
CONG000
BJP000
OTH000

Sikkim

PartyLWT
SDF000
SKM000
OTH000

Odisha

PartyLWT
BJD000
CONG000
OTH000

Andhra Pradesh

PartyLWT
TDP000
YSRCP000
OTH000

AWAITING

Sumalatha Ambarish - IND
Mandya
AWAITING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more