ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ರಸ್ತೆಗುಂಡಿಗಳ ಬಗ್ಗೆ ಮೆಷರ್ ಮೆಂಟ್ ಪುಸ್ತಕ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿ ಪರ ವಕೀಲರು ಮಾಡಿದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ನಡೆಸಿರುವ ನಡೆಸಿರುವ ಹೈಕೋರ್ಟ್ ಸಿಜೆ ದಿನೇಶ್ ಮಹೇಶ್ವರಿ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೆಷರ್ ಮೆಂಟ್ ಪುಸ್ತಕಗಳನ್ನು ಸಲ್ಲಿಸಿದ ಬಿಬಿಎಂಪಿ ವಿರುದ್ಧ ಕೆಂಡಾಮಂಡಲವಾದರು.

ತ್ವರಿತಗತಿಯಲ್ಲಿ ರಸ್ತೆಗುಂಡಿ ರಿಪೇರಿಯಾಗ್ತಿದೆ, ಸಹಕರಿಸಿ: ಪರಮೇಶ್ವರ್ ತ್ವರಿತಗತಿಯಲ್ಲಿ ರಸ್ತೆಗುಂಡಿ ರಿಪೇರಿಯಾಗ್ತಿದೆ, ಸಹಕರಿಸಿ: ಪರಮೇಶ್ವರ್

ಇಂದೇ ಮೆಷರ್ ಮೆಂಟ್ ಪುಸ್ತಕ ಸಲ್ಲಿಸಬೇಕು, ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ, ರಸ್ತೆಗುಂಡಿಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ, ನಿಮ್ಮ ಅಧಿಕಾರಿಗಳಿಗೆ ನಾಚಿಕೆ ಆಗುವುದಿಲ್ಲವೇ?ಅಳತೆ ಮಾಡದೆ ಕಾಮಗಾರಿ ನಡೆಸುತ್ತೇವೆ ಎಂದರೆ ಏನರ್ಥ? ಹಾಗಿದ್ದರೆ ರನ್ನಿಂಗ್ ಬಿಲ್‌ಗಳನ್ನು ಹೇಗೆ ಪಾಸ್ ಮಾಡುತ್ತೀರಿ ಎಂದು ಪ್ರಶ್ನಿಸಿದೆ.

Potholes in Bengaluru: HC objects BBMP process of work

ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ

ರಸ್ತೆಯಲ್ಲಿ ಗುಂಡಿಗಳು ಉಂಟಾದರೆ, ಅದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಅಥವಾ ಗುತ್ತಿಗೆದಾರನ ಹೆಸರಿಡಬೇಕು ಎಂದು ಸಿಜೆ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಸ್ವಚ್ಛಗೊಳ್ಳಲೇಬೇಕು. ಫ್ಲೆಕ್ಸ್ ನಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯ, ರಸ್ತೆಗುಂಡಿ ಮುಚ್ಚುವುದರೊಂದಿಗೆ ಮುಗಿಯಬೇಕು. ನಗರದ ಯಾವೊಂದು ರಸ್ತೆಯಲ್ಲೂ ಒಂದೇ ಒಂದು ಗುಂಡಿಯೂ ಕಾಣಸಿಗಬಾರದು. ನೀವೇನು ಮಾಡುತ್ತೀರೋ ಗೊತ್ತಿಲ್ಲ. ಮಧ್ಯಾಹ್ನ 2.25 ಕ್ಕೆ ದಾಖಲೆಗಳು ನಮ್ಮ ಮುಂದೆ ಇರಬೇಕು ಎಂದು ಬಿಬಿಎಂಪಿಗೆ ಸಿಜೆ ತಾಕೀತು ಮಾಡಿದ್ದಾರೆ.

English summary
Dinesh Maheshwari, chief justice of High Court has strongly objected as BBMP was not submitted measurement book of potholes filling work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X