ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸಿಎಂ ಓಡಾಡುವ ರಸ್ತೆಯಲ್ಲೇ ಗುಂಡಿ, ರಿಪೇರಿ ಮಾಡಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 07: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದೆನಿಸಿರುವ ರಸ್ತೆಗುಂಡಿಗೆ ಪರಿಹಾರ ಕಂಡುಕೊಳ್ಳಲು ಸತತ ಪ್ರಯತ್ನ ಮಾಡಲಾಗುತ್ತಿದೆ. ದೂರು ಸ್ವೀಕಾರ ಹಾಗೂ ಪರಿಹಾರಕ್ಕಾಗಿ ಮೊಬೈಲ್ ಅಪ್ಲಿಕೇಷನ್ ಬಳಕೆಯಲ್ಲಿದೆ. ಆದರೆ, ಎಷ್ಟೋ ಕಡೆಗಳಲ್ಲಿ ಸಮಸ್ಯೆಗಳು ಬಿಬಿಎಂಪಿ ಗಮನಕ್ಕೆ ಬರುವುದಿಲ್ಲ.

  ಜೆಪಿ ನಗರದ ನಿವಾಸಿಯಾಗಿರುವ ಮಾನ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜಯನಗರದ ಸೌತ್ ಎಂಡ್ ಸರ್ಕಲ್ ನ ಸಿಗ್ನಲ್ ಬಳಿಯಲ್ಲೇ ರಸ್ತೆ ಗುಂಡಿ ಇನ್ನೂ ದುರಸ್ತಿಯಾಗಿಲ್ಲ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದಂತೆ ಬಂದ ಮಳೆಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಸೌತ್ ಎಂಡ್ ಸರ್ಕಲ್ ನ ಚಿತ್ರಗಳು ಇಲ್ಲಿವೆ...

  BBMP: South End Circle road pothole repair it

  ಬಿಬಿಎಂಪಿಯ 20 ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಮೊಬೈಲ್ ಮೂಲಕವೇ ನೀಡಬಹುದಾಗಿದೆ.ದೂರಿಗೆ ಸಂಬಂಧಪಟ್ಟಂತೆ ತೆಗೆದುಕೊಂಡ ಕ್ರಮಗಳ ವಿವರ ನಿಮ್ಮ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಬರುತ್ತದೆ.

  BBMP: South End Circle road pothole repair it

  ಅಪ್ಲಿಕೇಶನ್ ಮೂಲಕ ಬರುವ ದೂರುಗಳನ್ನು ನಿರ್ವಹಣೆ ಮಾಡಲು 24 ಗಂಟೆಗಳ ಕಾಲವೂ ಕಾರ್ಯನಿರ್ವಹಣೆ ಮಾಡುವ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ.

  ರಸ್ತೆ ಗುಂಡಿ ಕಂಡರೆ ಆನ್ಲೈನ್ ನಲ್ಲಿ ಬಿಬಿಎಂಪಿಗೆ ದೂರು ನೀಡಿ

  ಬಿಬಿಎಂಪಿ ಸಹಾಯ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. 080-22660000 ಸಹಾಯವಾಣಿಗೆ ಕರೆ ಮಾಡಿ ಅಥವಾ 9480685700ಗೆ ವಾಟ್ಸಪ್ ಮೂಲಕ ರಸ್ತೆಗುಂಡಿ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ.

  BBMP: South End Circle road pothole repair it

  ಇದಲ್ಲದೆ ಆನ್ ಲೈನ್ ಮೂಲಕ ದೂರು ನೀಡಿ, ದೂರಿನ ಪ್ರಗತಿ ಬಗ್ಗೆ ಟ್ರ್ಯಾಕ್ ಮಾಡಬಹುದಾಗಿದೆ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Deputy chief minister and Bengaluru development minister G. Parameshwar has requested Bengalureans to report a pothole in he city and get it fixed. Here is south end circle pothole pictures.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more