Mangaluru-Ayodhya Special Train: ಮಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲು-ಸಮಯ, ದರಗಳ ಮಾಹಿತಿ
ಮಂಗಳೂರು, ಫೆಬ್ರವರಿ, 08: ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯಮತ್ತೂರು-ದರ್ಶನ ನಗರ್-ಕೊಯಮತ್ತೂರು ಆಸ್ತಾ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ. ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಫೆಬ್ರವರಿ 8ರಂದು ಹೊರಡಲಿದ್ದು, ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ಅಯೋಧ್ಯೆಗೆ ತೆರಳಲಿದೆ.
ಇಂದು (ಫೆಬ್ರವರಿ 8) ಸಂಜೆ 5:50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ, 6ಕ್ಕೆ ತೆರಳುವ ಈ ರೈಲು ಫೆಬ್ರವರಿ ಫೆಬ್ರವರಿ 11ರ ಬೆಳಗ್ಗೆ ಆಯೋಧ್ಯೆಗೆ ದರ್ಶನ್‌ನಗರ ನಿಲ್ದಾಣ ತಲುಪಲಿದೆ. ಮತ್ತೆ ಫೆಬ್ರವರಿ 12ರಂದು ಬೆಳಗ್ಗೆ 8ಕ್ಕೆ ಅಯೋಧ್ಯೆಯಿಂದ ಹೊರಟು ಫೆಬ್ರವರಿ 14ರ ಸಂಜೆ ಮಂಗಳೂರು ಜಂಕ್ಷನ್ ತಲುಪಲಿದೆ.

ಪರೀಕ್ಷಾರ್ಥ ರೈಲು ಸಂಚಾರ ಯಶಸ್ವಿ: ಕಾರಟಗಿ ರೈಲು ನಿಲ್ದಾಣದಿಂದ ರಾಯಚೂರು ಜಿಲ್ಲೆಯ ಈ ಮಾರ್ಗದಲ್ಲಿ ರೈಲು ಸಂಚಾರ ಯಶಸ್ವಿಯಾಗಿದೆ. ಹಾಗಾದರೆ ಯಾವ ಮಾರ್ಗದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ಕಾರಟಗಿ ರೈಲು ನಿಲ್ದಾಣದಿಂದ ಸಿಂಧನೂರು ನಗರದ ರೈಲು ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲು ಸಂಚಾರವು ಯಶಸ್ವಿಯಾಗಿದೆ. ಅಂದಾಜು 130 ಕಿ.ಮೀ.ವೇಗದಲ್ಲಿ 3 ಬೋಗಿಗಳನ್ನು ಹೊಂದಿದ್ದ ರೈಲ್ವೆ ಎಂಜಿನ್ ಅನ್ನು ಕಾರಟಗಿಯಿಂದ ಸಿಂಧನೂರುವರೆಗೆ ಎರಡು ಭಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು. ಈ ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳು, ಟ್ರ್ಯಾಕ್ ಅಧಿಕಾರಿಗಳು ಕಾಮಗಾರಿಗಳ ಭದ್ರತೆಯನ್ನು ಪರಿಶೀಲನೆ ಮಾಡಿದರು.
ಅಲ್ಲದೆ ಕಾರಟಗಿ-ಸಿಂಧನೂರು ನಡುವಿನ ರೈಲ್ವೆ ನಿಲುಗಡೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಕೂಡ ಪರಿಶೀಲಿಸಿದರು. ಸುಮಾರು 14 ಕಿಲೋ ಮೀಟರ್ ಸಂಚಾರ ನಡೆಸುವ ಮೂಲಕ ಸಣ್ಣಪುಟ್ಟ ಲೋಪದೋಷಗಳನ್ನು ತಿಳಿದುಕೊಂಡರು. ಅಷ್ಟೇ ಅಲ್ಲದೆ ಸೇತುವೆ ಮೇಲೆ ಸಂಚಾರ ಮತ್ತಿತರ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಉಮಾಮಹೇಶ್ವರ, ರಾಮಾಶ್ರಮಜಾ ಹಾಗೂ ಸಿಬ್ಬಂದಿ, ಕಾರ್ಮಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications