• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಖಾದರ್ ಮನೆ ಮುಂದೆಯೇ ಹದಗೆಟ್ಟ ರಸ್ತೆ! ಕಣ್ಮುಚ್ಚಿರುವ ಪಾಲಿಕೆ

By ಕಿರಣ್ ಸಿರ್ಸಿಕರ್‌
|

ಮಂಗಳೂರು, ಸೆಪ್ಟಂಬರ್ 22: ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆ ಹೊಂದುವ ಕನಸು ಹೊತ್ತಿದ್ದ ಮಂಗಳೂರು ನಗರದ ರಸ್ತೆಗಳ ದುರವಸ್ಥೆ ಹೇಳ ತೀರದು . ನಗರದ ಕೆಲವೆಡೆ ಜನರಿಗೆ ರಸ್ತೆಯಲ್ಲಿ ಗುಂಡಿಯಾಗಿದೆಯೋ ಅಥವಾ ಗುಂಡಿಯಲ್ಲೇ ರಸ್ತೆ ನಿರ್ಮಾಣ ಮಾಡಲಾಗಿದೆಯೋ ಎಂಬುವುದೇ ಅರ್ಥವಾಗುತ್ತಿಲ್ಲ.

ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರ ನಿವಾಸ ಇರುವ ಬೆಂದೂರ್ ವೆಲ್ ರಸ್ತೆ ಯ ಪರಿಸ್ಥತಿ ವಿವರಿಸಲು ಸಾದ್ಯವಾಗದ ರೀತಿಯಲ್ಲಿದೆ. ಸಚಿವರ ಮನೆ ಮುಂದಿನ ರಸ್ತೆಯ ಸ್ಥಿತಿಯೇ ಹೀಗೆ ಎಂದ ಮೇಲೆ ಕ್ಷೇತ್ರದ ರಸ್ತೆಯ ಸ್ಥಿತಿಯನ್ನು ಸುಲಭವಾಗಿ ಅಂದಾಜಿಸಬಹುದು.

ಸಿಎಂ ಓಡಾಡುವ ರಸ್ತೆಯಲ್ಲೇ ಗುಂಡಿ, ರಿಪೇರಿ ಮಾಡಿ

ಮಂಗಳೂರಿಗೆ ಭೇಟಿ ನೀಡುವ ಸಚಿವ ಖಾದರ್ ಅವರು ಇದೇ ರಸ್ತೆಯಲ್ಲಿ ಸಂಚರಿಸಿ ಮನೆ ಸೇರುತ್ತಾರೆ ಹಾಗೂ ಈ ರಸ್ತೆಯ ಮೂಲಕವೇ ನಿಗದಿತ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಆದರೆ ಖಾದರ್ ಸಾಹೇಬರು ಮಾತ್ರ ಈ ರಸ್ತೆ ದುರಸ್ಥಿ ಮಾಡಿಸುವ ಗೋಜಿಗೆ ಹೋಗಿಲ್ಲ. ನಗರದ ಹಲವಾರು ರಸ್ತೆಗಳಲ್ಲಿ ವಾಹನ ಸವಾರರು ಎದ್ದು-ಬಿದ್ದು ಓಡಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಅದರಲ್ಲೂ ಬೆಂದೂರುವೆಲ್ ನಿಂದ ಪಂಪುವೆಲ್ ಸಂಪರ್ಕಿಸುವ ರಸ್ತೆಯ ಸ್ಥಿತಿ ಅದರ ಮೇಲೆ ಸಂಚರಿಸಿದವರಿಗೇ ಗೊತ್ತು .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಮಳೆಗಾಲ ಆರಂಭಗೊಂಡಾಕ್ಷಣ ರಸ್ತೆಗಳು ಕೆರೆಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಮಳೆಗಾಲದಲ್ಲಿ ನಿರ್ಮಾಣವಾಗುವ ಈ ರಸ್ತೆ ಗುಂಡಿಗಳಿಂದ ಮುಕ್ತಿ ಸಿಗಬೇಕಾದರೆ ಮಳೆಗಾಲ ಮುಗಿಯೋ ತನಕ ಕಾಯಲೇ ಬೇಕು. ಆದರೆ ಈ ಬಾರಿ ಜಿಲ್ಲೆಯಲ್ಲಿ ಮಳೆ ಕ್ಷೇಣಿಸಿ ತಿಂಗಳು ಕಳೆದಿದ್ದರೂ, ಮಹಾನಗರ ಪಾಲಿಕೆಗೆ ಮಾತ್ರ ಮಳೆಯಾಗದ ಗುಂಗಿನಿಂದ ಇನ್ನೂ ಎದ್ದಿಲ್ಲ. ಪಾಲಿಕೆಯ ಆದಿಕಾರಿಗಳಿಗೆ ರಸ್ತೆಗಳ ಗುಂಡಿ ಮುಚ್ಚಬೇಕು ಎನ್ನುವ ಪರಿಜ್ಞಾನವೇ ಇಲ್ಲದಂತಾಗಿದೆ.

ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ

ನಗರರ ಬೆಂದೂರುವೆಲ್ ನಿಂದ ಪಂಪುವೆಲ್ ಸಂಪರ್ಕಿಸುವ ರಸ್ತೆಯಲ್ಲಿ ಇದೀಗ ಪ್ರತಿದಿನ ದ್ವಿಚಕ್ರ ವಾಹನ ಸವಾರರು ಈ ರಸ್ತೆ ಗುಂಡಿಗೆ ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ. ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮನೆಯ ಎದುರೇ ಇರುವ ಈ ರಸ್ತೆಯ ಗತಿ ಹೀಗಾದರೆ ಇನ್ನು ನಗರದ ಇತರೆಡೆ ಇರುವ ರಸ್ತೆಗಳ ಸ್ಥಿತಿ ಹೇಗಿರ ಬಹುದು ? ಎಂಬುದನ್ನು ಯೋಚಿಸ ಬಹುದು.

ಕಳೆದ ಒಂದು ತಿಂಗಳಿನಿಂದ ಬೆಂದೂರುವೆಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನಪ್ರತಿನಿಧಿಗಳು ಪ್ರತಿದಿನವೂ ಇದೇ ರಸ್ತೆಯಲ್ಲಿ ಸಾಗುತ್ತಿದ್ದರೂ, ಕಣ್ಣಿದ್ದರೂ ಕುರುಡರಂತಾಗಿರುವುದು ಮಂಗಳೂರಿನ ಜನರ ದುರಾದೃಷ್ಟವೇ ಸರಿ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವಾಸ ಕಾಮತ್ ಕೂಡ ಇದೇ ರಸ್ತೆಯಲ್ಲಿ ತೆರಳುತ್ತಾರೆ ಅದರೆ ಅವರೂ ಕೂಡ ರಸ್ತೆ ದುರಸ್ಥಿಯ ಗೋಜಿಗೆ ಹೋಗಿಲ್ಲ. ಜನಪ್ರತಿನಿಧಿಗಳ ಈ ನಿರ್ಲಕ್ಷ ದೋರಣೆಗೆ ಈಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಬರಲಿದ್ದು ಮತಯಾಚನೆಗೆ ಬರುವ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದು ಕೊಳ್ಳಲು ಕಾತರದಿಂದ ಜನರು ಕಾಯುತ್ತಿದ್ದಾರೆ.

English summary
Poor condition of Pumwell- Bendoorwell road of Mangaluru makes life miserable . The stretch of road is completely dotted with crater and potholes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X