ಮಂಗಳೂರಿನ ಸಹ್ಯಾದ್ರಿ ಕಾಲೇಜಿಗೆ 'ಬಿ' ಗ್ರೇಡ್ ಮಾನ್ಯತೆ
ಮಂಗಳೂರು, ಅಕ್ಟೋಬರ್.05: ಭಾರತ ಘನ ಸರ್ಕಾರದ ಅಪೆಕ್ಸ್ ಬಾಡಿ ಗುರುತಿಸಲ್ಪಟ್ಟಿರುವ ರಾಜ್ಯದ ಕೆಲವೇ ಕಾಲೇಜುಗಳಲ್ಲಿ ಮಂಗಳೂರಿನ ಸಹ್ಯಾದ್ರಿಯು ಒಂದಾಗಿದೆ.
ಅಂದಹಾಗೆ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡೆಸುವ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ರೂಪದಲ್ಲಿ ಕೇಂದ್ರ ಸರ್ಕಾರದ ನೆರವು ಪಡೆಯುವ ಅರ್ಹತೆ ಹೊಂದಿದೆ.
ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಕಾರ್ಯಕ್ರಮಗಳೊಂದಿಗೆ ನಡೆಸುವ ಮಾನವ ಸಂಪನ್ಮೂಲ ಅಭಿವೃದ್ಧಿಗೆ ನೆರವು ಮಾಡಲಾಗುತ್ತದೆ.
ಸಹ್ಯಾದ್ರಿ ಈಗ ಯುಜಿಸಿ ಕಾಯಿದೆ, 1956ರ ಸೆಕ್ಷನ್ 12(ಬಿ)ಅಡಿಯಲ್ಲಿ ರಚಿಸಲಾದ ನಿಯಮಗಳ ಆಧಾರದಲ್ಲಿ ಕೇಂದ್ರ ನೆರವು ಪಡೆಯಲು ಅರ್ಹವಾಗಿದೆ ಎಂದು ಘೋಷಿಸಲ್ಪಟ್ಟಿದೆ.

ತಾಂತ್ರಿಕ ಶಿಕ್ಷಣ ಮತ್ತು ಶೈಕ್ಷಣಿಕ ಯೋಜನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದೀಗ AICTE,VGST, DST,ಕರ್ನಾಟಕ ಸರಕಾರದ ನೆರವಿನೊಂದಿಗೆ ಯುಜಿಸಿ (UGC) ಯ ಬೆಂಬಲವನ್ನು ಸಹ ಪಡೆಯಬಹುದಾಗಿದೆ.
ಈ ಗುರುತಿಸುವಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ಇರುವ ಮೂಲಭೂತ ಸೌಕರ್ಯ, ಶೈಕ್ಷಣಿಕ ಸೌಲಭ್ಯಗಳನ್ನು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುವ ಉನ್ನತ ಶಿಕ್ಷಣವನ್ನು ಆಧರಿಸಿ ನೀಡಲಾಗಿದೆ.












Click it and Unblock the Notifications