17.5 ಲಕ್ಷ ರೂ. ವಂಚನೆ ಪ್ರಕರಣ; ಪ್ರಸಾದ್ ಅತ್ತಾವರ ಬಂಧನ

ಮಂಗಳೂರು, ಮಾರ್ಚ್ 29: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಹುದ್ದೆ ಕೊಡಿಸುವ ಆಮಿಷವೊಡ್ಡಿ,ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ ಬಂಧಿಸಲಾಗಿದೆ.

ರಾಮ ಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ 17.5 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ವಂಚನೆ ಪ್ರಕರಣದ ತನಿಖೆ ಕೈಗೊಂಡಿರುವ ಮಂಗಳೂರಿನ ಕಂಕನಾಡಿ ನಗರ ಪೊಲೀಸರು ಪ್ರಸಾದ್ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಹುದ್ದೆ ಕೊಡಿಸುವುದಾಗಿ ಆರೋಪಿ ವಿವೇಕ ಆಚಾರ್ಯ ಅವರಿಂದ ಹಣ ಪಡೆದು ವಂಚಿಸಿದ್ದ. ವಿವಿಯ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿರುವ ವಿವೇಕ ಆಚಾರ್ಯ ಉಪ ಕುಲಪತಿ ಆಗಲು ಎಲ್ಲಾ ಅರ್ಹತೆ ಹೊಂದಿದ್ದಾರೆ.

Prasad Attavar

ಪ್ರಸಾದ್ ಅತ್ತಾವರ ನಾನು ಮುಖ್ಯಮಂತ್ರಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹುದ್ದೆ ಕೊಡಿಸಲು 15 ಲಕ್ಷ ಮತ್ತು ತಾನು ಓಡಾಟ ನಡೆಸಲು 2 ಲಕ್ಷ ರೂ. ಪಡೆದಿದ್ದರು. ಹಣ ಪಡೆದು ವರ್ಷಗಳು ಕಳೆದರೂ ಹುದ್ದೆ ಕೊಡಿಸಿರಲಿಲ್ಲ.

ಇದರಿಂದಾಗಿ ವಿವೇಕ ಆಚಾರ್ಯ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಪ್ರಸಾದ್ ಅತ್ತಾವರ ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+