ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಳೀಯ ಸಂಸ್ಥೆ ಚುನಾವಣೆ: ಉಳ್ಳಾಲ, ಪುತ್ತೂರು, ಬಂಟ್ವಾಳದಲ್ಲಿ ಬಿರುಸಿನ ಮತದಾನ

|
Google Oneindia Kannada News

ಮಂಗಳೂರು, ಆಗಸ್ಟ್ 31: ದಕ್ಷಿಣ ಕನ್ನಡ ಜಿಲ್ಲೆಯ 2 ನಗರಸಭೆ ಹಾಗು 1 ಪುರಸಭೆಗೆ ಇಂದು ಶುಕ್ರವಾರ ಚುನಾವಣೆ ನಡೆಯುತ್ತಿದೆ. ಜಿಲ್ಲೆಯ ಪುತ್ತೂರು ಮತ್ತು ಉಳ್ಳಾಲ ನಗರಸಭೆ ಹಾಗೂ ಬಂಟ್ವಾಳ ಪುರಸಭೆಯ ಎಲ್ಲಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ಉಳ್ಳಾಲ, ಪುತ್ತೂರು ನಗರ ಸಭೆ, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 7 ಗಂಟೆಯಿಂದ ಮತದಾನ ಆರಂಭಗೊಂದಿದೆ. ಮುಂಜಾನೆ ನಿಧಾನವಾಗಿ ಮತದಾನ ಆರಂಭವಾಗಿದ್ದರೂ ಹೊತ್ತು ಏರುತ್ತಿದ್ದಂತೆ ಮತದಾನ ಪ್ರಕ್ರಿಯೆ ಬಿರುಸುಗೊಂಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆ: ಮತಗಟ್ಟೆಯಲ್ಲಿಯೇ ಅಭ್ಯರ್ಥಿಗಳ ಪ್ರಚಾರಸ್ಥಳೀಯ ಸಂಸ್ಥೆ ಚುನಾವಣೆ: ಮತಗಟ್ಟೆಯಲ್ಲಿಯೇ ಅಭ್ಯರ್ಥಿಗಳ ಪ್ರಚಾರ

ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮತ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.

Polling started for Local body election in Dakshina Kannada

ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರಿಗೆ ಮತದಾರರ ಚೀಟಿ ದೊರೆತಿಲ್ಲ ಎಂಬ ದೂರು ಉಳ್ಳಾಲದಲ್ಲಿ ಕೇಳಿಬಂದಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಯ ಮಾಸ್ತಿಕಟ್ಟೆಯ ಸುಂದರಿಬಾಗ್ ವಾರ್ಡ್ ವ್ಯಾಪ್ತಿಯ ಜನರು ಮತದಾರರ ಚೀಟಿಗಾಗಿ ಪರದಾಡಿದ್ದಾರೆ.

 ಮಾಜಿ ಸಂಸದೆ ರಮ್ಯಾ ಅವರು ಇಂದು ಮತದಾನ ಮಾಡಲ್ವ? ಮಾಜಿ ಸಂಸದೆ ರಮ್ಯಾ ಅವರು ಇಂದು ಮತದಾನ ಮಾಡಲ್ವ?

ಮತದಾರರಿಗೆ ವೋಟರ್ ಚೀಟಿ ವ್ಯವಸ್ಥೆ ಮಾಡಬೇಕಾಗಿದ್ದ ಶಿಕ್ಷಕರು ತಡವಾಗಿ ಬಂದ ಕಾರಣ ಭಾರತಿ ಪ್ರೌಢಶಾಲೆಯ ಮತದಾನ ಕೇಂದ್ರದಲ್ಲಿ ಮತದಾರರ ಚೀಟಿಗಾಗಿ ಗೊಂದಲ ಸೃಷ್ಟಿಯಾಗಿತ್ತು.

Polling started for Local body election in Dakshina Kannada

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಮುಂಜಾನೆಯಿಂದಲೇ ಮತದಾನ ಆರಂಭವಾಗಿದೆ. ಪುತ್ತೂರು ನಗರಸಭೆ ವ್ಯಾಪ್ತಿಯ 41 ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಮತಗಟ್ಟೆ 28 ರಲ್ಲಿ ಮತಯಂತ್ರ ಕೆಟ್ಟುಹೋಗಿ ಕೆಲಕಾಲ ಮತದಾನ ಪ್ರಕ್ರಿಯೆ ತಡೆಯುಂಟಾಗಿತ್ತು.

 ಸ್ಥಳೀಯ ಸಂಸ್ಥೆಗಳ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಮೊದಲ ಪರೀಕ್ಷೆ ಸ್ಥಳೀಯ ಸಂಸ್ಥೆಗಳ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಮೊದಲ ಪರೀಕ್ಷೆ

ಆದರೆ ಮತಯಂತ್ರ ಬದಲಿಸಿದ ಬಳಿಕ ಮತ್ತೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 39745 ಮತದಾರರಿದ್ದು 77 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪುತ್ತೂರು ನಗರ ಸಭೆಯ 31 ವಾರ್ಡ್ ಗಳಿಗೆ ಈ ಬಾರಿ 77 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ 31, ಬಿಜೆಪಿ 31, ಜೆಡಿಎಸ್ 9, ಬಿಎಸ್ಪಿ 1 , ಎಸ್.ಡಿ.ಪಿ.ಐ 3 ಹಾಗೂ ಪಕ್ಷೇತರರು 2 ಸ್ಥಾನದಲ್ಲಿ ಸ್ಪರ್ಧೆ ನಡೆಸಿದ್ದಾರೆ. ಪುತ್ತೂರಿಗೆ ಸಂಬಂಧಿಸಿದಂತೆ ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಾಗಿದೆ.

Polling started for Local body election in Dakshina Kannada

ಬಂಟ್ವಾಳ ಪುರಸಭೆ 27 ವಾರ್ಡ್ ಗಳಿಗೆ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ 27, ಕಾಂಗ್ರೆಸ್ 25, ಜೆಡಿಎಸ್ 5, ಎಸ್.ಡಿ.ಪಿ.ಐ 12, ಸಿಪಿಐಎಂ 1 ಹಾಗೂ ಪಕ್ಷೇತರ 1 ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದಾರೆ.

ಉಳ್ಳಾಲ ನಗರಸಭೆಯ 31 ವಾರ್ಡ್ ಗಳಿಗೆ ಒಟ್ಟು 102 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ 31, ಬಿಜೆಪಿ 24, ಜೆಡಿಎಸ್ 21, ಎಸ್.ಡಿ.ಪಿ.ಐ 9, ಸಿ.ಪಿ.ಐ 5 ಹಾಗೂ ಪಕ್ಷೇತರ 1 ಸ್ಥಾನದಲ್ಲಿ ಸ್ಪರ್ಧಿಸಿದ್ದಾರೆ.

English summary
Polling started for Local body election in Dakshina Kannada district. Voting began at 7am. There is peaceful voting everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X