ಟಿಪ್ಪು ಜಯಂತಿ ಆರಂಭಿಸಿದ ಸಿದ್ದರಾಮಯ್ಯ ದೊಡ್ಡ ಮತಾಂಧ: ನಳಿನ್ ಕುಮಾರ್ ಕಟೀಲ್
ಮಂಗಳೂರು, ನವೆಂಬರ್ 09: ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ಧರಾಮಯ್ಯ. ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪುವಿನ ಬದಲು ಸಿದ್ಧರಾಮಯ್ಯ ನ ಜಯಂತಿ ಮಾಡಬಹುದಿತ್ತು ಎಂದು ಸಂಸದ ನಳಿನ ಕುಮಾರ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ರಾಜ್ಯ ಸರಕಾರದ ಟಿಪ್ಪು ಜಯಂತಿ ಆಚರಣೆ ಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಮತಾಂಧ ಟಿಪ್ಪುವಿನ ಜಯಂತಿಯನ್ನು ಸಿದ್ಧರಾಮಯ್ಯ ಆರಂಭಿಸಿದರು. ಹಾಗಾಗಿ ಟಿಪ್ಪುವಿನ ಬದಲು ಸಿದ್ಧರಾಮಯ್ಯನ ಜಯಂತಿ ಮಾಡಬಹುದಿತ್ತು ಎಂದು ಅವರು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಿಪ್ಪು ಜಯಂತಿ ಕಾರ್ಯಕ್ರಮ ದಲ್ಲಿ ಹೆಸರು ಹಾಕಿಸಿಕೊಂಡಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಕಾರ್ಯಕ್ರಮದಲ್ಲಿ ನೇರ ಭಾಗವಹಿಸದೇ ಆಚೆಯೂ ಅಲ್ಲ ಇಚೇಯೂ ಅಲ್ಲ ಎಂಬುದನ್ನು ತೋರಿಸಿದ್ದಾರೆ. ಆಚೆ ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂಬುವುದನ್ನು ತೋರಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಟಿಪ್ಪುವಿನ ಖಡ್ಗ ತಂದ ವಿಜಯ ಮಲ್ಯ ಸೋತು ಸುಣ್ಣವಾದರು. ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡಿದ್ದಾರೆ. ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಯೂ ಅಧಿಕಾರ ಕಳೆದು ಕಾಡಿಗೆ ಹೋಗಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ, ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಸರಿಯಲ್ಲ. ಹಿಂದು ಹಾಗು ಕ್ರೈಸ್ತರನ್ನು ಹತ್ಯೆಗೈದ ಟಿಪ್ಪು ನಮಗೆ ಆದರ್ಶವಾಗಬೇಕೇ ಎಂದು ಪ್ರಶ್ನಿಸಿದರು. ಕೊಡಗಿನಲ್ಲಿ70 ಸಾವಿರ ಹಿಂದುಗಳ ನರಮೇಧಕ್ಕೆ ಕಾರಣನಾದವನು ಟಿಪ್ಪು ಸುಲ್ತಾನ್. ಟಿಪ್ಪು ಜಯಂತಿ ಬೇಕೆಂದು ಕೇಳಿದವರು ಮುಸ್ಲಿಮರಲ್ಲ . ಆದರೂ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಿಸಲು ಹೊರಟಿದೆ ಎಂದು ಕಿಡಿಕಾರಿದ ಅವರು ಟಿಪ್ಪು ಜಯಂತಿ ಯಾರ ಸಂತುಷ್ಠಿಗಾಗಿ ಅನ್ನೋದನ್ನು ಮುಖ್ಯ ಮಂತ್ರಿ ಸ್ಟಷ್ಟ ಪಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾತಯಿಸಿದರು.











Click it and Unblock the Notifications