ಮಂಗಳೂರಿನಲ್ಲಿ ಈಗ ಸಿಎಂ ಪರಮಾಪ್ತ ಬಿಎಂ ಫಾರೂಕ್ ಕಾರಿನದ್ದೇ ಸದ್ದು

ಮಂಗಳೂರು ಜೂನ್ 18: ರಾಜ್ಯದಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಚ್ ಡಿ ಕುಮಾರಸ್ವಾಮಿ ಅವರ ಪರಮಾಪ್ತ ಬಿಎಂ ಫಾರೂಕ್ ಅವರ ಗ್ರಹಗತಿಗಳೇ ಬದಲಾಗಿವೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಾಲಿಗೆ ಪಾರ್ಟಿ ಫಂಡ್ ಆಗಿದ್ದ ಫಾರೂಕ್ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನೇರ ರಾಜಕೀಯಕ್ಕೆ ಎಂಟ್ರಿಕೊಡುವ ಕನಸು ಕೊನೆಗೂ ನನಸು ಮಾಡಿಕೊಂಡಿದ್ದಾರೆ.

ನೂತನ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯತ್ವ ಗಿಟ್ಟಿಸಿಕೊಂಡಿರೋ ಬಿ.ಎಂ.ಫಾರೂಕ್ ಇನ್ನೊಂದೆಡೆ ಭಾರೀ ಬೆಲೆಯ ಐಷಾರಾಮಿ ಅತ್ಯಾಧುನಿಕ ಕಾರೊಂದನ್ನು ಖರೀದಿಸಿದ್ದಾರೆ.

MLC BM Farooq own Range Rover Autobiography

ಬಿಎಂ ಫಾರೂಕ್ ಖರೀದಿಸಿರುವುದು ಪ್ರತಿಷ್ಠಿತ ರೇಂಜ್ ರೋವರ್ ನ ಆಟೋಬಯೋಗ್ರಫಿ ಕಾರು. ಇದು ಅಂತಿಂಥ ಕಾರಲ್ಲ ಅತ್ಯಾಧುನಿಕ ಮಾದರಿಯ ರೇಂಜ್ ರೋವರ್.

ಆಟೊಮೊಬೈಲ್ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡಿರುವ, ರೇಂಜ್ ರೋವರ್ ಕಂಪನಿಯ ಅತ್ಯಾಧುನಿಕ ಶೈಲಿಯ ಕಾರು ಇದಾಗಿದ್ದು, ರೇಂಜ್ ರೋವರ್ 4 ಪಾಯಿಂಟ್ 4 ರೇಂಜಲ್ಲಿ 2019 ಮಾಡೆಲ್ ಆಟೋಬಯೋಗ್ರಫಿ ಆಗಿದೆ.

ಫಾರೂಕ್ ಅವರಿಗೆ ಆಧುನಿಕ ಮಾದರಿ ಕಾರು ಕೊಳ್ಳುವುದು, ಓಡಿಸುವುದೆಂದರೆ ಒಂದು ರೀತಿ ಕ್ರೇಜ್ ಅಂತೆ. ಹೀಗಾಗಿ ಪ್ರತಿ ವರ್ಷವೂ ಹೀಗೆ ಹೊಸ ಕಾರುಗಳನ್ನು ಕೊಳ್ಳುವ ಅವರು, ಇದೀಗ ಸ್ವಂತಕ್ಕೆಂದು 15ನೇ ಕಾರು ತೆಗೆದುಕೊಂಡಿದ್ದಾರೆ.

MLC BM Farooq own Range Rover Autobiography

ಈಗಾಗಲೇ ಮೂರು ರೇಂಜ್ ರೋವರ್ ಗಳನ್ನು ಹೊಂದಿರುವ ಫಾರೂಕ್, ನಾಲ್ಕು ತಿಂಗಳ ಹಿಂದೆ ನ್ಯೂ ಮಾಡೆಲ್ ಆಟೋಬಯೋಗ್ರಫಿ ಬುಕ್ ಮಾಡಿದ್ದರು. ಮೊನ್ನೆ ರಂಜಾನ್ ಹಬ್ಬದ ಸಂಭ್ರಮದಲ್ಲಿರುವಾಗಲೇ ಕಾರನ್ನು ರಸ್ತೆಗಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಉಡುಪಿಯ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ರೋಲ್ಸ್ ರಾಯ್ಸ್ ಕಾರು ಖರೀದಿಸಿದಾಗ ಭಾರೀ ಸುದ್ದಿಯಾಗಿತ್ತು. ಇದೀಗ ಅಂತಹುದೇ ಲಕ್ಷುರಿ ಕಾರನ್ನು ಖರೀದಿಸಿದ್ದಾರೆ ಬಿ.ಎಂ.ಫಾರೂಕ್.

ಇನ್ನು ಮಂಗಳೂರಿಗೆ ಮುಖ್ಯ ಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅಗಮಿಸಿದರೆ ಈ ಕಾರಿನಲ್ಲಿಯೇ ಪ್ರಯಾಣಿಸಲಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಈ ಮೈತ್ರಿ ಸರ್ಕಾರ ಎಷ್ಟು ದಿನ ಉಳಿಯುತ್ತೋ ಅಂದಾಜಿಸಲು ಸಾದ್ಯವಾಗುತ್ತಿಲ್ಲ.

ಆದರೆ ಸರ್ಕಾರ ಇದ್ದಷ್ಟು ದಿನ ಮಂಗಳೂರಿನಲ್ಲಿ ಫಾರೂಕ್ ಅವರ ಈ ರೇಂಜ್ ರೋವರ್ ಆಟೋ ಬಯೋಗ್ರಫಿ ಕಾರೋಬಾರು ಜೋರಾಗಿಯೇ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+