ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂದ್: ಸಂಘ ಪರಿವಾರದ ವಿರುದ್ಧ ರೈ, ಪೂಜಾರಿ ಅಸಮಾಧಾನ

ಸಂಘ ಪರಿವಾರಗಳು ಅಸ್ತಿತ್ವ ಸಾಧಿಸುವುದಕ್ಕೋಸ್ಕರ ಬಂದ್ ಗೆ ಕರೆ ನೀಡಿವೆ ಎಂದು ಕಾಂಗ್ರೆಸ್ ನಾಯಕರಾದ ಅರಣ್ಯ ಸಚಿವ ರಮಾನಾಥ್ ರೈ ಹಾಗೂ ಪೂಜಾರಿ ಹೇಳಿಕೆ.

|
Google Oneindia Kannada News

ಮಂಗಳೂರು, ಫೆಬ್ರವರಿ 24 : 'ಕೇರಳ ಮುಖ್ಯಮಂತ್ರಿ ಪಿಣರಾಯ್ ಅವರು ಸಿಪಿಎಂ ಸಮಾರಂಭಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಘ ಪರಿವಾರ ಫೆ. 25ರಂದು ಮಂಗಳೂರು ಬಂದ್ ಗೆ ಕರೆ ನೀಡುವುದರ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದೆ' ಎಂದು ಅರಣ್ಯ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಸಂಘ ಪರಿವಾರ ಬಂದ್ ಕರೆ ನೀಡಿರುವುದು ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ. ಇದರಿಂದ ಅಮಾಯಕರಿಗೆ ತೊಂದರೆ ಆಗುತ್ತದೆ. ಸಂಘ ಪರಿವಾರ ತನ್ನ ಅಸ್ತಿತ್ವಕ್ಕೆ ಹೋರಾಡುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ. ಕಿಡಿಗೇಡಿಗಳನ್ನು ಪ್ರಚೋದಕರನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.['ಪಿಣರಾಯಿ ಬಂದರೆ ತೊಂದರೆ ಗ್ಯಾರಂಟಿ' ಜಗದೀಶ್ ಶೇಣವ ಎಚ್ಚರಿಕೆ]

Ramanath Rai, Pujari express displesure regarding the bandh called by Sangh Pariwar

ಪೂಜಾರಿ ಕಿಡಿ: ಇದೇ ವೇಳೆ ಬಂದ್ ಕುರಿತು ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ, ' ಬಂದ್ ಗೆ ಕರೆ ನೀಡುವ ಮೂಲಕ ಸಂಘಪರಿವಾರ ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಸಂಘಪರಿವಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಅವರು ಬಂದ್ ನಡೆಸಿದ್ದಲ್ಲಿ ಆಗುವ ನಷ್ಟವನ್ನ ಸಂಘಪರಿವಾರ ಭರಿಸಬೇಕೆಂದು ಆಗ್ರಹಿಸಿದರು.[ಪಿಣರಾಯಿ ಕಾರ್ಯಕ್ರಮಕ್ಕೆ 3,400 ಪೊಲೀಸರಿಂದ ಭದ್ರತೆ]

Ramanath Rai, Pujari express displesure regarding the bandh called by Sangh Pariwar

ಸುಪ್ರೀಂ ಕೋರ್ಟ್ ನ್ನ ಅವಮಾನ ಮಾಡುವ ಮೂಲಕ ಸಂಘಪರಿವಾರ ಇಡೀ ದೇಶವನ್ನೇ ಅಪಮಾನ ಮಾಡಿದೆ. ಕೂಡಲೇ ಸಂಘಪರಿವಾರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ ಅವರು ಒಂದು ವೇಳೆ ಕ್ಷಮೆ ಕೇಳದಿದ್ದರೆ ದೇಶದ ಜನರೇ ತಕ್ಕ ಉತ್ತರ ನೀಡುತ್ತಾರೆ ' ಎಂದು ಎಚ್ಚರಿಕೆ ನೀಡಿದರು.[ದಕ್ಷಿಣ ಕನ್ನಡ ಬಂದ್ ಬಿಸಿ ಹೆಚ್ಚಳ : ಮದ್ಯ ಮಾರಾಟ ನಿಷೇಧ]
ಇದೇ ವೇಳೆ ಪಿಯುಸಿಎಲ್ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಸಹ ಬಂದ್ ಗೆ ಆಕ್ರೋಶ ವ್ಯಕ್ತಪಡಿಸಿವೆ.[ಉಳ್ಳಾಲ ವಲಯದ ಸಿಪಿಐಂ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ]

English summary
Karnataka state forest minister Ramanath Rai and senior congress leader Janardhana Pujari expressed their displeasure over the bandh on 25th Feb called by Sangha Pariwar as a symbol of protest against the Kerala CM Pinaraya's attendence in CPM party function in Mangaluru which will be staged on the same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X