ಸಿದ್ಧಾರ್ಥ ದೇಹವನ್ನು ಪತ್ತೆ ಮಾಡಿದ ಮೀನುಗಾರನ ಮಾತುಗಳು

ಮಂಗಳೂರು, ಜುಲೈ 31: ಮಂಗಳವಾರದಿಂದಲೂ ವ್ಯಕ್ತಿಯೊಬ್ಬರು ನೀರಿಗೆ ಹಾರಿದ್ದನ್ನು ಮೀನುಗಾರನೊಬ್ಬ ನೋಡಿದ್ದ ಎನ್ನುವ ವಿಚಾರ ಹರಿದಾಡಿತ್ತು. ಬಳಿಕ ಇಲ್ಲ ಅದು ಸುಳ್ಳು ಸುದ್ದಿ ಎಂದು ದೃಢಪಟ್ಟಿತ್ತು.

ಸಿದ್ಧಾರ್ಥ ದೇಹವನ್ನು ನದಿಯಲ್ಲಿ ನೋಡಿ ಮೇಲಕ್ಕೆತ್ತಿದ ಮೀನುಗಾರ ಹೇಳಿದ್ದು ಇಷ್ಟು. ಮೀನುಗಾರ ರಿತೇಶ್ ಎಂಬವರು ಅನುಮಾನದ ಮೇರೆಗೆ ಡೆಡ್ ಬಾಡಿಯನ್ನು ದಡಕ್ಕೆ ತಂದಿದ್ದಾರೆ.

ಮೀನು ಹಿಡಿಯಲು ಮೂವರು ದೋಣಿಯಲ್ಲಿ ಬೆಳಗ್ಗೆ 6 ಗಂಟೆ ಆಸುಪಾಸಿನಲ್ಲಿ ಹೋಗುತ್ತಿದ್ದೆವು. ನದಿ ಮಧ್ಯದಲ್ಲಿ ದೇಹವೊಂದು ತೇಲುತ್ತಿರುವುದು ಕಂಡು ಬಂತು ಬಳಿಕ ನಿನ್ನೆಯಿಂದ ಸಿದ್ಧಾರ್ಥ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದುದರಿಂದ ಅವರದ್ದೇ ದೇಹವಿರಬಹುದು ಅಂದುಕೊಂಡೆವು.

Ritesh Who Was With Two Other Fishermen Found The Siddhartha Dead Body

ದೋಣಿಯ ಬದಿಯಲ್ಲಿ ಶವವನ್ನು ಹಿಡಿದುಕೊಂಡು ದಡಕ್ಕೆ ತಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆವು, ತಕ್ಷಣವೇ ರೌಂಡ್ಸ್ ನಲ್ಲಿರುವ ಪೊಲೀಸರಿಬ್ಬರು ಬಂದರು. ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಅವರೆಲ್ಲ ಬಂದಿದ್ದಾರೆ ಎಂದು ರಿತೇಶ್ ತಿಳಿಸಿದ್ದಾರೆ.

ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. 11 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಮೃತದೇಹ ರವಾನಿಸಲಾಗುತ್ತದೆ.

ನದಿಗೆ ಹಾರಿದ್ದಾರೆ ಎನ್ನಲಾಗಿದ್ದ ಪ್ರದೇಶದಿಂದ 4-5 ಕಿ.ಮೀ ದೂರದಲ್ಲಿ ಮೃತದೇಹ ಸಿಕ್ಕಿದೆ. ಸ್ಥಳೀಯರಾಗಿರುವ ನಮಗೆ ಶೋಧ ಕಾರ್ಯ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಹೀಗಾಗಿ 4 ದೋಣಿಗಳ ಮೂಲಕ ತೆರಳಿ ಮಂಗಳವಾರವೂ ಹುಡುಕಾಟ ನಡೆಸಿದ್ದೆವು.

ಸಿದ್ಧಾರ್ಥ್ ಮೃತದೇಹ ದೊರೆತಿದ್ದ ಜಾಗವು 20-25 ಅಡಿ ಆಳವಿದ್ದು, ಮೃತದೇಹ ಸಿಕ್ಕಿದ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ 18-24 ಗಂಟೆ ಮೇಲೆ ಬರಲು ಬೇಕಾಗುತ್ತದೆ ಎಂಬುದು ನಮ್ಮ ಅಂದಾಜು. ಇಷ್ಟು ಗಂಟೆಯ ಬಳಿಕ ಮೃತದೇಹ ಊದಿಕೊಳ್ಳುತ್ತದೆ. ಹೀಗಾಗಿ ಅದು ನೀರಿನಿಂದ ಮೇಲೆ ಬರುತ್ತವೆ ಎಂದು ಶಾಸಕ ಯುಟಿ ಖಾದರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+