ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಾಝಿಲ್ ಹತ್ಯೆ ಪ್ರಕರಣ; ಪ್ರಧಾನಿ ಮೋದಿ ಭೇಟಿಗೆ ಅವಕಾಶ ನೀಡುವಂತೆ ಫಾಝಿಲ್ ತಂದೆ ಮನವಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್‌, 31: ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಸರಣಿ ಹತ್ಯೆಯಲ್ಲಿ ರಾಜಕೀಯ ಹಾಗೂ ಜಾತಿ ತಾರತಮ್ಯ ನೀತಿಯನ್ನು ಅನುಸರಿಸಿದೆ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್‌ 2ರಂದು ಮಂಗಳೂರಿಗೆ ಆಗಮಿಸಲಿದ್ದು, ಅರನ್ನು ಭೇಟಿ ಮಾಡಲು ಜಿಲ್ಲಾಡಳಿತ ನಮಗೆ ಅನುವು ಮಾಡಿಕೊಡನೇಕು.‌ ನಾವು ಅವರನ್ನು ಭೇಟಿಯಾಗಿ ಸರ್ಕಾರದ ತಾರತಮ್ಯ ನೀತಿಯ ಬಗ್ಗೆ ಮನವಿ ಸಲ್ಲಿಸುತ್ತೇವೆ ಎಂದು ಸುರತ್ಕಲ್‌‌ನಲ್ಲಿ ಹತ್ಯೆ ಆಗಿದ ಫಾಝೀಲ್ ತಂದೆ ಫಾರೂಕ್ ಹೇಳಿದರು.

ನರೇಂದ್ರ ಮೋದಿ ಮಂಗಳೂರು ಭೇಟಿ; ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯನರೇಂದ್ರ ಮೋದಿ ಮಂಗಳೂರು ಭೇಟಿ; ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ

ಹತ್ಯೆಯಾದ ಫಾಝಿಲ್ ತಂದೆ ಆರೋಪ ಏನು?
ಫಾಝಿಲ್ ಹತ್ಯೆಯ ಹಿಂದಿನ ಸೂತ್ರಧಾರನನ್ನು ಬಂಧಿಸಬೇಕು. ಇಲ್ಲದಿದ್ದರೆ ಇನ್ನೂ ಕೊಲೆಗಳು ಆಗುತ್ತವೆ. ಶೀಘ್ರವೇ ಆರೋಪಿಗಳ ಬಂಧನ ಆಗಲಿ. ಪುತ್ರನನ್ನು ಕಳೆದುಕೊಂಡ ನನ್ನ ನೋವು ಯಾರಿಗೂ ಬರುವುದು ಬೇಡ ಎಂದು ಹತ್ಯೆ ಆದ ಫಾಝಿಲ್ ತಂದೆ ಫಾರೂಕ್ ಅಸಮಾಧಾನ ಹೊರಹಾಕಿದರು.

Mangaluru murder case; Fazil father requests to allow to meet Prime Minister Modi

ಕೊಲೆ ಹಿಂದಿನ ಸೂತ್ರದಾರರ ಬಂಧನಕ್ಕೆ ಆಗ್ರಹ
ಮಂಗಳೂರಿನಲ್ಲಿ ಮಾತನಾಡಿದ ಅವರು, "ಕುಖ್ಯಾತ ಕೊಲೆಗಡುಕರನ್ನು ಹೀಗೆ ಬಿಟ್ಟರೇ ಅವರ ಮಕ್ಕಳು ಕೂಡ ಇದೇ ರೀತಿ ಆಗುತ್ತಾರೆ. ಸರ್ಕಾರದ ರಾಜಕೀಯಕ್ಕಾಗಿ ಯಾವ ಮಕ್ಕಳೂ ಸಾಯಬಾರದು. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಆದರೆ ಅವರ ಕೈಕಟ್ಟಿ ಹಾಕುವ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ನೇರವಾಗಿ ಭಾಗಿ ಆಗಿರುವ ಆರೋಪಿಗಳನ್ನಷ್ಟೇ ಬಂಧಿಸಲಾಗಿದೆ. ಬದಲಾಗಿ ಕೊಲೆಯ ಹಿಂದಿರುವ ಸೂತ್ರಧಾರರ ಬಂಧನವಾಗಿಲ್ಲ. ಜೈಲಿನಲ್ಲಿ ತಹಶೀಲ್ದಾರ್ ಚಹರೆ ಗುರುತು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ‌. ಅದರಲ್ಲೂ ಮುಖ್ಯ ಸಾಕ್ಷಿಯನ್ನು ಬಿಡಲಾಗಿದೆ. ಆರೋಪಿಗಳು ಕೃತ್ಯಗೈದು ಪರಾರಿ ಆಗಿದ್ದಾರೆ. ಅಲ್ಲಿಂದ 27 ವರ್ಷದ ಹಳೆಯ ವಾಹನದಲ್ಲಿ ಬಿ.ಸಿ.ರೋಡಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವೇ? ಆ ವಾಹನದ ಮಾಲಕ ಯಾರು ಎಂದು ಇನ್ನು ತಿಳಿಸಿಲ್ಲ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರ ಹಿಂದೆ ಕಾಣದ ಕೈಗಳು ಬಹಳಷ್ಟು ಇವೆ‌. ಪೊಲೀಸ್ ಇಲಾಖೆಗೆ ನಾವು ಆರೋಪಿಗಳು ಯಾರು ಎಂದು ಹೇಳಿದರೂ ಅವರನ್ನು ಬಂಧಿಸುವುದಿಲ್ಲ," ಎಂದು ಫಾರೂಕ್ ಆಕ್ರೋಶ ವ್ಯಕ್ತಪಡಿಸಿದರು.

Mangaluru murder case; Fazil father requests to allow to meet Prime Minister Modi

ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ
ನ್ಯಾಯವಾದಿ ಉಮರ್ ಫಾರೂಕ್ ಮಾತನಾಡಿ, "ಸರಣಿ ಹತ್ಯೆಯ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿಯನ್ನು ಕೈಬಿಟ್ಟು ಮೂರು ಹತ್ಯೆಗಳ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು. ಅಲ್ಲದೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಯುಎಪಿಎ ಪ್ರಕರಣ ದಾಖಲಿಸಿದಂತೆ, ಮತ್ತೆರೆಡು ಕೊಲೆ ಪ್ರಕರಣದಲ್ಲೂ ಯುಎಪಿಎ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಎಂದು ಹೇಳಿದರು ಕೂಡ ಯಾವುದೇ ಸ್ಪಂದನೆಯೂ ದೊರಕಿಲ್ಲ. ಇದೀಗ ನಾವು ನೀಡಿರುವ 10 ದಿನಗಳ ಗಡುವು ಮುಕ್ತಾಯಗೊಂಡಿದೆ. ಆದ್ದರಿಂದ ಸೆಪ್ಟೆಂಬರ್ 9ರಂದು ಮಧ್ಯಾಹ್ನ 3:30ಕ್ಕೆ ಸುರತ್ಕಲ್ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ," ಎಂದು ಎಚ್ಚರಿಸಿದ್ದರು.

English summary
Prime Minister Modi will visit Mangalore on September 2nd. Fazil killed in Dakshina Kannada district, no main accused has been arrested. So Fazil father Farooq requested to give an opportunity to meet Prime Minister Modi, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X