• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಬಂದವರಿಗೆ ಭಾರೀ ನಿರಾಸೆ

|

ಮಂಗಳೂರು, ಸೆಪ್ಟೆಂಬರ್. 30: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಜನರನ್ನು ನಿರಾಸೆಗೊಳಿಸಿದ ಘಟನೆ ಮಂಗಳೂರಿನಲ್ಲಿ ಇಂದು ಭಾನುವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಜನರಿಗೆ ತಪ್ಪು ಮಾಹಿತಿ ನೀಡಿದ್ದೇ ಈ ಘಟನೆಗೆ ಕಾರಣವಾಗಿದೆ.

ಪ್ರಧಾನಿ ಮೋದಿ ಅವರ ಮನ್ ಕಿ ವಾತ್ ಕಾರ್ಯಕ್ರಮ ವನ್ನು ವೀಡಿಯೋ ಸಂವಾದ ಅಂತ ಹೇಳಿ ಜಿಲ್ಲಾ ಬಿಜೆಪಿ ಘಟಕ ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿತ್ತು. ಇದರಿಂದ ಪ್ರಧಾನಿ ಅವರೊಂದಿಗೆ ಮಾತನಾಡುವ ಅವಕಾಶದ ಆಸೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಜನರಿಗೆ ನಿರಾಸೆಯಾಯಿತು.

ಮೋದಿ ಮೌನ ಮುರಿದು ಸತ್ಯವನ್ನು ಬಿಚ್ಚಿಡಲಿ: ದಿನೇಶ್‌ ಗುಂಡೂರಾವ್‌

ಟಿ.ವಿ. ರಮಣ ಪೈ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಬಿಜೆಪಿ ಕೂಡಾ ಎಲ್ ಇ ಡಿ ಸ್ಕ್ರೀನ್ ಅಳವಡಿಸಿತ್ತು. ಹಾಲ್ ಜನರಿಂದ ತುಂಬಿ ಹೋಗಿತ್ತು. ಕಾರ್ಯಕ್ರಮ ಕೇವಲ 20 ನಿಮಿಷದ ಒಳಗೆ ಮುಗಿದಿದ್ದು, ಧ್ವನಿ ಮುದ್ರಿತ ವೀಡಿಯೋ ಮಾತ್ರ ಪ್ರಸಾರಗೊಂಡಿದೆ.

ಮೈಸೂರು ಜಿಪಂ ಬಿಜೆಪಿ-ಜೆಡಿಎಸ್ ಮೈತ್ರಿ ಬಿಕ್ಕಟ್ಟು: ಅಧ್ಯಕ್ಷ ಗಾದಿಗೆ ಪಟ್ಟು

ಪ್ರಧಾನಿ ಅವರೊಂದಿಗೆ ಮಾತನಾಡಲು, ಪ್ರಶ್ನೆ ಕೇಳಲು ಬಂದ ಜನ ಕೂಡ ನಿರಾಸೆಗೊಂಡಿದ್ದಾರೆ. ಆಡಿಯೋ ಕೇಳಲು ಬಂದ ಜನ ಮೊಬೈಲ್ ಸೆಲ್ಫಿ ತೆಗೆದುಕೊಳ್ಳುತ್ತಾ ಟೈಂ ಪಾಸ್ ಮಾಡಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಾತ್ರ ತಪ್ಪನ್ನು ದೂರದರ್ಶನದ ಮೇಲೆ‌ ಹೊರಿಸಿದ್ದು ತಾಂತ್ರಿಕ ಸಮಸ್ಯೆ ಅಂತ ಸಮಜಾಯಿಷಿ ನೀಡಿದೆ.

English summary
Prime Minister Narendra Modi's Mann Ki Baat program has disappointed Dakshina Kannada people. Dakshina Kannada BJP District unit has misleading people.so this incident has happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X