ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಂ ಬಾಂಧವರಿಂದ ಮಂಗಳೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 1: ತ್ಯಾಗ ಬಲಿದಾನದ ಪ್ರತೀಕವಾದ ಮುಸಲ್ಮಾನ ಬಾಂಧವರ ದೊಡ್ಡ ಹಬ್ಬ ಬಕ್ರೀದ್ ಅಥವಾ ಈದುಲ್ ಅಝ್ ಹಾ ವನ್ನು ಜಗತ್ತಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ .

ಮಕ್ಕಾ ನಗರದಲ್ಲಿರುವ ಕಾಬಾ ಭವನಕ್ಕೆ ಪ್ರತಿ ವರ್ಷ ಹಜ್ ಯಾತ್ರೆ ಕೈಗೊಳ್ಳುವ ಮತ್ತು ಅದರ ಪರಿಸರದಲ್ಲಿ ಬಲಿದಾನ ನೀಡುವ ಸರಿಯಾದ ಕ್ರಮವನ್ನು ಪ್ರವಾದಿ ಮಹಮ್ಮದ್ ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದರು.

ಬಕ್ರೀದ್‌ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡದಲ್ಲಿ ಸೆ. 1 ರಂದು ರಜೆಬಕ್ರೀದ್‌ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡದಲ್ಲಿ ಸೆ. 1 ರಂದು ರಜೆ

ಪವಿತ್ರ ಹಜ್ ಯಾತ್ರೆಯು ಇಸ್ಲಾಮಿನ ವಿಶ್ವ ಭ್ರಾತೃತ್ವದ ಸಂಕೇತವಾಗಿ ಹಾಗೂ ಬಲಿದಾನದ ನೆನಪಿಗಾಗಿ ಬಕ್ರೀದ್ ಆಚರಿಸಲಾಗುತ್ತದೆ .

ಕರಾವಳಿಯಲ್ಲಿ ಇಂದೇ ಬಕ್ರೀದ್

ಕರಾವಳಿಯಲ್ಲಿ ಇಂದೇ ಬಕ್ರೀದ್

ಮಂಗಳೂರಿನಲ್ಲಿಯೂ ಮುಸ್ಲಿಂ ಬಾಂಧವರು ಸಂಭ್ರಮ, ಸಡಗರದಿಂದ ಇಂದು ಬಕ್ರೀದ್ ಆಚರಿಸಿದರು.

ಒಂದು ದಿನ ಮೊದಲೇ ಚಂದ್ರ ದರ್ಶನ

ಒಂದು ದಿನ ಮೊದಲೇ ಚಂದ್ರ ದರ್ಶನ

ಕರಾವಳಿಯಲ್ಲಿ ಒಂದು ದಿನ ಮೊದಲೇ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬಕ್ರೀದ್ ಅಥವಾ ಈದುಲ್ ಅಝ್ ಹಾ ವನ್ನು ಆಚರಿಸಲಾಗುತ್ತಿದೆ .

ಸಾವಿರಾರು ಜನರಿಂದ ಪ್ರಾರ್ಥನೆ

ಸಾವಿರಾರು ಜನರಿಂದ ಪ್ರಾರ್ಥನೆ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಬಾವುಟ ಗುಡ್ಡೆ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು .

ಬಿಗಿ ಭದ್ರತೆ

ಬಿಗಿ ಭದ್ರತೆ

ಹಬ್ಬದ ಹಿನ್ನಲೆಯಲ್ಲಿ ಕ್ಷಿಪ್ರ ಪ್ರಹಾರ ದಳ, ಕೆಎಸ್'ಆರ್'ಪಿ ಪೊಲೀಸ್ ಪಡೆಗಳ ಬಿಗಿ ಭದ್ರತೆ ನಡುವೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು .

ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ

ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ

ಮಂಗಳೂರು ನಗರದ ವಿವಿಧ ಮಸೀದಿಗಳಲ್ಲಿಯೂ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಬಾಂಧವರು ಅಪ್ಪಿಕೊಂಡು ಪರಸ್ಪರ ಶುಭಾಶಯ ಕೋರಿದರು .

English summary
Bakrid celebration in Mangaluru: Muslims celebrated Eid-ul-Azha (Bakri-Eid) with great devotion here in Idgah Maidan and also at other mosques on Friday, September 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X