India
  • search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸ್ತಮುದ್ರಿಕೆಯ ನೃತ್ಯ; ಕಲಾಸಕ್ತರನ್ನು ಸೆಳೆದ ಪುತ್ತೂರಿನ ನಾಟ್ಯಗುರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 31; ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಕಲಾವಿದನ ಕಲಾ ಪ್ರದರ್ಶನಕ್ಕೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ಕಲೆಯನ್ನು ಅರಿತು, ಅಸ್ವಾದಿಸುವವರಿಗೂ ಅವಕಾಶವಿಲ್ಲವಾಗಿದೆ.

ಹಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿಯೇ ತಮ್ಮ ಕಲೆಯ ಪ್ರದರ್ಶನ ಮಾಡುತ್ತಿದ್ದಾರೆ. ಹೀಗೆ ನೃತ್ಯ ಗುರುವೊಬ್ಬರು ಮಾಡಿದ ಹಸ್ತಮುದ್ರೆಯ ನೃತ್ಯ ಭಾವ ಈಗ ಕಲಾರಸಿಕರ ಮನಸೂರೆಗೊಳಿಸಿದೆ.

ವೈರಲ್ ವಿಡಿಯೋ: ಹೋಳಿ ಸಂಭ್ರಮದಲ್ಲಿ ಲೇಂಗಿ ನೃತ್ಯ ಮಾಡಿದ ಶಾಸಕ ಭೀಮಾ ನಾಯ್ಕ್ ವೈರಲ್ ವಿಡಿಯೋ: ಹೋಳಿ ಸಂಭ್ರಮದಲ್ಲಿ ಲೇಂಗಿ ನೃತ್ಯ ಮಾಡಿದ ಶಾಸಕ ಭೀಮಾ ನಾಯ್ಕ್

ಕನ್ನಡದ ಪ್ರಸಿದ್ಧ ಕವಿ ಎಂ. ಎನ್. ವ್ಯಾಸರಾವ್ ರಚಿಸಿದ 'ನೀ ನಿಲ್ಲದೇ ನನಗೇನಿದೇ' ಎಂಬ ಭಾವಗೀತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೃತ್ಯಗುರು ಮಂಜುಳಾ ಸುಬ್ರಹ್ಮಣ್ಯ ಎಂಬುವವರು ಹಸ್ತ ಮುದ್ರೆ ನಾಟ್ಯಾಭಿನಯ ಮಾಡಿದ್ದಾರೆ.

ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೃತ್ಯ: ವೈರಲ್ ವಿಡಿಯೋಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೃತ್ಯ: ವೈರಲ್ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಂಜುಳಾ ಸುಬ್ರಹ್ಮಣ್ಯ ತಮ್ಮ ಅಭಿಲಾಷೆಯಂತೆ ಹಸ್ತಮುದ್ರೆಯ ಮೂಲಕ ನಾಟ್ಯದ ಅಭಿವ್ಯಕ್ತಿಯನ್ನು ಮೂಡಿಸಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.

ಮಂಗಳೂರು; ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿ ಮಂಗಳೂರು; ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿ

ಕೇವಲ ಹಸ್ತದ ಮೂಲಕವೇ ನಾಟ್ಯಾಭಿನಯ ಮಾಡಿದ ಮಂಜುಳಾ ಸುಬ್ರಹ್ಮಣ್ಯ ಕೇವಲ ಎಲ್ಇಡಿ ಸಣ್ಣ ಟಾರ್ಚ್ ಬಳಸಿ, ದೇಹವನ್ನು ಅಗೋಚರವಾಗಿಟ್ಟು, ಬರೀ ಕೈ ಚಲನೆಯಲ್ಲಿ ನೃತ್ಯ ಮೂಡಿಸಿದ್ದಾರೆ. ಈ ಸುಂದರ ಪರಿಕಲ್ಪನೆಯನ್ನು ಮಂಜುಳಾ ಸುಬ್ರಹ್ಮಣ್ಯ ಸಹೋದರ ಗಣೇಶ್ ಕುಮಾರ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

1.49 ನಿಮಿಷದ ಈ ವೀಡಿಯೋವನ್ನು ಮಂಜುಳಾ ಸುಬ್ರಮಣ್ಯ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೀಡಿಯೋ ನೋಡುವಾಗ ಅದ್ಭುತ ಎಂದೆನಿಸಿದರೂ, ಇದರ ಹಿಂದೆ ಬಹಳ ಪರಿಶ್ರಮವಿದೆ. ಕಲಾವಿದರಿಂದ ಮತ್ತಷ್ಟು ಸುಂದರ ಪರಿಕಲ್ಪನೆ ಮೂಡಿಬರಲಿ ಎನ್ನುವುದು ನಮ್ಮ ಆಶಯ.

English summary
Dakshuna Kannada district Puttur based artist Manjula Subrahmanya hasta mudrika dance went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X