ಮಂಗಳೂರಲ್ಲಿ ನ್ಯಾಯಕ್ಕಾಗಿ ಪೆಟ್ರೋಲ್ ಬಂಕ್ ಮಾಲಿಕನ ಧರಣಿ

ಮಂಗಳೂರು, ಮೇ 16 : ತನಗೆ ನೀಡಲಾಗಿರುವ ಡೀಲರ್ಶಿಪ್ ಮೇಲೆ ಮತ್ತೊಬ್ಬರಿಗೆ ಸಾಲ ನೀಡಿದ ಎಚ್ಪಿಸಿಎಲ್, ಸಾಲ ಪಡೆದಾತ ಮರುಪಾವತಿ ಮಾಡುತ್ತಿಲ್ಲವಾದ್ದರಿಂದ ತನಗೆ ತೈಲ ಪೂರೈಕೆ ಮಾಡದೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಎಚ್ಪಿಸಿಎಲ್ ಡೀಲರ್ ನ್ಯಾಯಕ್ಕಾಗಿ ಕಂಪನಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ಬುಧವಾರ ನಡೆದಿದೆ.

ಆದರೆ ಕಂಪನಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಡೀಲರ್ ಸಾಲವನ್ನು ಪಡೆದುಕೊಂಡು ಮರು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದು, ಈ ಕಾರಣದಿಂದ ತೈಲ ಪೂರೈಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ. ಇದಲ್ಲದೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡುವುದಾಗಿ ತಿಳಿಸಿದರೂ ಅವರು ಒಪ್ಪದೆ ಇರುವ ಕಾರಣದಿಂದ ತೈಲಪೂರೈಕೆ ನಡೆಸಿಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.

Petrol bunk owners sits for dharna seeking justice from HPCL

ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿರುವ ಪ್ರಕಾಶ್ ಎಂ.ಬಿ ಮತ್ತವರ ಕುಟುಂಬ ಎಚ್ಪಿಸಿಎಲ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಎಸ್ಸಿ/ಎಸ್ಟಿ ಕೋಟಾ ಅಡಿಯಲ್ಲಿ ಪ್ರಕಾಶ್ ಅವರಿಗೆ 2007ರಲ್ಲಿ ಎಚ್ಪಿಸಿಎಲ್ ಪೆಟ್ರೋಲ್ ಬಂಕನ್ನು ಮಂಜೂರು ಮಾಡಿತ್ತು. ಇದಕ್ಕಾಗಿ ಸಾಲದ ವ್ಯವಸ್ಥೆಯನ್ನು ಸರಕಾರದ ಕಾನೂನಿನ ಅಡಿಯಲ್ಲಿ ಕಂಪನಿಯೇ ಒದಗಿಸಿಕೊಟ್ಟಿತ್ತು.

2013ರವರೆಗೆ ಎಲ್ಲವೂ ಸರಿಯಾಗಿ ನಡೆದಿದ್ದರೆ ಆ ಬಳಿಕದಿಂದ ಎಚ್ಪಿಸಿಎಲ್ ತೈಲ ಪೂರೈಕೆ ಸ್ಥಗಿತಗೊಳಿಸಿತ್ತು. ಕಂಪನಿಯಿಂದ ಪಡೆದಿರುವ 25 ಲಕ್ಷ ರು. ಮರುಪಾವತಿ ಮಾಡದ ಕಾರಣದಿಂದ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೂಚಿಸಿತ್ತು. ಒಂದು ವೇಳೆ ಅವಶ್ಯಕತೆ ಇದ್ದರೆ ಒಮ್ಮೆಗೆ ತೈಲ ಪೂರೈಕೆ ನಡೆಸುವುದಾಗಿಯೂ, ಇದರ ಮೊತ್ತವನ್ನು ಕೂಡಲೇ ಪಾವತಿಸುವಂತೆ ತಿಳಿಸಿತ್ತು. ಆದರೆ ಪ್ರಕಾಶ್ ಅವರು ಇದಕ್ಕೆ ಬದ್ಧರಾಗಿರಲಿಲ್ಲ ಎನ್ನಲಾಗಿದೆ.

ಎಚ್ಪಿಸಿಎಲ್ ಕೇಂದ್ರ ಸರಕಾರದ ಉದ್ದಿಮೆಯಾಗಿದ್ದು, ಇಲ್ಲಿ ವಿವಿಧ ಸ್ತರದ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸರಕಾರದ ಉದ್ದಿಮೆಯಲ್ಲಿ ವಂಚನೆ ನಡೆಸುವುದಾಗಲಿ ಅಕ್ರಮ ಎಸಗುವುದಾಗಲಿ ಮಾಡುವುದು ಅಸಂಭವ. ಇಲ್ಲಿ ಏನಿದ್ದರೂ ಕಾನೂನು ರೀತ್ಯಾ ನಡೆಯುತ್ತದೆ ದಾಖಲೆಯೂ ಇರುತ್ತದೆ ಎಂದು ತನ್ನ ಕ್ರಮವನ್ನು ಕಂಪನಿ ಸಮರ್ಥಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+