'ಮಂಗಳೂರು ಚಲೋ'ಗೆ ಹೇರಿದ ನಿರ್ಬಂಧ ಸಮರ್ಥಿಸಿಕೊಂಡ ರೈ
ಮಂಗಳೂರು, ಸೆಪ್ಟೆಂಬರ್ 05 : ಬಿಜೆಪಿ ಆಯೋಜಿಸಿದ್ದ 'ಮಂಗಳೂರು ಚಲೋ' ಪ್ರತಿಭಟನಾ ಬೈಕ್ ಜಾಥಾಕ್ಕೆ ನಿರ್ಬಂಧ ಹೇರಿರುವ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮರ್ಥಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಪ್ರತಿಭಟನಾ ಬೈಕ್ ಜಾಥಾದಿಂದಾಗಿ ಶಾಂತಿ ಕದಡುವ ಆತಂಕವಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗು ಇತರ ಜಿಲ್ಲೆಗಳಿಂದ ಬೈಕ್ ಗಳು ಬಂದಾಗ ರಸ್ತೆ ಸುಗಮ ಸಂಚಾರಕ್ಕೆ ತೊಂದರೆ ಆಗಲಿರುವ ಹಿನ್ನಲೆಯಲ್ಲಿ ಬೈಕ್ ಜಾಥಾವನ್ನು ನಿರ್ಬಂಧಿಸಲಾಗಿದೆ ಎಂದು ಸಮರ್ಥನೆ ನೀಡಿದರು.

ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಾತ್ರ ಸಾವನ್ನಪ್ಪಿಲ್ಲ ಇತರರು ಸಾವನ್ನಪ್ಪಿದ್ದಾರೆ ಎಂದರು.
ಹತ್ಯೆಗಳಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ಹೊರತು ಪಡಿಸಿ ಸೆಪ್ಟೆಂಬರ್ 12 ರಂದು ನಡೆಯುವ ಸಾಮರಸ್ಯ ನಡಿಗೆಯಲ್ಲಿ ಇತರೇ ಜಿಲ್ಲೆಯವರನ್ನು ಕರೆಸುತ್ತಿಲ್ಲ.
ಇದೇ ಜಿಲ್ಲೆಯ ಜನರೇ ಸೌಹಾರ್ದ ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸುತ್ತಾರೆ. ಜಿಲ್ಲೆಯ ಜನರ ಬೇಡಿಕೆ ಮೇರೆಗೆ ಸಾಮರಸ್ಯ ನಡಿಗೆ ಆಯೋಜಿಸಿರುವುದಾಗಿ ರೈ ತಿಳಿಸಿದರು.
ಆದರೆ, ಇತ್ತ ಗೃಹ ಸಚಿವ ರಾಮಾಲಿಂಗರೆಡ್ಡಿ ಅವರು ರಮಾನಾಥ ರೈ 'ಸಾಮರಸ್ಯ ರ‍್ಯಾಲಿ'ಗೆ ಅನುಮತಿ ಇಲ್ಲ ಎಂದು ಹೇಳಿದ್ದು, ಮುಂದೆ ಏನಾಗುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications