ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಣರಾಯಿ ಆಗಮನ ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ

ಮಂಗಳೂರಿನ ನೆಹರೂ ಮೈದಾನದಲ್ಲಿ ಫೆ.25ರಂದು ನಡೆಯಲಿರುವ ಸೌಹಾರ್ದ ರ‍್ಯಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನ ವಿರೋಧಿ ಸಂಘ ಪರಿವಾರ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 24 : ಮಂಗಳೂರಿನ ನೆಹರೂ ಮೈದಾನದಲ್ಲಿ ಫೆ.25ರಂದು ನಡೆಯಲಿರುವ ಸೌಹಾರ್ದ ರ‍್ಯಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನ ವಿರೋಧಿ ಸಂಘ ಪರಿವಾರ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ವಿವಿಧ ಸಂಘಟನೆಗಳ ಶರಣ್ ಪಂಪ್ ವೆಲ್, ಜಗದೀಶ್ ಶೇಣವ, ರತ್ನಾಕರ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು. ಬಿಜೆಪಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮೊದಲಾದ ಸಂಘಟನೆ ಕಾರ್ಯಕರ್ತರು ನಗರದ ಜ್ಯೋತಿ ಸರ್ಕಲ್ ನಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನ ಸಭೆ ನಡೆಸಿದರು.['ಪಿಣರಾಯಿ ಬಂದರೆ ತೊಂದರೆ ಗ್ಯಾರಂಟಿ' ಜಗದೀಶ್ ಶೇಣವ ಎಚ್ಚರಿಕೆ]

Political murders: Protest in Mangaluru against Kerala CM's visit

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಂ. ಬಿ ಪುರಾಣಿಕ್, "ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿಯಾದ ನಂತರ ಕಣ್ಣೂರು. ತ್ರಿಶೂರ್ ಮತ್ತಿತರ ಜಿಲ್ಲೆಗಳಲ್ಲಿ ಸರಣಿ ಕೊಲೆಗಳಾಗಿವೆ. ಶೇಕಡಾ 95 ಕೊಲೆಗಳಲ್ಲಿ ಹಿಂದೂಗಳೇ ಸಂತ್ರಸ್ತರಾಗಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.[ಪಿಣರಾಯಿ ಕಾರ್ಯಕ್ರಮಕ್ಕೆ 3,400 ಪೊಲೀಸರಿಂದ ಭದ್ರತೆ]

ಬ್ಯಾನರ್ ಹರಿದು ಆಕ್ರೋಶ

ಇದೇ ವೇಳೆ ವಿಹಿಂಪ ಹಾಗೂ ಹಿಂದೂ ಜಾಗರಣ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡ ಕಾರ್ಯಕರ್ತರು ಹೋಗುವ ದಾರಿಯಲ್ಲಿ ಹಾಕಲಾಗಿದ್ದ ಸೌಹಾರ್ದ ಸಮಾವೇಶದ ಬ್ಯಾನರ್ ಗಳನ್ನು , ಸ್ಟಿಕ್ಕರ್ ಗಳನ್ನು ಹರಿದು ಕಾಲಿನಡಿಗೆ ಹಾಕಿ ತುಳಿದುಕೊಂಡೇ ಹೋದರು.

Political murders: Protest in Mangaluru against Kerala CM's visit

ಜಾಥಾದುದ್ದಕ್ಕೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

English summary
Mangaluru witnessed massive protests by pro-Hindu organisations against the visit of Kerala Chief minister Pinarayi Vijayan's visit on Friday. Protests were held against the participation of Kerala Chief Minister in a communal harmony rally scheduled to take place on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X