• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ, ನಾಲ್ವರ ವಿರುದ್ಧ ಎಫ್ಐಆರ್

|

ಮಂಗಳೂರು, ಡಿಸೆಂಬರ್ 17: ಆರ್‌ಎಸ್‌ಎಸ್‌ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯನ್ನು ಪುನರ್‌ಸೃಷ್ಟಿಸಲಾಗಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮುಖಂಡರೊಬ್ಬರು ಹಾಗೂ ಇತರೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯ ಮಕ್ಕಳಿಂದ ಬಾಬ್ರಿ ಮಸೀದಿ ಧ್ವಂಸ!

ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿರುವ ಶಾಲೆಯೊಂದು, ತನ್ನ ವಾರ್ಷಿಕ ಕ್ರೀಡೋತ್ಸವದ ಪ್ರಯುಕ್ತ ಬಾಬ್ರಿ ಮಸೀದಿ ಧ್ವಂಸ ಮಾಡಿ, ಶ್ರೀರಾಮ ಮಂದಿರ ನಿರ್ಮಾಣದ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗಿತ್ತು.

ಆರ್‌ಎಸ್‌ಎಸ್‌ನ ದಕ್ಷಿಣ-ಮಧ್ಯ ಪ್ರದೇಶದ ಕಾರ್ಯವಾಹಕ ಹುದ್ದೆಯಲ್ಲಿರುವ ಪ್ರಭಾಕರ ಭಟ್ಟರ ಶಾಲೆಯಲ್ಲಿ ಇಂಥ ಘಟನೆ ನಡೆದಿದೆ.

ಸುಪ್ರೀಂಕೋರ್ಟಿನಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ. ಈ ರೀತಿ ಶಾಲೆಯಲ್ಲಿ ಕಾರ್ಯಕ್ರಮ ಸೃಷ್ಟಿಸಿ, ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯುಂಟು ಮಾಡಿದ್ದಾರೆ ಎಂದು ಸ್ಥಳೀಯರು ದೂರಿತ್ತಿದ್ದರು.

ಹನುಮನ ಭಕ್ತರ ಸಿಟ್ಟು ಹಾಗೂ ಉತ್ಸಾಹದಿಂದ ಬಾಬ್ರಿ ಕಟ್ಟಡವನ್ನು ಉರುಳಿಸುತ್ತಾರೆ ಎಂದು ಮೈಕ್ ನಲ್ಲಿ ಒಬ್ಬ ವ್ಯಕ್ತಿ ಘೋಷಿಸುತ್ತಿದ್ದಂತೆ, ನೂರಾರು ಮಕ್ಕಳ ಗುಂಪು ಬಾಬ್ರಿ ಮಸೀದಿ ಪೋಸ್ಟರ್ ಕೆಡವುತ್ತಾರೆ. ನಂತರ ಮಂದಿರ ನಿರ್ಮಾಣದ ದೃಶ್ಯ ಬರುತ್ತದೆ. ಈ ನೃತ್ಯ ರೂಪಕ ಮಾದರಿ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

English summary
The police in Karnataka have registered an FIR against four governing council members of a school that made its students enact the demolition of Ayodhya's Babri Masjid on stage as part of a cultural event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X