ಪುತ್ತೂರು: ಕೃಷ್ಣ ಮೃಗ ಚರ್ಮ ಸಾಗಿಸುತ್ತಿದ್ದ ಇಬ್ಬರ ಬಂಧನ
ಮಂಗಳೂರು, ಮಾರ್ಚ್. 23 : ಎರಡು ಕೃಷ್ಣ ಮೃಗದ ಚರ್ಮ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಪಿಲಿಗುಂಡ ಎಂಬಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಆಂಜನೇಯ ಮತ್ತು ಪಾಲಾಕ್ಷಪ್ಪ ಬಂಧಿತ ಆರೋಪಿಗಳು. ಇವರು ಕೃಷ್ಣ ಮೃಗದ ಎರಡು ಚರ್ಮವನ್ನು ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಹೆಚ್ಚುವರಿ ಪ್ರಭಾರ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಅವರ ನೇತೃತ್ವದ ತಂಡ ದಾಳಿ ಮಾಡಿದೆ.

ಈ ಪ್ರಕರಣವನ್ನು ಪುತ್ತೂರು ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕುಶಾಲಪ್ಪ, ಕರುಣಾಕರ, ಸುಂದರ ಶೆಟ್ಟಿ, ರಾಧಾಕೃಷ್ಣ , ಸರಸ್ವತಿ ಅವರು ದಾಳಿ ತಂಡದಲ್ಲಿದ್ದರು.












Click it and Unblock the Notifications