ಮಂಗಳೂರು ಸುದ್ದಿ: ಗೂಗಲ್‌ ನೋಡಿ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದ್ದಕ್ಕೆ 2 ಲಕ್ಷ ಟೋಪಿ

ಮಂಗಳೂರು, ಮಾರ್ಚ್ 11: ಪ್ರತಿದಿನ ಮೊಬೈಲ್ ಗೆ ಬ್ಯಾಂಕ್ ಗಳಿಂದ ಹತ್ತಾರು ನೋಟಿಫಿಕೇಶನ್ ಬರುತ್ತದೆ. ಕಸ್ಟಮರ್ ಕೇರ್ ಮೆಸೇಜ್, ಹೆಲ್ಪ್ ಲೈನ್ ಸಂದೇಶ, ಆಗಾಗ ಮೊಬೈಲ್ ಡಿಸ್ ಪ್ಲೇ ಮೇಲೆ ಬರುತ್ತದೆ. ಇದನ್ನೇ ನಂಬಿ ನೀವೇನಾದರೂ ಆ ನಂಬರ್‌ಗೆ ಕಾಲ್ ಮಾಡಿದರೆ ಟೋಪಿ ಹಾಕಿಸಿಕೊಳ್ಳುವುದು ಗ್ಯಾರಂಟಿ. ಹೀಗೆಯೇ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಮಂಗಳೂರಿನ ವ್ಯಕ್ತಿಯೊಬ್ಬ 1.92 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಗೂಗಲ್‌ನಲ್ಲಿ ಹೆಲ್ಪ್ ಲೈನ್ ನಂಬರ್‌ಗಳಿಗೆ ಸರ್ಚ್ ಮಾಡ್ತೀರಾ.‌ ಹಾಗೊಂದು ವೇಳೆ ಮಾಡುವುದಾದರೆ ಒಮ್ಮೆ ಆಲೋಚಿಸುವುದು ಉತ್ತಮ. ಏಕೆಂದರೆ ಸೈಬರ್ ವಂಚಕರು ಗೂಗಲ್‌ನಲ್ಲೇ ಫೇಕ್ ಹೆಲ್ಪ್ ಲೈನ್ ನಂಬರ್ ಹಾಕಿ ಹಣ ದೋಚಲು ಶುರು ಮಾಡಿದ್ದಾರೆ.

ಗೂಗಲ್‌ನಲ್ಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡುವ ಮೊದಲು ಹತ್ತು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸೈಬರ್ ವಲ್ಚರ್‌ಗಳು ಬ್ಯಾಂಕ್ ಖಾತೆಗಳಿಂದ ಹಣ ದೋಚಲು ನಕಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್‌ಗಳು ಗೂಗಲ್ ಸರ್ಚ್‌ನಲ್ಲಿ ಮೊದಲು ಬರುವಂತೆ ನೋಡಿಕೊಳ್ಳುತಿದ್ದಾರೆ.

Number Taken From Google; Mangaluru Man Lost 2 Lakh After Who Call Customer Care

ವಂಚನೆ ದಾರಿ ಹುಡುಕಿಕೊಂಡ ಖದೀಮರು:

ಆನ್‌ಲೈನ್‌ನಲ್ಲಿ ಖರೀದಿ ಅಥವಾ ಹಣ ಪಾವತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಸಂದೇಹ ಎದುರಾದಾಗ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಸೇರಿದಂತೆ ಬ್ಯಾಂಕ್ ಸಂಬಂಧಿಸಿದ ಮಾಹಿತಿ ಪಡೆಯಲು ಹೀಗೆ ಹಲವಾರು ಸಂದರ್ಭಗಳಲ್ಲಿ ಹೆಲ್ಪ್‌ಲೈನ್, ಕಸ್ಟಮರ್ ಕೇರ್‌ಗೆ ಗ್ರಾಹಕರು ಮೊರೆಹೋಗುವುದು ಸಹಜ. ಆದರೆ ಇದನ್ನೇ ಸೈಬರ್ ವಲ್ಚರ್ ಗಳು ಹಣ ದೋಚುವ ದಾರಿಯಾಗಿ ಮಾಡಿಕೊಂಡಿದ್ದಾರೆ.

ನಕಲಿ ಹೆಲ್ಪ್‌ಲೈನ್ ಬಗ್ಗೆ ಎಚ್ಚರಿಕೆ:

ಗೂಗಲ್ ಸರ್ಚ್ ಕೊಟ್ಟ ಕೂಡಲೇ ಅಸಲಿಯಂತೆ ಕಾಣುವ ನಕಲಿ ಹೆಲ್ಪ್‌ಲೈನ್, ಕಸ್ಟಮರ್ ಕೇರ್ ಸಂಖ್ಯೆಗಳು ಕಂಪ್ಯೂಟರ್ ಪರದೆ ಮೇಲೆ ಬರುವಂತೆ ಈ ಸೈಬರ್ ವಂಚಕರು ಮಾಡುತಿದ್ದಾರೆ. ಆ ಸಂಖ್ಯೆಯನ್ನು ಪಡೆದು ಗ್ರಾಹಕರು ಕರೆ ಮಾಡಿ ಮಾಹಿತಿಗಳನ್ನು ನೀಡುತ್ತಾ ಹೋದರೆ ಖಾತೆಯಲ್ಲಿರುವ ಹಣ ಸೈಬರ್ ವಲ್ಚರ್‌ಗಳಿಗೆ ಹೋಗುತ್ತದೆ. ಈ ರೀತಿ ಹಣ ಕಳೆದುಕೊಂಡ 2 ಪ್ರಕರಣಗಳು ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ.

2 ಕ್ರೆಡಿಟ್ ಕಾರ್ಡ್ ಹೊಂದಿರುವ ಮಂಗಳೂರಿನ ವ್ಯಕ್ತಿಯೊಬ್ಬರು ಒಂದನ್ನು ಬ್ಲಾಕ್ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ ಬ್ಯಾಂಕ್‌ನ ಕಸ್ಟಮರ್ ಕೇರ್ ನಂಬರ್‌ನ್ನು ಹುಡುಕಿ ಕರೆ ಮಾಡಿದ್ದರು. ಕರೆಯನ್ನು ರಿಸೀವ್ ಮಾಡಿದ ವ್ಯಕ್ತಿಯು 'ಎನಿ ಡೆಸ್ಕ್ ಆ್ಯಪ್' ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ. ಬಳಿಕ ಕ್ರೆಡಿಟ್ ಕಾರ್ಡ್ ನಂಬರ್ ಪಿನ್ ವಿವರ ಹಾಕುವಂತೆ ತಿಳಿಸಿದ್ದನು. ವಿವರ ಹಾಕುವಷ್ಟರಲ್ಲೇ ಖಾತೆಯಿಂದ 1.92 ಲಕ್ಷ ರೂಪಾಯಿ ಮಂಗಮಾಯವಾಗಿದೆ.

ಈ ರೀತಿಯ ಹಲವಾರು ಪ್ರಕರಣಗಳು ನಡೆದಿದ್ದರೂ ಹೆಚ್ಚಿನ ಜನರು ಪ್ರಕರಣ ದಾಖಲಿಸಿಲ್ಲ. ಕಷ್ಟದಲ್ಲಿರುವವರ ಆತಂಕ ಗೊಂದಲಗಳನ್ನೇ ಈ ಸೈಬರ್ ವಂಚಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಹೈಲ್ಪ್ ಲೈನ್ ಅಥವಾ ಕಸ್ಟಮರ್ ಕೇರ್ ನಂಬರ್‌ಗೆ ಕಾಲ್ ಮಾಡುವ ಮೊದಲು ಜಾಗರೂಕರಾಗಿರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+