ಅತ್ಯಾಚಾರವೆಸಗಿದ್ದ ಆರೋಪಿ ಪೊಲೀಸ್ ಹಿಡಿತದಿಂದ ಪರಾರಿ

ಸುರತ್ಕಲ್, ಜು. 25 : ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಸುರತ್ಕಲ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಗುರುವಾರ ರಾತ್ರಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ರಾಮನಗರ ನಿವಾಸಿ ಸುರೇಶ್ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿ ರಾತ್ರಿ 8.30ರ ಸುಮಾರಿಗೆ ಕದ್ರಿ ಕಂಬ್ಳದ ಕೋಸ್ಮಾಲೇನ್‌ನಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಮರಳಿ ಜೈಲಿಗೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.

ವಿಚಾರಣಾಧೀನ ಆರೋಪಿ ಪರಾರಿಯಾಗಿರುವ ಬಗ್ಗೆ ನಗರದ ಎಲ್ಲ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಆರೋಪಿ ಮರುಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಸುರೇಶ್ ತಾನು ಕೆಲಸ ಮಾಡುತ್ತಿದ್ದ ಮಾಲಿಕನ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಬಾಲಕಿಯ ತಂದೆ ದೂರು ನೀಡಿದ್ದರು. [ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್]

Rapist escapes from police custody in Suratkal

ರಾಮನಗರ ಮೂಲದ ಈಗ ಚೇಳಾರು ರೈಲ್ವೆ ಸೇತುವೆ ಬಳಿಯ ನಿವಾಸಿ ಬಾಲಕಿಯ ತಂದೆ ಇಂಟರ್‌ಲಾಕ್ ಅಳವಡಿಸುವ ಗುತ್ತಿಗೆದಾರನಾಗಿದ್ದು, ಸುರೇಶ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ. ಬಾಲಕಿಯ ತಂದೆ ಕೆಲಸದ ಸ್ಥಳಗಳಿಗೆ ಹೋದಾಗ ಸುರೇಶ್ ಮಾಲಿಕನ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಹೊಂಚುಹಾಕಿದ್ದ.

ಮನೆಯಲ್ಲಿ ಪತ್ನಿ ಮತ್ತು ಮಗಳು ಇರುತ್ತಿದ್ದುದನ್ನು ಗಮನಿಸಿದ್ದ ಸುರೇಶ್, ಬಾಲಕಿ ಏಕಾಂಗಿಯಾಗಿರುವಾಗ ಆಕೆಯ ಮೇಲೆ ಮೂರು ತಿಂಗಳಿನಿಂದ ಅತ್ಯಾಚಾರ ಎಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿ, ಬಳಿಕ ಪರಾರಿಯಾಗಿದ್ದ. ಸುರತ್ಕಲ್ ಪಿಐ ಚೆಲುವರಾಜ್ ಮತ್ತು ಸಿಬ್ಬಂದಿ ಆರೋಪಿಯನ್ನು ಗುರುವಾರ ಹಳೆಯಂಗಡಿ ಬಳಿ ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+