ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ವೀಡಿಯೋಗಳ ತಡೆಗೆ ಮಂಗಳೂರು ನಿಯೋಗ ಒತ್ತಾಯ

By Vanitha
|
Google Oneindia Kannada News

ಮಂಗಳೂರು, ಅಕ್ಟೋಬರ್, 10 : ಅಪ್ರಾಪ್ತ ಮಕ್ಕಳಿರುವ ಸೆಕ್ಸ್ ವೀಡಿಯೋ, ಅನಿಮಲ್ ಸೆಕ್ಸ್ ವೀಡಿಯೋ ಇನ್ನಿತರ ಅಶ್ಲೀಲ ವೀಡಿಯೋ ಹಾಗೂ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವ ಟ್ವಿಟರ್, ಸಾಮಾಜಿಕ ಜಾಲತಾಣಗಳ ವಿರುದ್ಧ ಫೋಕ್ಸೋ, ಐ.ಟಿ ಕಾಯ್ದೆ ಅಡಿ ಅಕ್ಟೋಬರ್ 9ರ ಶುಕ್ರವಾರದಂದು ಮಂಗಳೂರು ನಿಯೋಗ ದೂರು ದಾಖಲಿಸಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಶ್ಲೀಲ ವೀಡಿಯೋಗಳ ಪ್ರಸಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಸಾಮಾಜಿಕ ಜಾಲತಾಣ, ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲು ನಿಯೋಗ ನಿರ್ಧರಿಸಿದೆ. ಹಾಗಾಗಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲು ವಿವಿಧ ಸಂಘ ಸಂಸ್ಥೆ ಪ್ರತಿನಿಧಿಗಳ ಜೊತೆ ತೆರಳಿದ ನಿಯೋಗ ದೂರು ನೀಡಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಐ.ಟಿ ಇಂಜಿನಿಯರ್ ಸಂತೋಷ ಕುಮಾರ್ ತಿಳಿಸಿದ್ದಾರೆ.[ಯುವತಿಯರೇ ಫೇಸ್ಬುಕ್ ನಲ್ಲಿ ಚಾಟ್ ಮಾಡುವ ಮುನ್ನ ಎಚ್ಚರ!]

Mangaluru niyoga officers urged complaint against twitter and social media

ಈ ಪೀಳಿಗೆಯ ಮಕ್ಕಳು ಪ್ರತಿನಿತ್ಯ ಮೊಬೈಲ್, ಇನ್ನಿತರ ಸಾಮಾಜಿಕ ಜಾಲತಾಣಗಳನ್ನು ಬಹಳ ನೆಚ್ಚಿಕೊಂಡಿದ್ದಾರೆ. ಸೆಕ್ಸ್ ವೀಡಿಯೋಗಳನ್ನು ನೋಡಿದ ಮಕ್ಕಳು ಸಾಮಾಜಿಕ ವಿರೋಧ ಚಟುವಟಿಕೆಗಳತ್ತ ಮುಖ ಮಾಡುವ ಸಾಧ್ಯತೆಗಳಿವೆ. ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಲು ಅಶ್ಲೀಲ ವೀಡಿಯೋಗಳು ಪ್ರೇರೇಪಿಸುತ್ತದೆ ಎಂದು ಪಡಿ ಸಂಸ್ಥೆಯ ರೆನ್ನಿ ಡಿಸೋಜ ಕಳವಳ ವ್ಯಕ್ತಪಡಿಸಿದರು.

ಮಂಗಳೂರು ದಕ್ಷಿಣ, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಐ.ಟಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಫೋಕ್ಸೋ ಕಾಯ್ದೆ ಅಡಿ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಿರ್ದೇಶಕ ಹಿಲ್ಡಾ ರಾಯಪ್ಪನ್, ಮಂಗಳೂರು ಮಕ್ಕಳ ಸಹಾಯವಾಣಿ-1098 ಸಂಯೋಜನಾಧಿಕಾರಿ ಯೋಗೀಶ್ ಮಲ್ಲಿಗೆ ಮಾಡು ನಾಗರಾಜ ಪಣಕಜೆ, ಸಾಮಾಜಿಕ ಕಾರ್ಯಕರ್ತರು ಮುಂತಾದ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

English summary
Mangaluru niyoga officers, social workers urged complaint against twitter and social media on Friday October 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X