ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಬರಿಮಲೆ ತೀರ್ಪನ್ನು ಮರು ಪರಿಶೀಲಿಸುವಂತೆ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ

|
Google Oneindia Kannada News

ಮಂಗಳೂರು, ಅಕ್ಟೋಬರ್. 15: ಶಬರಿಮಲೆ ವಿವಾದ ಶಮನವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಪ್ರತಿಭಟನೆಗಳು ಮುಂದುವರೆದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರಣಿ ಪ್ರತಿಭಟನೆಗಳು ಆರಂಭವಾಗಿವೆ.

ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಮರ ಪರಿಶೀಲಿಸಬೇಕೆಂದು ಒತ್ತಾಯಿಸಿ ಪುತ್ತೂರು ತಾಲೂಕು ಅಯ್ಯಪ್ಪ ಭಕ್ತ ವೃಂದದ ವತಿಯಿಂದ ಇಂದು ಸೋಮವಾರ (ಅ.15) ಪ್ರತಿಭಟನಾ ಸಭೆ ನಡೆಸಲಾಗಿದೆ.

'ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ''ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ'

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಹೊರಟ ಪ್ರತಿಭಟನಾಕಾರರು ಪುತ್ತೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

Protest against Sabarimala verdict in Puttur

ಧರ್ಮದ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶವನ್ನು ವಿರೋಧಿಸಿದ ಪ್ರತಿಭಟನಾಕಾರರು ಸುಪ್ರೀಕೋರ್ಟ್ ಶಬರಿಮಲೆ ಬಗ್ಗೆ ನೀಡಿದ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಕೇರಳ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸರಕಾರ ಕೂಡಲೇ ಹೊಸ ಆದೇಶವನ್ನು ಹೊರಡಿಸಬೇಕು.

ಶಬರಿಮಲೆಗೆ ಬರುವ ಮಹಿಳೆಯರನ್ನು ಕತ್ತರಿಸಿ ಎಂದ ಮಲಯಾಳಂ ನಟಶಬರಿಮಲೆಗೆ ಬರುವ ಮಹಿಳೆಯರನ್ನು ಕತ್ತರಿಸಿ ಎಂದ ಮಲಯಾಳಂ ನಟ

ಈ ಹಿಂದೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ತೀರ್ಪು ನೀಡಿದಾಗ ಕೂಡಲೇ ಕಾರ್ಯಪ್ರವೃತ್ತವಾದ ಸರಕಾರ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಮೂಲಕ ಮದ್ಯದಂಗಡಿಗೆ ಅನುಕೂಲ ಮಾಡಿಕೊಟ್ಟಿತ್ತು.

Protest against Sabarimala verdict in Puttur

ವಿದೇಶದಲ್ಲಿ 'ಸೇವ್ ಶಬರಿಮಲೆ' ಆರಂಭ: ರಸ್ತೆಗಿಳಿದು ಪ್ರತಿಭಟಿಸಿದ ಅಯ್ಯಪ್ಪ ಭಕ್ತರುವಿದೇಶದಲ್ಲಿ 'ಸೇವ್ ಶಬರಿಮಲೆ' ಆರಂಭ: ರಸ್ತೆಗಿಳಿದು ಪ್ರತಿಭಟಿಸಿದ ಅಯ್ಯಪ್ಪ ಭಕ್ತರು

ಅಯ್ಯಪ್ಪ ಭಕ್ತರು ಹಾಕುವ ಹುಂಡಿ ಹಣ ಹಾಗೂ ಯಾತ್ರೆಯ ಮೂಲಕ ಮಾಡುವಂತಹ ವ್ಯವಹಾರಗಳಿಂದಲೇ ಕೇರಳ ಸರಕಾರ ನಡೆಯುತ್ತಿದ್ದು, ಕೇರಳ ಸರಕಾರಕ್ಕೆ ಅಯ್ಯಪ್ಪ ಭಕ್ತರ ಋಣವಿದೆ ಎಂದು ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

English summary
Various Hindu organisations and Sabarimala devotees staged protest against SC verdict on Shabarimala on October 15 in Putturu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X