ಅಂಗವಿಕಲರ ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ಚಾಂಪಿಯನ್
ಮಂಗಳೂರು, ಡಿಸೆಂಬರ್ 17: ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅಂಗವಿಕಲರ ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿನ್ನೆ ಡಿಸೆಂಬರ್ 16 ಸಂಜೆ ನಡೆದ ಫೈನಲ್‌ನಲ್ಲಿ ಕನಾರ್ಟಕ ತಂಡ ಮಹಾರಾಷ್ಟ್ರ ತಂಡ ವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕರ್ನಾಟಕದ ಎದರು ಪರಾಜಯಗೊಂಡ ಮಹಾರಾಷ್ಟ್ರ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ.
ಕರ್ನಾಟಕದ ಪರಮಾನಂದ ಕೆ.ಜಿ.ಉತ್ತಮ ರೈಡರ್, ಸುರೇಶ್ ಹಿಡಿತಗಾರ ವೈಯುಕ್ತಿಕ ಬಹುಮಾನ ಗೆದ್ದುಕೊಂಡರೆ, ಆಲ್‌ರೌಂಡರ್ ಗೌರ ಬಹುಮಾನ ವನ್ನು ಮಹಾರಾಷ್ಟ್ರದ ಸಚಿನ್ ತೆಂಡಲ್, ವಿಶೇಷ ಪುರಸ್ಕಾರವನ್ನು ಕರ್ನಾಟಕ ತಂಡದ ನಾಯಕ ರಾಘವೇಂದ್ರ ಪಡೆದುಕೊಂಡರು.

ಅಂತಿಮ ಸುತ್ತಿನ ಪಂದ್ಯದಲ್ಲಿ 37- 14 ಅಂಕಗಳ ಅಂತರದಲ್ಲಿ ಕರ್ನಾಟಕ ತಂಡ ನಿರಾಯಾಸವಾಗಿ ಜಯಗೊಳಿಸಿತು. ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್, ತಮಿಳುನಾಡು, ಮಧ್ಯಪ್ರದೇಶ, ಪಾಂಡಿಚೇರಿ, ರಾಜಸ್ಥಾನ, ಕೇರಳ ಸಹಿತ ರಾಷ್ಟ್ರದ ವಿವಿಧೆಡೆಗಳಿಂದ 12 ತಂಡಗಳು ಕೂಟದಲ್ಲಿ ಭಾಗವಹಿಸಿದ್ದವು.












Click it and Unblock the Notifications