ಅಪಘಾತ ತಡೆಯಲು ಎಚ್ ಡಿ ಕ್ಯಾಮರ ಅಳವಡಿಸಿದ ಪೊಲೀಸರು
ಮಂಗಳೂರು, ಜುಲೈ. 13 : ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿಸಿಆರ್ ವಾಹನಗಳಿಗೆ ಎಚ್ ಡಿ ಕಂಟ್ರೋಲೇಬಲ್ ಕ್ಯಾಮರಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ಕಾರ್ಯ ಆರಂಭ ಮಾಡಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಇದರ ಪ್ರಯೋಗ ಯಶಸ್ವಿಯಾಗಿದೆ.
ಅಪಘಾತಗಳು ಇತ್ತೀಚಿನ ದಿನಗಳಲ್ಲಿ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅಪಘಾತ ತಡೆಯಲು ಮುಂದಾಗಿರುವ ಮಂಗಳೂರು ಪೊಲೀಸರು ಈ ವಿನೂತನ ಕಾರ್ಯ ಕೈಗೊಂಡಿದ್ದಾರೆ. ಪ್ರಾಯೋಗಿಕವಾಗಿ ಪಾಂಡೇಶ್ವರ, ಉಳ್ಳಾಲ ಹಾಗೂ ಸುರತ್ಕಲ್ ಠಾಣೆಯ ಪಿಸಿಆರ್ ವಾಹನಗಳಿಗೆ ಈಗಾಗಲೇ ಕ್ಯಾಮರಗಳನ್ನು ಅಳವಡಿಸಲಾಗಿದೆ.[ನೀರು ಕೇಳಿದ್ರು, ಸರ್ಕಾರಿ ಉದ್ಯೋಗಿ ಮನೆ ದೋಚಿದ್ರು]

ಈ ಕ್ಯಾಮರಗಳು ಅಧಿಕ ಪಿಕ್ಚರ್ ಕ್ಲಾರಿಟಿ ಹೊಂದಿದ್ದು, ವಾಹನದ ಒಳಗಿನಿಂದಲೇ 360 ಡಿಗ್ರಿ ಸುತ್ತಳತೆಯಲ್ಲಿ 400 ಮೀ,ವರೆಗೆ ಕಾರ್ಯ ನಿರ್ವಹಣೆ ಮಾಡಬಲ್ಲುದಾಗಿದೆ. ಇನ್ನು ಇದರ ಸಂಪೂರ್ಣ ಚಿತ್ರಣ ಪಿಸಿಆರ್ ವಾಹನದೊಳಗಿನ ಮಾನಿಟರ್ನಲ್ಲಿ ಮೂಡುವ ಮೂಲಕ ಸಂಪೂರ್ಣ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.











Click it and Unblock the Notifications