ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ. 2ರಿಂದ ಮೇ 31ರ ವರೆಗೆ ಶಿರಾಡಿ ಘಾಟ್‌ ಬಂದ್

By Kiran B Hegde
|
Google Oneindia Kannada News

ಮಂಗಳೂರು, ಡಿ. 31: ಅಂತೂ ಶಿರಾಡಿ ಘಾಟ್ ರಸ್ತೆ ರಿಪೇರಿಗೆ ಕಾಲ ಕೂಡಿಬಂದಿದೆ. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ವಾಹನ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದ್ದ ಶಿರಾಡಿ ಘಾಟ್ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ 2015ರ ಜನವರಿ 2ರಿಂದ ಮೇ 31ರ ವರೆಗೆ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. [ಶಿರಾಡಿ ಘಾಟ್ ಕೊರೆಯಲು ಆಸ್ಕರ್ ಯತ್ನ]

road

ಭಾರೀ ಮತ್ತು ಚಿಕ್ಕ ವಾಹನಗಳಿಗೆ ಪರ್ಯಾಯ ಮಾರ್ಗ : ರಸ್ತೆ ಕೆಟ್ಟದಾಗಿದ್ದರೂ ವೋಲ್ವೊ ಬಸ್ ಸೇರಿದಂತೆ ಹಲವು ಭಾರೀ ವಾಹನಗಳಿಗೆ ಈ ರಸ್ತೆ ಅನಿವಾರ್ಯವಾಗಿತ್ತು. ಇಂತಹ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಮಾಣಿ- ಪುತ್ತೂರು- ಮಡಿಕೇರಿ- ಮೈಸೂರು ಮಾರ್ಗದಲ್ಲಿ ಭಾರೀ ವಾಹನಗಳು ಸಾಗಬಹುದು. ಚಿಕ್ಕ ವಾಹನಗಳಿಗೆ ಹಾಸನ- ಚಾರ್ಮಾಡಿ ಘಾಟಿ ಮಾರ್ಗ ಸೂಕ್ತವಾಗಿದೆ. ಮಲ್ಟಿ ಆಕ್ಸಿಲ್ ವಾಹನಗಳು ಹಾಗೂ ಟ್ಯಾಂಕರ್‌ಗಳು ಹೊನ್ನಾವರ-ಬೆಂಗಳೂರು ಮಾರ್ಗವಾಗಿ ಚಲಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. [ಶಿರಾಡಿ ಘಾಟ್ ರಸ್ತೆಗೆ ಪರ್ಯಾಯ ಮಾರ್ಗಗಳು]

ಇದಲ್ಲದೆ, ಮಾಣಿ-ಮೈಸೂರು ರಸ್ತೆಯಲ್ಲಿ ವೋಲ್ವೊ ಹಾಗೂ ಸೂಪರ್ ಡಿಲಕ್ಸ್ ಬಸ್‌ಗಳು ಸಂಚರಿಸಬಹುದು. ಕೊಡಗು ಜಿಲ್ಲೆಯ ಕೊಯ್ನಾಡಿನಲ್ಲಿ ಭೂಕುಸಿತದಿಂದ ಹಾಳಾಗಿದ್ದ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. [ಕುಂಭಕರ್ಣನ ನಿದ್ದೆಗೆ ಜಾರಲಿದೆ ಶಿರಾಡಿ ಘಾಟ್]

English summary
The Shiradi Ghat Bengaluru–Mangaluru National Highway will be closed for repairs from 2nd January to 31st May. Vehicles have been directed to take alternative routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X