ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವೀಣ್ ಹತ್ಯೆ ಪ್ರಕರಣ: ಬೆಳ್ಳಾರೆಯಲ್ಲಿ ಪರಿಸ್ಥಿತಿ ಉದ್ವಿಗ್ನ, ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್‌

|
Google Oneindia Kannada News

ಮಂಗಳೂರು, ಜುಲೈ 27: ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಪೊಲೀಸರು ಮತ್ತಯ ಹಿಂದೂ ಸಂಘಟನೆ ಯುವಕರ ನಡುವೆ ವಾಗ್ವಾದ ನಡೆದಿದೆ. ಈ ವೇಳೇ ಕೆಲವರು ಪೊಲೀಸರತ್ತ ಕಲ್ಲುತೂರಾಟ ನಡೆಸಿದ್ದರಿಂದ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಈ ವೇಳೆ ಕಲ್ಲು ತೂರದಂತೆ ಮನವಿ ಮಾಡಿದರೂ ಬಗ್ಗದ ಕೆಲವು ಉದ್ರಿಕ್ತರ ಗುಂಪು ಕಲ್ಲು ತೂರುವುದನ್ನು ಮುಂದುವರಿಸಿದ್ದಕ್ಕೆ ಖಾಕಿ ಕಡೆ ಕೊನೆಗೆ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಘಟನೆಯಲ್ಲಿ ಪೊಲೀಸರ ಲಾಠಿ ಏಟಿನಿಂದ ಕೆಲವು ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಕೆಲವರು ಪೊಲೀಸರ ಏಟನ್ನು ತಾಳಲಾರದೆ ಸ್ಥಳದಿಂದ ಕಾಲ್ಕಿತ್ತರು.

ಬಿಜೆಪಿ ಯುವ ಮುಖಂಡನ ಹತ್ಯೆ, ಕೆಲವೆಡೆ 144 ಸೆಕ್ಷನ್ ಜಾರಿ, ಶಾಲೆಗಳಿಗೆ ರಜೆಬಿಜೆಪಿ ಯುವ ಮುಖಂಡನ ಹತ್ಯೆ, ಕೆಲವೆಡೆ 144 ಸೆಕ್ಷನ್ ಜಾರಿ, ಶಾಲೆಗಳಿಗೆ ರಜೆ

ಇನ್ನು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದನ್ನು ಖಂಡಿಸಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಪುತ್ತೂರು ಶಾಸಕ, ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಡಿದರು. ಅಲ್ಲದೆ ಇನ್ನೂ ಬಿಜೆಪಿ ನಾಯಕರು ಇನ್ನು ಮುಂದೆ ಕೇಸರಿ ಸಾಲು ಧರಿಸಿ ಮತ ಕೇಳಲು ಬರುವುದು ಬೇಡ, ನಿಮಗೆ ಹಿಂದೂಗಳಿಗೆ ರಕ್ಷಣ ಕೊಡಲು ಸಾಧ್ಯವಿಲ್ಲ ಎಂದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೇ ನೀಡಿ ಎಂದು ಆಕ್ರೋಶ ಹೊರ ಹಾಕಿದರು.

ನಾವು ಹಿಂದುವಿನ ಹತ್ಯೆಗೆ ನ್ಯಾಯ ಕೇಳಿ ಬಂದರೆ ಹೀಗೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಹೀಗೆ ಹೊಡೆದು ಮತ್ತೊಬ್ಬರನ್ನು ಹತ್ಯೆ ಮಾಡುತ್ತೀರಾ, ರಕ್ತ ಬರುವ ಹಾಗೆ ಹೊಡೆದ ನಂತರ ರಕ್ತ ಸುರಿದರೂ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಸೌಜನ್ಯವೂ ಇಲ್ಲ ಎಂದು ಪ್ರತಿಭಟನಾಕಾರರು ಪೊಲೀಸ್ ನಡೆಯನ್ನು ಟೀಕಿಸಿದರು.

Praveen Murder case: Police Lathi charge on Hindu Activists after stone Attack in Bellare

ಇನ್ನು ಪ್ರವೀಣ್ ನೆಟ್ಟಾರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಸೇರಿದಂತೆ ಹಲವು ನಾಯಕರು ಸ್ಥಳಕ್ಕೆ ಭೇಟಿ ನೀಡಲು ಯತ್ನಿಸಿದರು. ಈ ವೇಳೆ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಉದ್ವಿಗ್ನಗೊಂಡು ನಳಿನ್ ಕುಮಾರ್ ಕಟೀಲ್ ಕಾರಿನ ಮೇಲೆ ಮುಗಿಬಿದ್ದರು. ಕಾರನ್ನು ಪಲ್ಟಿ ಮಾಡಲೂ ಕೆಲವರು ಯತ್ನಿಸಿ, ಟೈರ್​ನಿಂದ ಗಾಳಿ ಹೊರಬಿಟ್ಟರು.

Breaking: ಬಿಜೆಪಿ ಮುಖಂಡರ ಮೇಲೆ ಕಾರ್ಯಕರ್ತರಿಂದ ಹಲ್ಲೆBreaking: ಬಿಜೆಪಿ ಮುಖಂಡರ ಮೇಲೆ ಕಾರ್ಯಕರ್ತರಿಂದ ಹಲ್ಲೆ

ಪರಿಸ್ಥಿತಿ ಕೈಮೀರುವುದು ಮನಗಂಡ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚೆದುರಿಸಿದರು. ಪೊಲೀಸ್ ಭದ್ರತೆಯಲ್ಲಿಯೇ ನಳಿನ್ ಕುಮಾರ್ ಕಟೀಲ್ ಸ್ಥಳದಿಂದ ಹೊರನಡೆದರು. ಬೆಳ್ಳಾರೆ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಿಗಿ ಬಂದೋಬಸ್ತ್​ ಹಾಕಲಾಗಿದೆ. ಎಲ್ಲಾ ಅಂಗಡಿಗಳನ್ನು ಮುಚ್ಚಿಸುತ್ತಿರುವ ಪೊಲೀಸರು ಗುಂಪು ಸೇರಿದ್ದ ಕಾರ್ಯಕರ್ತರನ್ನು ಲಾಠಿ ಬೀಸಿ ಚೆದುರಿಸುತ್ತಿದ್ದಾರೆ.

English summary
Police lathi-charge those protesting against the murder of BJP Yuva Morcha worker Praveen Nettar in Bellare of Dakshin Kannada district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X