ಮಂಗಳೂರಿನ ಮಹಿಳೆಯರಿಗಿಲ್ಲ ಫ್ರೀ ಬಸ್ ಭಾಗ್ಯ! ಯಾಕೆ ಗೊತ್ತಾ?

ಮಂಗಳೂರು, ಜೂನ್‌ 1: ರಾಜ್ಯದ ಮಹಿಳೆಯರಿಗೆ ದೊರೆತ ಫ್ರೀ ಬಸ್ ಭಾಗ್ಯ ಕರಾವಳಿಯ ಮಹಿಳೆಯರಿಗೆ ಮರೀಚಿಕೆಯಾಗಿದೆ. ಇಲ್ಲಿ ಸರ್ಕಾರಿ ಬಸ್ ಗಿಂತ ಖಾಸಗಿ ಬಸ್‌ ಗಳದ್ದೇ ಪ್ರಾಬಲ್ಯ. ಕೇವಲ ಮಂಗಳೂರು ನಗರದೊಳಗಡೇ ಬರೋಬ್ಬರಿ 362 ಖಾಸಗಿ ಸಿಟಿ ಬಸ್‌ಗಳಿವೆ. ಪರಿಣಾಮ ಸರಕಾರದ ಈ ಹೊಸ ಸೌಲಭ್ಯದಿಂದ ಕರಾವಳಿಯ ಮಹಿಳೆಯರು ಖಂಡಿತಾ ವಂಚಿತರಾಗಲಿದ್ದಾರೆ.

ಕರಾವಳಿಯಲ್ಲಿ ಸರಿಸುಮಾರು 30 ಪ್ರತಿಶತ ಮಹಿಳೆಯರು ದಿನ ನಿತ್ಯವೂ ಬಸ್‌ನಲ್ಲಿ ಓಡಾಡುತ್ತಾರೆ. ಆದರೆ ಮಂಗಳೂರು ನಗರದೊಳಗಡೆ ಸರಕಾರದ 30 ನಗರ ಸಾರಿಗೆ ಬಸ್ ಗಳು ಮಾತ್ರ ಸಂಚರಿಸುತ್ತದೆ. ಮಿಕ್ಕಂತೆ ಇಲ್ಲಿ ಖಾಸಗಿ ಬಸ್‌ಗಳದ್ದೇ ಪ್ರಾಬಲ್ಯ. ಇದೀಗ ಕರಾವಳಿಯ ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಲು ಕಾರ್ಕಳ ಶಾಸಕ ಸುನೀಲ್ ಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.

Mangaluru Women Do Not Get Karnataka Free Bus Scheme

ಕರಾವಳಿಯ ಮಹಿಳೆಯರೂ ತಮಗೆ ಉಚಿತ ಬಸ್ ಪ್ರಯಾಣ ಸಿಕ್ಕಲ್ಲಿ ಸಂತೋಷವೇ ಎಂಬಂತಹ ಭಾವನೆಯಲ್ಲಿದ್ದಾರೆ. ಆದರೆ ಸರಕಾರ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈಗಾಗಲೇ ಖಾಸಗಿ ಬಸ್ ಗಳು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಪ್ರಯಾಣಿಕರ ಪಾಸ್ ಅನ್ನು ನೀಡಿದೆ.

ಈ ಮೂಲಕ ವಾರ್ಷಿಕ 15 ಕೋಟಿ ರೂ. ಬಸ್ ಮಾಲಕರ ಸಂಘದಿಂದಲೇ ಭರಿಸಲಾಗುತ್ತದೆ. ಕೆ.ಎಸ್.ಆರ್.ಟಿ.ಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶುಲ್ಕವನ್ನು ಸರ್ಕಾರ ಭರಿಸುವ ರೀತಿ ಖಾಸಗಿ ಬಸ್‌ಗೂ ನೀಡಿದ್ದಲ್ಲಿ, ನಮ್ಮಲ್ಲೂ ಉಚಿತ ಪ್ರಯಾಣದ ಅವಕಾಶ ನೀಡುತ್ತೇವೆ ಎಂದು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿದ್ದಾರೆ.

Mangaluru Women Do Not Get Karnataka Free Bus Scheme

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್‌ಗಳೇ ಸಂಚಾರ ನಡೆಸುತ್ತಿದೆ. ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಸರ್ಕಾರಿ ಬಸ್‌ಗಳೇ ಅನಿವಾರ್ಯವಾಗಿದೆ. ಸರ್ಕಾರಿ ಬಸ್ ಗಳಲ್ಲೂ 30% ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಮೂಲಕ ಸರ್ಕಾರದ ಯೋಜನೆಗಳು ನಗರವಾಸಿಗಳಿಗಿಂತ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಬಹುದು ಎನ್ನುವುದು ಸದ್ಯದ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+