ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನಡಾವಳಿ ಉತ್ಸವ

ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀಭಗವತಿ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಮಾರ್ಚ್ 31 ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

By ಮಂಗಳೂರು, ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 31: ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀಭಗವತಿ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಮಾರ್ಚ್ 31 ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇಂದು ಮಹಾಪೂಜೆಯ ನಡೆದು, ಬಳಿಕ ಸಂಜೆ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ವಿಶೇಷ ಆನೆ ಚಪ್ಪರದ ಉದ್ಘಾಟನೆ ನಡೆಯಲಿದೆ. ರಾತ್ರಿ ಶ್ರೀಚೀರುಂಭ ಭಗವತಿ ಕ್ಷೇತ್ರದಲ್ಲಿ ಮಹಾಪೂಜೆ, ನಡಾವಳಿ ಉತ್ಸವ ನಡೆಯಲಿದೆ.[ಈ ಹುಡುಗನಲ್ಲಿನ ಪ್ರಾಣಿ ದಯೆ ಎಲ್ಲರಲ್ಲೂ ಬರಲಿ (ವಿಶೇಷ ವರದಿ)]

Nadavali Utsav of Kudroli Bhagavati Kshetra starts from today in Mangaluru

ಏಪ್ರಿಲ್ 1 ರಂದು ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ಪಾಡಂಗರೇ ಭಗವತೀ ಕ್ಷೇತ್ರದಲ್ಲಿ ಮಹಾಪೂಜೆ, ರಾತ್ರಿ 10:30ಕ್ಕೆ ಭೇಟಿಕಳ ಶ್ರೀ ಭಗವತಿ ಮಾತೆಯರ ಭವ್ಯ ಶೋಭಾಯಾತ್ರೆ ನಡೆದು, ಮುಂಜಾನೆ 3.30ಕ್ಕೆ ಕೆಂಡ ಸೇವೆ ಮೂರ್ತಿಯ ದರ್ಶನ ನಡೆಯಲಿದೆ.[ಮಂಗಳೂರಿನ ಈ ಮುಸ್ತಫಾರಿಗೆ ಹಸುಗಳೇ ಮಕ್ಕಳು..!]

Nadavali Utsav of Kudroli Bhagavati Kshetra starts from today in Mangaluru

ಏಪ್ರಿಲ್ 2ರಂದು ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀಪುಲ್ಲೂರಾಳಿ ಭಗವತೀ ಕ್ಷೇತ್ರದಲ್ಲಿ ಕೆಂಡಸೇವೆ, ಮೂರ್ತಿದರ್ಶನ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ 8.15 ರಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ .

English summary
The three-day annual Nadavali Utsav of Kudroli Bhagavati Kshetra Kodialbail, Mangaluru starts from today and ends on April 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X