Twins Day 2023: ಮಂಗಳೂರಿನ ಈ ಶಾಲೆಯಲ್ಲಿದ್ದಾರೆ ಬರೋಬ್ಬರಿ 17 ಅವಳಿ-ಜವಳಿ ಮಕ್ಕಳು, ಶಿಕ್ಷಕರು ಫುಲ್‌ ಕನ್ಫ್ಯೂಸ್‌

ಮಂಗಳೂರು, ಡಿಸೆಂಬರ್‌ 18: ಸಾಮಾನ್ಯವಾಗಿ ಶಾಲೆಯಲ್ಲಿ ಒಂದೆರಡು ಅವಳಿ ಜೋಡಿ ಮಕ್ಕಳನ್ನು ನೋಡಿರುತ್ತೀರಾ. ಆದರೆ ಕಡಲ ನಗರಿ ಮಂಗಳೂರಿನಲ್ಲಿ ಹದಿನೇಳು ಜೋಡಿ ಅವಳಿ ಮಕ್ಕಳಿರುವ ಶಾಲೆಯೊಂದು ವಿಶೇಷತೆಗೆ ಸಾಕ್ಷಿಯಾಗಿದೆ. ಕಾಕತಾಳಿಯ ಎಂಬಂತೆ ಈ ಶಾಲೆಯ ಹೆಸರು ಸಹ ಅವಳಿಯಾಗಿಯೇ ಇದೆ.

ಅದು ಮಂಗಳೂರು ನಗರ ಹೊರವಲಯದ ಕೈರಂಗಳ ಪುಣ್ಯಕೋಟಿ ನಗರದಲ್ಲಿರುವ ಶಾರದಾ ಗಣಪತಿ ವಿದ್ಯಾಕೇಂದ್ರ. ಎಲ್.ಕೆ.ಜಿ ಯಿಂದ ಹಿಡಿದು ಪಿಯಸಿ ತನಕ ತರಗತಿಗಳಿರುವ ಈ ಶಾಲೆ ಇದೀಗ ದಾಖಲೆಯ ಅವಳಿ ಜೋಡಿ ಮಕ್ಕಳ ಮೂಲಕ ಸುದ್ದಿಯಾಗಿದೆ. ಈ ಶಾಲೆಯಲ್ಲಿ 17 ಅವಳಿ ಮಕ್ಕಳ ಜೋಡಿ ಈಗ ಮೋಡಿ ಮಾಡುತಿದೆ.

Sharada Ganapathi Vidya Kendra School Has 17 Pairs Of Twins

ಎಸ್‌ಎಸ್‌ಎಲ್‌ಸಿಯಲ್ಲಿ ಒಂದು ಜೋಡಿ, 9ನೇ ತರಗತಿಯಲ್ಲಿ ಮೂರು ಜೋಡಿ, 8ನೇ ತರಗತಿಯಲ್ಲಿ ಒಂದು ಜೋಡಿ, 7ನೇ ತರಗತಿಯಲ್ಲಿ ಎರಡು ಜೋಡಿ, 6ನೇ ತರಗತಿಯಲ್ಲಿ ಮೂರು ಜೋಡಿ, 2ನೇ ತರಗತಿಯಲ್ಲಿ ಎರಡು ಜೋಡಿ, 1ನೇ ತರಗತಿಯಲ್ಲಿ ಒಂದು ಜೋಡಿ, ಯುಕೆಜಿಯಲ್ಲಿ ಮೂರು ಜೋಡಿ, ಎಲ್ ಕೆಜಿಯಲ್ಲಿ ಒಂದು ಜೋಡಿ ಅವಳಿ ಮಕ್ಕಳಿದ್ದಾರೆ.

ಈ ಮಕ್ಕಳ ಪೈಕಿ ಆರು ಜೋಡಿ ಹೆಣ್ಣು,ಆರು ಜೋಡಿ ಗಂಡು ಮತ್ತು ಐದು ಜೋಡಿ ಹೆಣ್ಣು-ಗಂಡು ಅವಳಿ ಮಕ್ಕಳಿದ್ದಾರೆ. ಈ ಮಕ್ಕಳು ರಜೆ ಮುಗಿಸಿ ಶಾಲೆಗೆ ಬಂದಾಗ ಇವರನ್ನು ಗುರುತಿಸುವುದಕ್ಕೂ ಶಿಕ್ಷಕರು ಗೊಂದಲ ಆಗುತ್ತಿದ್ದಾರೆ. ಈ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 12 ಜೋಡಿ ಅವಳಿ ಮಕ್ಕಳಿದ್ದರು. ಈ ಬಾರಿ ಈ ಅವಳಿ ಜೋಡಿ ಮಕ್ಕಳ ಸಂಖ್ಯೆ 17ಕ್ಕೆ ಏರಿದೆ. ಈ ದಾಖಲೆ ಸಂಖ್ಯೆಯ ಅವಳಿ ಜೋಡಿ ಮಕ್ಕಳಿಂದ ಹಾಸ್ಯಮಯ ಸಂಗತಿಗಳು ಸಹ ಆಗಾಗ ಶಾಲೆಯಲ್ಲಿ ನಡೆಯುತ್ತದೆ.

ಅವಳಿ ಜೋಡಿಯ ಪೈಕಿ ಒಬ್ಬರ ಬಳಿ ಹೇಳಬೇಕಾದ ವಿಷಯವನ್ನು ಶಿಕ್ಷಕರು ಇನ್ನೊಬ್ಬರನ್ನು ಕರೆದು ಹೇಳಿದಂತ ಪ್ರಸಂಗವು ನಡೆದಿದೆ. ಒಬ್ಬರ ಹೆಸರನ್ನು ಇನ್ನೊಬ್ಬರಿಗೆ ಕರೆದ ಉದಾಹರಣೆಯು ಇದೆ. ಇನ್ನು ಕಾಕತಾಳೀಯ ಎಂಬಂತೆ ಈ ಶಾಲೆಯ ಹೆಸರು ಸಹ ವಿದ್ಯಾ ಗಣಪತಿ ಎಂದು ಅವಳಿ ಹೆಸರನ್ನು ಹೊಂದಿದೆ.

ಸಾಮಾನ್ಯವಾಗಿ ನಮ್ಮ ಸುತ್ತಲಿನ ಪರಿಸರದಲ್ಲೇ ಅವಳಿ ವ್ಯಕ್ತಿಗಳಿದ್ದರೆ ಏಕಾಏಕಿ ದೊಡ್ಡವರು ಯಾರು ಸಣ್ಣವರು ಯಾರು ಎಂದು ಗುರುತಿಸುವುದು ಕಷ್ಟವಾಗುತ್ತೆ. ಹೀಗಾಗಿ ಅವಳಿ ಜೋಡಿ ಮಕ್ಕಳು ತಮ್ಮನ್ನು ವಿಶೇಷವಾಗಿ ಗುರುತಿಸಿರೋದಕ್ಕೆ ಖುಷಿ ಪಟ್ಟಿದ್ದಾರೆ. ಒಟ್ಟಿನಲ್ಲಿ ವಿದ್ಯಾಗಣಪತಿ ಶಾಲೆ ಅವಳಿ ಮಕ್ಕಳ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿರೋದಂತು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+