ಪಿಣರಾಯ್ ವಿಜಯನ್ ಚಪ್ಪಲ್ ಶಾಪ್, ಮಾಲೀಕರು ಯು ಟಿ ಖಾದರ್

ಮಂಗಳೂರು, ಮಾರ್ಚ್. 06 : 'ಕಾಮರೆಡ್ ಪಿಣರಾಯ್ ವಿಜಯನ್ ಚಪ್ಪಲ್ ಶಾಪ್, ಮಾಲಕರು ಯು ಟಿ ಖಾದರ್ ಕರ್ನಾಟಕ ಚಪ್ಪಲ್ ಸಚಿವರು' ಎಂದು ಅವರ ಭಾವ ಚಿತ್ರವಿರುವ ಕರಪತ್ರವನ್ನು ಚಪ್ಪಲಿ ಮಾರಾಟಗಾರನ ರೀತಿಯಲ್ಲಿ ಮುದ್ರಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ಸಂದರ್ಭದಲ್ಲಿ 'ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂಬ ವಿವದಾತ್ಮಕ ಹೇಳಿಕೆ ನೀಡಿದ್ದ ರಾಜ್ಯ ಆಹಾರ ಸಚಿವ ಯು ಟಿ ಖಾದರ್ ಅವರ ವಿರುದ್ಧ ಕಿಡಿಗೇಡಿಗಳು ವ್ಯಂಗ್ಯ ಹಾಗೂ ಅಮಾನಕಾರಿಯಾಗಿ ಕರಪತ್ರ ಮುದ್ರಿಸಿ ಬಿ.ಸಿ.ರೋಡ್ ನಲ್ಲಿರುವ ಫ್ಲೈಓವರ್ ಪಿಲ್ಲರ್ ಮೇಲೆ ಅಂಟಿಸಿದ್ದಾರೆ.[ಸಂವಿಧಾನ ಗೌರವಿಸದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು -ಖಾದರ್]

Miscreants put up abusing poster against minister UT Khader

ಕಳೆದ ಫೆಬ್ರವರಿಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ವಿರೋಧಿಸಿದ ಸಂಘಪರಿವಾರದ ವಿರುದ್ಧ ಸಚಿವ ಖಾದರ್ ವಿವಾದಾತ್ನಕ ಹೇಳಿಕೆ ನೀಡಿದ್ದರು. ಇದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೇ ಸಚಿವ ಯು ಟಿ ಖಾದರ್ ಗೆ ವ್ಯಕ್ತಿಯೊಬ್ಬ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ. ಇದಕ್ಕೆ ದೂರವಾಣಿಯಲ್ಲೇ ಉತ್ತರಿಸಿದ ಸಚಿವರು, 'ನನ್ನ ಹೇಳಿಕೆ ಉದ್ದೇಶಪೂರ್ವಕವಾಗಿಲ್ಲ.

ಆದರೆ, ಚಪ್ಪಲಿ ಪದ ಪ್ರಯೋಗ ಯಾವುದೇ ಧರ್ಮೀಯರನ್ನು ಗುರಿಯಾಗಿಸಿ ಹೇಳದೆ, ಕೇವಲ ಸಂವಿಧಾನ ವಿರೋಧಿಗಳನ್ನು ಗುರಿಯಾಗಿಸಿ ಮಾತ್ರ ಹೇಳಿದ್ದೇನೆ' ಎಂದು ಸಮರ್ಥಿಸಿಕೊಂಡಿದ್ದರು.[ಚಪ್ಪಲಿಯಿಂದ ಹೊಡೆಯಬೇಕೆಂದಿದ್ದ ಸಚಿವ ಖಾದರ್ ಕ್ಷಮೆಯಾಚನೆ]

ಸಚಿವರ ಈ ದೂರವಾಣಿ ಕ್ಲಿಪ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕಿಡಿಗೇಡಿಗಳು ಸಚಿವರ ವಿರುದ್ಧ ಅವಹೇಳನಕಾರಿ ಕರಪತ್ರ ಮುದ್ರಿಸಿ ಪೇಟೆಗಳಲ್ಲಿ ಅಂಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+