ಬಂಟ್ವಾಳದ ಹನೀಫ್ ಕೊಲೆ ಯತ್ನಕ್ಕೆ ಹಳೆ ದ್ವೇಷವೇ ಕಾರಣ

ಬಂಟ್ವಾಳ, ಡಿಸೆಂಬರ್ 14 : ಬಂಟ್ವಾಳದ ರೌಡಿ ಶೀಟರ್ ಹನೀಫ್ ಕೊಲೆ ಯತ್ನ ಪ್ರಕರಣದಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸೆಂಬರ್ 9ರ ಬೆಳಗ್ಗೆ 11 ಗಂಟೆಗೆ ಹನೀಫ್ ಕೊಲೆ ಯತ್ನ ನಡೆದಿತ್ತು.

ಖಲಂದರ್ ಶಾಫಿ, ಅನ್ವರ್ ಶಾಹಿದ್, ಸಿದ್ದಿಕ್, ಅರಾತ್, ನಾಸಿರ್ ಹುಸೈನ್, ಇಮ್ರಾನ್ ಬಂಧಿತ ಆರೋಪಿಗಳು. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳನ್ನು ಡಿಸೆಂಬರ್ 26ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. [ಬಂಟ್ವಾಳ : ರೌಡಿ ಶೀಟರ್ ಕೊಲೆ ಯತ್ನ]

ಈ ಕೊಲೆಯತ್ನ ಪ್ರಕರಣದಲ್ಲಿ ಶಂಶುದ್ದೀನ್ ಎಂಬ ಆರೋಪಿಯೂ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಹನೀಫ್ ಕೊಲೆ ಯತ್ನ ನಡೆದ ಬಳಿಕ ಆರೋಪಿಗಳು ಬಳಸಿದ ಕಾರು ಬಿ.ಸಿ.ರೋಡ್‌ನ ಗಾಣದಪಡ್ಪು ಗ್ಯಾರೇಜೊಂದರ ಬಳಿ ಪತ್ತೆಯಾಗಿತ್ತು. ಕಾರಿನಲ್ಲಿದ್ದ 2 ತಲವಾರು ಮತ್ತು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

arrest

ಹನೀಫ್ ಜೈಲು ಸೇರಿದ್ದ : 2014, ಜೂ.21ರಂದು ನೆತ್ತರಕೆರೆ ಸಮೀಪ ನಡೆದ ಆಟೋ ಚಾಲಕ ಮುಹಮ್ಮದ್ ರಿಫಾಯಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹನೀಫ್ ಬೆಳಗಾವಿ ಜೈಲಿನಲ್ಲಿದ್ದ, ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದ್ದ ಈತನನ್ನು ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಲು ಯತ್ನಿಸಲಾಗಿತ್ತು. [ಅತ್ಯಾಚಾರ ಆರೋಪಿ ಅಬೂಬಕರ್ ನನ್ನು ಬಂಧಿಸಿದ್ದು ತಪ್ಪಾ ಸಚಿವರೇ?]

ಡಿಸೆಂಬರ್ 9ರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾರಿಪ್ಪಳದಲ್ಲಿರುವ ತನ್ನ ಮನೆಯಿಂದ ಹನೀಫ್ ಬರುತ್ತಿದ್ದಾಗ, ಕಾರಿನಲ್ಲಿ ಬಂದ ಆರೋಪಿಗಳು ಹನೀಫ್‌ಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು. ಗಾಯಗೊಂಡ ಹನೀಫ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+