ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಇಫ್ತಾರ್ ತಿನಿಸುಗಳ ಘಮ ಘಮ

|
Google Oneindia Kannada News

ಮಂಗಳೂರು, ಜೂನ್ 10: ಇದು ಮುಸ್ಲಿಂ ಸಮುದಾಯದವರ ಪವಿತ್ರ ಮಾಸ ರಂಜಾನ್. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಟ್ಟುನಿಟ್ಟಿನ ಉಪವಾಸ, ನಮಾಜ್, ನಂತರ ವಿಶೇಷ ತಿನಿಸುಗಳ ಸೇವನೆ ಈ ಆಚರಣೆಯ ಸ್ಪೆಷಾಲಿಟಿ.

ಈ ಹಿನ್ನಲೆಯಲ್ಲಿ ವಿಶೇಷ ಇಫ್ತಾರ್ ತಿನಿಸುಗಳು ಈಗ ಎಲ್ಲೆಂದರಲ್ಲಿ ದೊರೆಯುತ್ತಿವೆ. ಜತೆಗೆ ಎಲ್ಲರಿಗೂ ತಲುಪುತ್ತಿವೆ. ಸಾಂಪ್ರದಾಯಿಕ ತಿನಿಸುಗಳು ಜತೆಗೆ ಮುಂಬಯಿ, ನಾರ್ತ್ ಇಂಡಿಯನ್ ತಿಂಡಿಗಳೂ ಸೇರ್ಪಡೆಗೊಂಡು ತಿಂಡಿಪ್ರಿಯರ ಹೊಟ್ಟೆತಣಿಸುತ್ತಿದೆ.

ರಮ್ಜಾನ್ ಮಾಸ ಮುಸ್ಲಿಮ್ ಬಾಂಧವರಿಗೆ ಪವಿತ್ರದ್ದಾಗಿದ್ದು ಸ್ನೇಹ, ಪ್ರೀತಿ, ಬಾಂಧವ್ಯ ತೋರಿಸಲು ಉತ್ತಮ ಸಮಯವಾಗಿರುತ್ತದೆ. ದಿನವೆಲ್ಲ ಉಪವಾಸವಿದ್ದು ಸಾಯಂಕಾಲ ಅತ್ಯದ್ಭುತ ತಿನಿಸುಗಳೊಂದಿಗೆ ಉಪವಾಸವನ್ನು ಅಂತ್ಯಗೊಳಿಸುವುದೂ ಈ ರಂಜಾನ್ ತಿಂಗಳ ಒಂದು ಸುಂದರವಾದ ಅನುಭವ.

 ಹೊಸ ಹೊಸ ರುಚಿಗಳ ಪರಿಚಯ

ಹೊಸ ಹೊಸ ರುಚಿಗಳ ಪರಿಚಯ

ರಮ್ಜಾನ್ ತಿಂಗಳಲ್ಲಿ ಮುಸ್ಲಿಮರು ಮನೆ ಮನೆಗಳಲ್ಲಿ ತಯಾರಿಸುವ ತಿಂಡಿ ತಿನಿಸುಗಳಿಗೆ ಸೇರ್ಪಡೆ ಎಂಬಂತೆ ಮಂಗಳೂರಿನ ಮಾಲ್, ಹೋಟೆಲ್ ಗಳಲ್ಲಿ ಹೊಸ ಹೊಸ ರುಚಿಗಳ ತಿಡಿಗಳ ಪರಿಚಯವಾಗಿದೆ.

ಫೋರಂ ಫುಡ್ ಸ್ಟ್ರೀಟ್

ಫೋರಂ ಫುಡ್ ಸ್ಟ್ರೀಟ್

ನಗರದಲ್ಲಿ ಫೋರಂ ಫುಡ್ ಸ್ಟ್ರೀಟ್ ಹೆಸರಿನಲ್ಲಿ ಸ್ಟಾಲ್ ಗಳನ್ನು ತೆರೆಯಲಾಗಿದೆ. ಜನರು ಸ್ಟಾಲ್ ಗಳತ್ತ ಬಂದು ರಮ್ಜಾನ್ ನಲ್ಲಿ ಮಾತ್ರ ಲಭಿಸುವ ವಿವಿಧ ಅಪೂರ್ವ ಭಕ್ಷ್ಯಗಳನ್ನು ಸವಿಯುತ್ತಿದ್ದಾರೆ.

ಸಂಜೆ 5ರಿಂದ ರಾತ್ರಿ 10ತನಕ

ಸಂಜೆ 5ರಿಂದ ರಾತ್ರಿ 10ತನಕ

ಟೌನ್ ಟೇಬಲ್ ರೆಸ್ಟೋರೆಂಟ್ , ಸುಲ್ತಾನ್ ಆಫ್ ಸ್ಪೈಸ್, ಫ್ಲೇವರ್ಸ್ ಆಫ್ ಅರೇಬಿಯಾ, ಚಿಕನ್ ಲಾಗುನ್, ಬಿರಿಯಾನಿ ಟೌನ್, ಬಿರಿಯಾನಿ ಟ್ರೀ ಮೊದಲಾದ ಸ್ಟಾಲ್ ಗಳು ಸಂಜೆ 5 ರಿಂದ ರಾತ್ರಿ 10ರ ತನಕ ವಿವಿಧ ಖಾದ್ಯಗಳಿಂದ ಘಮ ಘಮಿಸಿ, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

33 ಭಕ್ಷ್ಯಗಳ ಸಂಗಮ 'ಸೇವೋರಿ'

33 ಭಕ್ಷ್ಯಗಳ ಸಂಗಮ 'ಸೇವೋರಿ'

ಸಿಟಿ ಸೆಂಟರ್ ಮಾಲ್ ನಲ್ಲಿ ಸೇವೊರಿ ರೆಸ್ಟೋರೆಂಟ್ ನಿಂದ ಮೊದಲ ಬಾರಿಗೆ ಇಫ್ತಾರ್ ಫುಡ್ ಸ್ಟಾಲ್ ಹಾಕಲಾಗಿದೆ. ಹಲೀಮ್, ತಂಗ್ಡಿ ಕಬಾಬ್, ಐಶ್ ಸರಾಯ, ಬ್ರಾಸಾ ಮೊದಲಾದ ಅರೇಬಿಯನ್ ಖಾದ್ಯಗಳು, ಕೇರಳ, ಭಟ್ಕಳ, ಮಂಗಳೂರು ಮೂಲದ ಸುಮಾರು 33 ವಿವಿಧ ಭಕ್ಷ್ಯಗಳು ಇಲ್ಲಿ ಲಭ್ಯವಿವೆ. ಸಂಜೆ 5 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.

ಸಮಾಜ ಸೇವೆಗಾಗಿ ಆಹಾರ ಮಾರಾಟ

ಸಮಾಜ ಸೇವೆಗಾಗಿ ಆಹಾರ ಮಾರಾಟ

ಹಿಡಯ ಫೌಂಡೇಶನ್ ಎಂಬ ಚಾರಿಟಿ ಸಂಸ್ಥೆ ಮಾಲ್ ನಲ್ಲಿ ಶುಲ್ಕವಿಲ್ಲದೆ ಸ್ಟಾಲ್ ನೀಡಿದ್ದು, ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಭಕ್ಷ್ಯ ಗಳನ್ನೂ ಮಾರಾಟ ಮಾಡುತ್ತಾರೆ. ಇದರಿಂದ ಬರುವ ಮೊತ್ತವನ್ನು ಸಮಾಜ ಸೇವಾ ಕಾರ್ಯಗಳಿಗೆ ಬಳಸುತ್ತಾರೆ.

ಉಚಿತ ಇಫ್ತಾರ್

ಉಚಿತ ಇಫ್ತಾರ್

ಸಂಜೆ 4 ರಿಂದ ರಾತ್ರಿ 10 ತನಕ ಖ್ಯಾದ ಮಾರಾಟಕ್ಕಿವೆ. ಇದರಲ್ಲಿ ಬಂದ ಲಾಭದಲ್ಲಿ ಪ್ರತಿದಿನ 200 ರಷ್ಟು ಮತ್ತು ಶನಿವಾರ, ಭಾನುವಾರ 400 ರಷ್ಟು ಗ್ರಾಹಕರಿಗೆ ಉಚಿತ ಇಫ್ತಾರ್ ವ್ಯವಸ್ಥೆ ಮಾಡಲಾಗಿದೆ.

English summary
With thousands of devotees breaking their fast, Ramadan specialties are flooding the menus at some restaurants, while street smart entrepreneurs are cashing in on the Iftar feasts here in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X