ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ PFI ಮುಖಂಡರ ಮನೆ ಮೇಲೆ ಪೊಲೀಸರ ದಾಳಿ

|
Google Oneindia Kannada News

ಮಂಗಳೂರು, ಅಕ್ಟೋಬರ್ 13: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಕುರಿತು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ತೀರ್ಪು ಬಂದ ದಿನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ SDPI ಹಾಗೂ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆದಿದೆ.

ಗುರುವಾರ ಮಂಗಳೂರಿನ ಪೊಲೀಸರು ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಏಳೆಂಟು ಕಡೆ SDPI ಮತ್ತು ನಿಷೇಧಿತ PFI ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

Hijab Verdict: ಸುಪ್ರೀಂಕೋರ್ಟ್ ಹಿಜಾಬ್ ತೀರ್ಪು: ಸಿಜೆಐ ಪೀಠಕ್ಕೆ ವರ್ಗಾವಣೆHijab Verdict: ಸುಪ್ರೀಂಕೋರ್ಟ್ ಹಿಜಾಬ್ ತೀರ್ಪು: ಸಿಜೆಐ ಪೀಠಕ್ಕೆ ವರ್ಗಾವಣೆ

ಈ ದಾಳಿಯಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಐವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಯುಎಪಿಎ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

Raids on PFI leaders in Mangaluru, surathkal, Ullal and other places on Oct 13 morning; 5 detained

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಮನೆ ಮೇಲೂ ದಾಳಿ ನಡೆಸಲಾಗಿದೆ. ಸುರತ್ಕಲ್ ಪೊಲೀಸರು ದಾಳಿ ಮಾಡಿದ್ದು, ದಾಳಿ ವೇಳೆ ಅಬೂಬಕರ್ ಕುಳಾಯಿ ಮನೆಯಲ್ಲಿರಲಿಲ್ಲ ಎಂದು ತಿಳಿಬಂದಿದೆ.

ಹಿಂದೆ ಸೆಪ್ಟೆಂಬರ್ 27ರಂದ ದಾಳಿ ನಡೆಸಿದ್ದ ವೇಳೆ 26 ಮಂದಿಯನ್ನು ವಶಕ್ಕೆ ಪಡೆಯಲು ಪೊಲೀಸರು ಲಿಸ್ಟ್ ಮಾಡಿಕೊಂಡಿದ್ದರು. ಆ ಪೈಕಿ 12 ಮಂದಿ ತಪ್ಪಿಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ರಫೀಕ್, ಮೊಹಮ್ಮದ್ ಬಿಲಾಲ್, ಕಸಬಾ ಬೆಂಗ್ರೆ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಠಾಣೆ ಪೊಲೀಸರು ಮೊಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯಾ ಎಂಬವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಎಂಟು ಅಂಗ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ಸೆಪ್ಟೆಂಬರ್‌ 28ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಭಯೋತ್ಪಾದನೆಗೆ ಹಣದ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪದ ಹಿನ್ನೆಲೆಯಲ್ಲಿ ನಿಷೇಧ ಮಾಡಲಾಗಿತ್ತು.

ಪಿಎಫ್‌ಐ ನಿಷೇಧಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ವರ್ಷಗಳಿಂದಲೂ ಇಟ್ಟಿದ್ದ ಬೇಡಿಕೆ. ಈ ಸಂಘಟನೆಯ ವ್ಯವಹಾರಗಳ ಮೇಲೆ ಗಮನ ಇಟ್ಟು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಬಳಿಕವಷ್ಟೇ ಕೇಂದ್ರ ಸರಕಾರ ನಿಷೇಧದ ನಿರ್ಧಾರ ಮಾಡಿದೆ.

English summary
Police raids on PFI leaders in Dakshina kannada district including Mangaluru, Surathkal, Ullal and other places ion Oct 13 morning, 5 leader are detained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X