• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂ.30: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಡಿಕೇರಿ ಗಡಿ ಭಾಗದಲ್ಲಾದ ಭೂಕಂಪನ ಸ್ಥಳೀಯ 10 ಕಿ.ಮೀ ವ್ಯಾಪ್ತಿಯ ಜನರನ್ನು ಆತಂಕಕ್ಕೆ ದೂಡಿದೆ. ವಾರದೊಳಗೆ ಮೂರು ಬಾರಿ ಭೂಮಿ ಕಂಪಿಸಿದ್ದು ಹಲವು ಮನೆಗಳು ಬಿರುಕು ಬಿಟ್ಟಿದೆ. ಭೂಕಂಪ ಆಗುವ ಭಯದಿಂದ ಗಡಿಭಾಗದ ಕೆಲ ಮನೆಯ ಹಿರಿಯರು ಮನೆ ಬಿಟ್ಟು ಸಂಬಂಧಿಗಳ ಮನೆಗಳನ್ನು ಆಶ್ರಯಿಸಿದ್ದಾರೆ. ನಾಲ್ಕು ವರ್ಷ ಗಳ ಹಿಂದೆ ನಡೆದ ಮಹಾ ಮೇಘಸ್ಫೋಟದ ಭಯ ಜನರನ್ನು ಮತ್ತೆ ಆವರಿಸಿದೆ. ಈ ಗಡಿಭಾಗದಲ್ಲಿ ಪದೇ ಪದೇ ಭೂಕಂಪನ ನಡೆಯುತ್ತಿರುವ ಬಗ್ಗೆ ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಫ್ರೊ.ಕೆ.ವಿ ರಾವ್ 'ಒನ್ಇಂಡಿಯಾ ಕನ್ನಡ'ಕ್ಕೆ ವಿಸ್ತಾರವಾದ ಮಾಹಿತಿ ನೀಡಿದ್ದಾರೆ.

ಈಗಿನ ಅಧ್ಯಯನ ದ ಪ್ರಕಾರ ಕರಾವಳಿ ಅಥವಾ ಕರ್ನಾಟಕಕ್ಕೆ ಭೂಕಂಪನ ಅಷ್ಟರಮಟ್ಟಿಗೆ ಅಪಾಯ ತರುವ ಲಕ್ಷಣಗಳಿಲ್ಲ. ಆದರೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಪಾಯ ಉಂಟಾಗಬಹುದೇ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಅಥವಾ ಕರಾವಳಿ ಜಿಲ್ಲೆ ಪಶ್ಚಿಮ ಘಟ್ಟಗಳಿಂದ ಆವೃತವಾಗಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನೇತ್ರಾವತಿ ಜಿಲ್ಲೆಯಲ್ಲಿ ಹರಿಯುತ್ತ ಸಮುದ್ರವನ್ನು ಸೇರುತ್ತದೆ. ಮಡಿಕೇರಿಯೂ ಕಾವೇರಿ ಉಗಮವಾಗಿ ಸಮುದ್ರವನ್ನು ಸೇರುತ್ತದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನದಿ ಹುಟ್ಟುವ ಜಾಗಗಳನ್ನು ಸುರಕ್ಷಿತವಾಗಿ ಇಡಬೇಕು.ಅಲ್ಲಿ ಪ್ರಕೃತಿಯ ಸಹಜ ಪ್ರಕ್ರಿಯೆಗೆ ನಾವು ಕೈ ಹಾಕಬಾರದು. ಅತಿಯಾದ ಬೋರ್ವೆಲ್ ಕೊರೆಯುವುದು ಕೂಡ ಭೂಕಂಪನಕ್ಕೆ ಕಾರಣವಾಗಬಹುದು ಅಂತಾ ಫ್ರೊ.ಕೆವಿ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ದ.ಕ, ಕೊಡಗು ಗಡಿಭಾಗದಲ್ಲೂ ಭೂಕಂಪನ: ಮನೆಗಳಿಗೆ ಹಾನಿದ.ಕ, ಕೊಡಗು ಗಡಿಭಾಗದಲ್ಲೂ ಭೂಕಂಪನ: ಮನೆಗಳಿಗೆ ಹಾನಿ

ಕರ್ನಾಟಕದಲ್ಲಾದ ಭೂಕಂಪನದಲ್ಲಿ ಅಪಾಯ ಕಡಿಮೆ

ಕರ್ನಾಟಕದಲ್ಲಾದ ಭೂಕಂಪನದಲ್ಲಿ ಅಪಾಯ ಕಡಿಮೆ

ಭೂಮಿಯ ರಚನೆ ಈರುಳ್ಳಿ ರೀತಿಯ ಇದೆ. ಮಣ್ಣು ಪದರ ಪದರವಾಗಿ ವಿಂಗಡನೆಯಾಗಿದೆ. ಭೂಕಂಪ ಆಗಲು ಬೇರೆ ಬೇರೆ ಕಾರಣಗಳಿವೆ. ಭೂಕಂಪದಲ್ಲೂ ವಿವಿಧ ವಿಭಾಗಗಳಿವೆ. ಹಿಮಾಲಯ ಪರ್ವತಶ್ರೇಣಿಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಇದೇ ಮಾದರಿಯಲ್ಲಿ ಭೂಕಂಪನ ನಡೆದಿದೆ. ಇದರಿಂದ ಭೂಕುಸಿತವೂ ಆಗಿದೆ. ಆದರೆ ಕರ್ನಾಟಕದಲ್ಲಾದ ಭೂಕಂಪನದಲ್ಲಿ ಅಪಾಯ ಕಡಿಮೆ. ಆದರೆ, ಭವಿಷ್ಯದಲ್ಲಿ ತೀವ್ರತೆ ಜಾಸ್ತಿ ಆಗುವ ಸಂಭವವೂ ಇದೆ ಅಂತಾ ಕೆ.ವಿ ರಾವ್ ಹೇಳಿದ್ದಾರೆ.

ರಿಕ್ಟರ್ ಮಾಪಕ 6,7, 8, ಅಥವಾ ಅದಕ್ಕಿಂತ ಹೆಚ್ಚು ಭೂ ಕಂಪನ ಆಗೋದು ಅಪಾಯವಾಗಿದೆ. ರಿಕ್ಟರ್ ಮಾಪಕ ಎರಡು ಮೂರು ಸೂಚಂಕ ಇರೋದು ಅಪಾಯ ಕಡಿಮೆಯ ಸೂಚನೆಯಾಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗಿ ಗಡಿಭಾಗ ಅಂತಹುದೇ ಕಡಿಮೆ ಅಪಾಯದ ಮಾಪಕವನ್ನು ತೋರಿಸಿದೆ.ಇದರ ಸೂಚನೆ ಎಂಬಂತೆ ಭೂಮಿ‌ ಕಂಪಿಸಿದಾಗ ಮನೆಯಲ್ಲಿ ಕಂಪನವಾಗುವುದು, ಕಂಪನದಿಂದ ಪಾತ್ರೆಗಳು ಬೀಳುವುದು ಅಥವಾ ರಸ್ತೆಗಳಲ್ಲಿ ಸಣ್ಣಮಟ್ಟದ ಬಿರುಕು ಉಂಟು ಮಾಡುತ್ತದೆ.‌ಇದು ಅಂತಹ ಅಪಾಯವನ್ನು ತರುವುದಿಲ್ಲ ಅಂತಾ ಫ್ರೊ.ಕೆ.ವಿ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಗೋವಾದಲ್ಲಿ ಸ್ನೇಹಿತರೊಂದಿಗೆ ಮೋಜು, ಮಸ್ತಿ-ಹಣ ಖಾಲಿ ಆದಾಗ ಕಿಡ್ನಾಪ್ ನಾಟಕಗೋವಾದಲ್ಲಿ ಸ್ನೇಹಿತರೊಂದಿಗೆ ಮೋಜು, ಮಸ್ತಿ-ಹಣ ಖಾಲಿ ಆದಾಗ ಕಿಡ್ನಾಪ್ ನಾಟಕ

ಕಾಡು ಕಡಿದು ರೆಸಾರ್ಟ್ ನಿರ್ಮಾಣ

ಕಾಡು ಕಡಿದು ರೆಸಾರ್ಟ್ ನಿರ್ಮಾಣ

ಪಶ್ಚಿಮ ಘಟ್ಟದಲ್ಲಿ ಉಗಮವಾಗುವ ಕಾವೇರಿ ನದಿ ಬಹಳ ವಿಸ್ತಾರವಾಗಿ ಹರಿಯುತ್ತದೆ, ನದಿ ಉಗಮದ ಪ್ರದೇಶದಲ್ಲಿ ಕಾಡು ಕಡಿದು ರೆಸಾರ್ಟ್ ನಿರ್ಮಾಣ ಮಾಡಿ ಭೂಮಿಯ ಮೇಲ್ಪದರವನ್ನು ಹಾಳು ಮಾಡಿದ ತಕ್ಷಣ ಕಂಪನ ಆಗುತ್ತದೆ ಅಂತಾ ಕೆ.ವಿ ರಾವ್ ಹೇಳಿದ್ದಾರೆ.

ಮೊದಲ ವರ್ಷ ಪ್ರವಾಹದ ರೀತಿಯ ವಾತಾವರಣ

ಮೊದಲ ವರ್ಷ ಪ್ರವಾಹದ ರೀತಿಯ ವಾತಾವರಣ

ಜಪಾನ್ ನಲ್ಲಿ ಭೂಕಂಪನ ಆಗುವುದು ಸಾಮಾನ್ಯ. ಅಲ್ಲಿಯ ಭೂಕಂಪಕ್ಕೂ ಇಲ್ಲಿಯ ಭೂಕಂಪಕ್ಕೂ ವ್ಯತ್ಯಾಸ ಇದೆ. ಜಪಾನಲ್ಲಿ ಭೂಕಂಪನಕ್ಕೆ ತಯಾರಾಗಿ ಇರುತ್ತಾರೆ. ಜಪಾನ್ ಭೂಕಂಪದ ವಲಯ,

ನಾವು ನಮ್ಮ ಭೂಮಿಯನ್ನು ಭೂಕಂಪನದ ವಲಯ ಮಾಡಬಾರದು. ಸುಳ್ಯ ಮತ್ತು ಮಡಿಕೇರಿ ಭಾಗದಲ್ಲಿ ಮೊದಲು ಈ ರೀತಿಯ ಭೂಕಂಪನಗಳು ನಡಿತಾ ಇರಲಿಲ್ಲ. ಸುಳ್ಯದಲ್ಲಿ ಭೂಕುಸಿತ ವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ರಸ್ತೆಗಳನ್ನಯ ಮಾಡುವಾಗ, ಯೋಜನೆಗಳನ್ನು ಗುಡ್ಡ ಪ್ರದೇಶದಲ್ಲಿ ತರುವಾಗ, ತೋಟ ಮಾಡುವಾಗ ಭೂಮಿ ಏನಾಗಿದೆ ಮತ್ತು ಅದರ ಪರಿಣಾಮ ಏನು ಯೋಚನೆ ಮಾಡಬೇಕು.ಇಷ್ಟು ವರ್ಷದವರೆಗೆ ಗಡಿ ಭಾಗದಲ್ಲಿ ಏನೂ ಸಮಸ್ಯೆ ಇರಲಿಲ್ಲ. ಈ ವರ್ಷ ಆರಂಭವಾಗಿದೆ. ಮೊದಲ ವರ್ಷ ಪ್ರವಾಹದ ರೀತಿಯ ವಾತಾವರಣ ಕಂಡು ಬಂದಿತ್ತು. ಆಗ ವಿಜ್ಞಾನಿಗಳು ಬಂದು ಭೂಕುಸಿತಕ್ಕೆ ಏನು ಕಾರಣ ಎಂಬುದರ ಬಗ್ಗೆ ವರದಿ ತಯಾರಿಸಿದ್ದರು.

ಮನುಷ್ಯರಿಗೆ ಭೂಕಂಪನವನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ

ಮನುಷ್ಯರಿಗೆ ಭೂಕಂಪನವನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ

ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ಹೋಗಿ ಅಲ್ಲಿ ಸಮಸ್ಯೆಗಳ ಬಗ್ಗೆ ವರದಿಯನ್ನು ಮಾಡಿದ್ದರು. ಆ ಬಳಿಕ ಚಾರ್ಮಾಡಿ ಘಾಟ್ ಅಲ್ಲಿ ಭೂಕುಸಿತ ಸರ್ವೇಸಾಮಾನ್ಯ ಆಗಿದೆ. ಶಿರಡಿ ಘಾಟ್ ನಲ್ಲಿ ಈಗ ಅದೇ ಆರಂಭವಾಗಿದೆ. ಇದು ಎಲ್ಲಾ ಸರಿ ಇಲ್ಲ ಅನ್ನೋದೇ ಸೂಚನೆ. ಈ ಸೂಚನೆ ಬರುವಾಗಲೇ ನಾವು ಜಾಗೃತರಾಗಿರಬೇಕು. ಈಗಲೂ ವಾತವರಣ ಸರಿಮಾಡಬಹುದು. ಈಗಲೂ ಸಮಯ ಮಿಂಚಿಲ್ಲ. ಈಗ ಸಣ್ಣ ಮಟ್ಟದಲ್ಲಿ ಆಗುತ್ತಿದೆ. ದೊಡ್ಡಮಟ್ಟದಲ್ಲಿ ಆಗುವ ಮುಂಚೆ ನಾವು ಎಚ್ಚೆತ್ತುಕೊಳ್ಳಬೇಕು ಅಂತಾ ಫ್ರೊ.ಕೆ.ವಿ.ರಾವ್ ಹೇಳಿದ್ದಾರೆ.

ಮನುಷ್ಯರಿಗೆ ಭೂಕಂಪನವನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಪ್ರಾಣಿ-ಪಕ್ಷಿಗಳಿಗೆ ಇದರ ಅರಿವು ಇದೆ. ಹೀಗಾಗಿ ಕಂಪನವಾಗುವ ಮೊದಲು ಒಂದು ಸುರಕ್ಷಿತ ಪ್ರದೇಶಗಳಿಗೆ ಹೋಗುತ್ತದೆ. ಸಮುದ್ರದಲ್ಲಿದ್ದ ಮೀನುಗಳು ಬೇರೆ ವಲಯಕ್ಕೆ ಹೋಗುತ್ತದೆ. ಇದು ಹೇಗೆ ಅನ್ನೋದನ್ನ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಭೂಕಂಪನದ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಂಪನ ಆದ ಪ್ರದೇಶದ ಭೂಮಿಯ ಪರಿಶೀಲನೆ ಮಾಡಬೇಕಾಗುತ್ತದೆ ಮತ್ತು ಅದರ ಕೆಳಗಿನ ಪ್ರದೇಶಗಳ ಬಗ್ಗೆ ಹೆಚ್ಚು ಮುಂಜಾಗ್ರತೆ ವಹಿಸಬೇಕಾಗುತ್ತದೆ ಅಂತಾ ಅವರು ಹೇಳಿದ್ದಾರೆ.

Recommended Video

   ಉದಯಪುರ್ ಟೈಲರ್ ಹತ್ಯೆ ನಂತರ ಕರ್ನಾಟಕದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ | Oneindia Kannada
   English summary
   Dakshina Kannada district and Madikeri border people are terrified by earthquake. senior scientist at the pilikula science center in mangaluru Pro KV Rao explained the reson of Earthquake.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X