ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಅನುಶ್ರೀ, ಸೌಮ್ಯ ಕೋಟ್ಯಾನ್‌ಗೆ ಬಂಗಾರದ ಪದಕ

|
Google Oneindia Kannada News

ಮಂಗಳೂರು, ಏಪ್ರಿಲ್ 29 : ಹಿಂದಿ ಸ್ನಾತಕೋತ್ತರ ಅಧ್ಯಯನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮೊದಲ ರ್‍ಯಾಂಕ್ ಪಡೆದಿರುವ ಅನುಶ್ರೀ ಎ.ಸಿ ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಲಭ್ಯವಿರುವ ಹಿಂದಿ ಸ್ನಾತಕೋತ್ತರ ಪದವಿಯಲ್ಲಿ 88.89% ಅಂಕ ಪಡೆದಿರುವ ಇವರು, 2015-16ರಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಿದಾಗಿನಿಂದ ಚಿನ್ನದ ಪದಕ ಪಡೆದ ಎರಡನೇ ವಿದ್ಯಾರ್ಥಿನಿ ಎನಿಸಿದ್ದಾರೆ.

ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಆದಿತ್ಯ ಶೆಣೈರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಆದಿತ್ಯ ಶೆಣೈ

ವಿಶ್ವವಿದ್ಯಾನಿಲಯ ಕಾಲೇಜಿನಲ್ಲೇ ಹಿಂದಿ ಸಾಹಿತ್ಯವನ್ನೇ ಐಚ್ಛಿಕ ವಿಷಯವನ್ನಾಗಿ 2015-16ರಲ್ಲಿ ಪದವಿ ಮುಗಿಸಿರುವ ಅನುಶ್ರೀ, ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Mangaluru University : Gold medal to Anushri in Hindi

ಯೋಗ ವಿಜ್ಞಾನ ವಿಭಾಗ:

ವಿಶ್ವವಿದ್ಯಾನಿಲಯ ಕಾಲೇಜಿನ ಯೋಗ ವಿಜ್ಞಾನ ಡಿಪ್ಲೋಮಾ ವಿಭಾಗದಲ್ಲಿ ಸೌಮ್ಯ ನೀಲೇಶ್ ಕೋಟ್ಯಾನ್ ಮೊದಲ ರ್‍ಯಾಂಕ್ ಪಡೆದುಕೊಂಡಿದ್ದಾರೆ. ನಗರದ ತಲಪಾಡಿಯ ಶಾರದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಅವರು, ಮಂಗಳೂರು ವಿಶ್ವವಿದ್ಯಾನಿಲಯದ (ಮೊದಲು ವಿಶ್ವವಿದ್ಯಾನಿಲಯ ಕಾಲೇಜಿನ) ಸಿಬ್ಬಂದಿ ಬಾಲಿನಿಯವರ ಪುತ್ರಿಯೂ ಹೌದು.

ಕನ್ನಡ ಎಂಎಯಲ್ಲಿ ಐದು ಚಿನ್ನದ ಪದಕ ಪಡೆದ ಮಹಾರಾಷ್ಟ್ರದ ಯುವತಿಕನ್ನಡ ಎಂಎಯಲ್ಲಿ ಐದು ಚಿನ್ನದ ಪದಕ ಪಡೆದ ಮಹಾರಾಷ್ಟ್ರದ ಯುವತಿ

ಇದೇ ವಿಭಾಗದಲ್ಲಿ ಗಟ್ಟಿ ವಿಜಯ ಭಾರತಿ ಮೂರನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಆಂಧ್ರ ಪ್ರದೇಶ ಮೂಲದವರಾದ ವಿಜಯ ಭಾರತಿಯವರ ಪತಿ ಮರ್ಚಂಟ್ ನೌಕಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗ ವಿಜ್ಞಾನದ ಕುರಿತು ಅವರಿಗಿದ್ದ ಅಪಾರ ಆಸಕ್ತಿ ಈ ಸಾಧನೆ ಮಾಡಲು ಕಾರಣವಾಗಿದೆ.

English summary
Mangaluru University : Gold medal to Anushri in Hindi. She has secured 88.89% marks. Sowmya Nilesh Kotyan has secured gold medal in Yoga Science Diploma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X