ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಲಿ ರಾಷ್ಟ್ರಗಳಲ್ಲೂ ಮಂಗಳೂರಿನ ಮೊಯ್ದೀನ್ ಬಾವಾ ಚುನಾವಣೆ ಪ್ರಚಾರ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 7: ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಭರಾಟೆ ಎಲ್ಲಿಯವರೆಗೆ ಹಬ್ಬಿದೆ ಗೊತ್ತೆ? ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವಾ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.

ಕರಾವಳಿ ಮೂಲದ ಸಾವಿರಾರು ಮಂದಿ ಸೌದಿ ಅರೇಬಿಯಾ, ಕುವೈತ್, ಇರಾನ್, ಕತಾರ್ ಮತ್ತಿತರ ಮುಸ್ಲಿಂ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಈ ಪೈಕಿ ಹೆಚ್ಚಿನವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರಾವಳಿಗೆ ಆಗಮಿಸಿ, ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಹೀಗಾಗಿ ಎರಡು ದಿನಗಳ ಹಿಂದೆ ಮೆಕ್ಕಾಗೆ ಭೇಟಿ ನೀಡುವ ನೆಪದಲ್ಲಿ ಮೊಯ್ದೀನ್ ಬಾವಾ ಸೌದಿ ಅರೇಬಿಯಾದ ಜೆಡ್ಡಾಕ್ಕೆ ತೆರಳಿ, ಪ್ರಚಾರ ಸಭೆ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ - ಮದೀನ ಇರುವ ಪ್ರಾಂತ್ಯದಲ್ಲೇ ಜೆಡ್ಡಾ ನಗರ ಇದ್ದು, ಸೌದಿ ಅರೇಬಿಯಾದ ಎರಡನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಕರಾವಳಿ ಭಾಗದ ನಿವಾಸಿಗಳು ಜೆಡ್ಡಾ ನಗರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ಹಮ್ಮಿಕೊಂಡು, ಶಾಸಕ ಬಾವಾರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

Mangaluru north Congress MLA Mohiuddin Bava election campaign at Soudi Arabia

ಕಾಂಗ್ರೆಸ್ ಪಕ್ಷದ ಬಾವುಟ ಮತ್ತು ಟೋಪಿ ಧರಿಸಿದ್ದ ಸಾವಿರಾರು ಮಂದಿ ಶಾಸಕ ಬಾವಾ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶಾಸಕ ಮೊಯ್ದೀನ್ ಬಾವಾ ಪರವಾಗಿ ಮತದಾನ ಮಾಡಲು ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅನಿವಾಸಿಗಳಗೆ ವಿಮಾನದ ಟಿಕೆಟ್ ವ್ಯವಸ್ಥೆ ಮಾಡುವ ಆಮಿಷದ ಆಡಿಯೋ ಕ್ಲಿಪ್ಪಿಂಗ್ ಎರಡು ತಿಂಗಳ ಹಿಂದೆ ಹರಿದಾಡಿತ್ತು.

ಇದೀಗ ಸೌದಿ ಅರೇಬಿಯಾದಲ್ಲಿ ಶಾಸಕ ಮೊಯ್ದೀನ್ ಬಾವಾ ದೊಡ್ಡ ಮಟ್ಟದ ಪ್ರಚಾರ ಸಭೆ ನಡೆಸಿದ್ದು, ಟಿಕೆಟ್ ವ್ಯವಸ್ಥೆಯನ್ನೂ ಮಾಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಮಂಗಳೂರು ಉತ್ತರ ಕ್ಷೇತ್ರದ ನಾಲ್ಕು ಸಾವಿರಕ್ಕೂ ಹೆಚ್ಚು ಮತದಾರರು ಸೌದಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

ಅಲ್ಲಿ ಪ್ರಚಾರ ಸಭೆ ನಡೆಸಿದ್ದಲ್ಲದೆ, ತಮ್ಮ ಕುಂದುಕೊರತೆ ಆಲಿಸಲು ಸದಾ ಬದ್ಧನಿದ್ದೇನೆ ಅನ್ನುವ ಮಾತನ್ನು ಶಾಸಕ ಮೊಯ್ದೀನ್ ಬಾವಾ ಸಭೆಯಲ್ಲಿ ಆಡುತ್ತಿರುವ ವಿಡಿಯೋ ಲಭ್ಯವಾಗಿದೆ. ಹೀಗಾಗಿ ರಾಜ್ಯ ಚುನಾವಣೆ ಕಾವು ಹೊರ ದೇಶಕ್ಕೂ ಹಬ್ಬಿರುವುದಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ.

English summary
Karnataka assembly elections 2018: Mangaluru north Congress MLA Mohiuddin Bava election campaign at Soudi Arabia. Video clippings of campaign went viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X