ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡುಬಡತನದಲ್ಲೂ ನಿಲ್ಲದ ದೈವ ಪ್ರೀತಿ: ತುಳುನಾಡಿನ ದೈವಾರಾಧನೆಯ ಶ್ರದ್ಧೆಗೆ ಇದೇ ಸಾಕ್ಷಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ನವೆಂಬರ್‌8: ತುಳುನಾಡಿನ ದೈವಾರಾಧನೆ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ ಬಳಿಕ ಜಗತ್ ಪ್ರಸಿದ್ಧಿಯಾಗಿದೆ. ದೈವಾರಾಧನೆಯ ಆಚರಣೆಯ ಬಗ್ಗೆ ಹಲವು ಪರವಿರೋಧದ ಮಾತುಗಳು ಪ್ರಗತಿಪರರಿಂದ ಕೇಳಿಬಂದಿದೆ.

ಕಾಂತಾರ ಚಿತ್ರದ ಬಳಿಕ ಕರಾವಳಿಯ ದೈವರಾಧನೆಯ ಬಗ್ಗೆ ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೆ ಕುತೂಹಲ ಮೂಡಿದೆ. ದೈವ ಎಂದರೇನು..? ಇದರ ಮೂಲವೇನು..? ದೈವಾರಾಧನೆಯ ಆಚರಣೆ ಹೇಗೆ ಎನ್ನುವುದರ ಬಗ್ಗೆ ಅನೇಕರಿಗೆ ತಿಳಿದುಕೊಳ್ಳುವ ಆಸಕ್ತಿ ಮೂಡಿದೆ.

ಚಂದ್ರಗ್ರಹಣ 2022: ರಾಜ್ಯದ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆಚಂದ್ರಗ್ರಹಣ 2022: ರಾಜ್ಯದ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ

ದೈವಾರಾಧನೆಯ ಆಚರಣೆಯ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದೆ. ಆದರೆ ದೈವಾರಾಧನೆ ತುಳು ನಾಡಿನ ಜನರ ಜೀವನದಲ್ಲಿ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ‌ ಎನ್ನುವುದಕ್ಕೆ ಕಿನ್ನಿಗೋಳಿಯ ಮುಂಡ್ಕೂರಿನಲ್ಲಿರುವ ಬಡಕುಟುಂಬದ ದೈವಾರಾಧನೆಯೇ ಸಾಕ್ಷಿಯಾಗಿದೆ.

ಬೆಂಕಿ ಅಪಘಾತದಲ್ಲಿ ನೆಲ ಸಮವಾದ ದೈವಾರಾಧಕರ ಮನೆ

ಬೆಂಕಿ ಅಪಘಾತದಲ್ಲಿ ನೆಲ ಸಮವಾದ ದೈವಾರಾಧಕರ ಮನೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಕಿನ್ನಿಗೋಳಿಯ ಮುಂಡ್ಕೂರು ಪೊಸ್ರಾಲ್ ನಿವಾಸಿ ಸುಹಾಸಿನಿ ಶೆಟ್ಟಿ ಕುಟುಂಬ ಬಡತನದಲ್ಲಿದ್ದಾರೆ. ಆದರೆ ಅವರು ದೈವದ ಮೇಲಿನ ಪ್ರೀತಿ ಹಾಗೂ ಭಕ್ತಿಯಲ್ಲಿ ಶ್ರೀಮಂತರಾಗಿದ್ದಾರೆ. ಸುಹಾಸಿನಿ ಶೆಟ್ಟಿ ಮತ್ತು ಅವರ ಪತಿ ಕೂಲಿ ಕೆಲಸಕ್ಕೆ ಹೋಗಿ, ಮೊದಲು ಅವರ ಪಾಲಿಗೆ ಇದ್ದ ಸಣ್ಣ ಮನೆಯಲ್ಲಿ ನೆಮ್ಮದಿಯ ಜೀವನ ಮಾಡುತ್ತಿದ್ದರು. ಮಗ ದ್ವಿತೀಯ ಪಿಯುಸಿ ಕಲಿಯುತ್ತಿದ್ದರೆ, ಮಗಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿದ್ದರು. ಬಡತನದ ಮಧ್ಯೆ ಈ ಕುಟುಂಬದ ಬದುಕು ಹೀಗೆ ಸಾಗುತ್ತಿರಬೇಕಾದರೆ ಎರಡು ವರ್ಷದ ಹಿಂದೆ ಇದ್ದ ಮನೆಗೆ ಬೆಂಕಿ ಬಿದ್ದು ಸಂಪೂರ್ಣ ನಾಶವಾಗಿದೆ. ಅಂದಿನಿಂದ ಈ ಕುಟುಂಬಕ್ಕೆ ಸಂಕಷ್ಟದ ದಿನಗಳು ಆರಂಭವಾಗಿದೆ.

ಸಿಮೆಂಟ್ ಶೀಟ್‌ ಗುಡಿಸಿಲಿನಲ್ಲಿ ದೈವ

ಸಿಮೆಂಟ್ ಶೀಟ್‌ ಗುಡಿಸಿಲಿನಲ್ಲಿ ದೈವ

ಕಳೆದ ಎರಡು ವರ್ಷಗಳಿಂದ ಮನೆ ಇಲ್ಲದೇ ಇಡೀ ಕುಟುಂಬ ಪಡಬಾರದ ಕಷ್ಟ ಪಟ್ಟಿದೆ. ಕೊನೆಗೂ ಅಲ್ಲಿಯೇ ಪಕ್ಕದ ಮನೆಯೊಂದರಲ್ಲಿ ತಿಂಗಳಿಗೆ ಎರಡು ಸಾವಿರ ರೂಪಾಯಿ ಬಾಡಿಗೆ ನೀಡಿ ಜೀವನ ಮಾಡುತ್ತಿದ್ದಾರೆ. ಸುಹಾಸಿನಿ ಕುಟುಂಬ ಮಾತ್ರವಲ್ಲದೇ ತಾವು ಆರಾಧಿಸಿಕೊಂಡು ಬರುತ್ತಿರುವ ದೈವವೂ ಈಗ ಮನೆ ಹೊರಗಡೆಯೇ ಇರುವಂತಾಗಿದೆ. ದೈವಕ್ಕೆ ಸಿಮೆಂಟ್ ಶೀಟ್‌ನ ಸಣ್ಣ ಗುಡಿಸಲು ಮಾಡಿ ಅಲ್ಲಿಯೇ ದೈವದ ಪೀಠವನ್ನು ಇಡಲಾಗಿದೆ. ಗಂಡ ಹೆಂಡತಿ ಜೀವನ ನಡೆಸುವುದು ಕಷ್ಟವಾದ ಸಂದರ್ಭದಲ್ಲಿ ಮನೆ ಕಟ್ಟಲು ಸಾಧ್ಯವಾಗದೆ ಸುಹಾಸಿನಿ ಶೆಟ್ಟಿ ಕುಟುಂಬ ಪ್ರತಿ ದಿನ ಕಷ್ಟದಲ್ಲೇ ದಿನ ಕಳೆಯುತ್ತಿದೆ.

ದೈವಕ್ಕೂ ಸೂರಿಲ್ಲವೆಂದು ಕುಟುಂಬದ ಬೇಸರ

ದೈವಕ್ಕೂ ಸೂರಿಲ್ಲವೆಂದು ಕುಟುಂಬದ ಬೇಸರ

ತಮಗೆ ಮನೆ ಇಲ್ಲದಿದ್ದರೂ ,ಸುಹಾಸಿನಿ ಶೆಟ್ಟಿ ಕುಟುಂಬ ತಮ್ಮ ಆರಾಧ್ಯ ದೈವಕ್ಕೆ ಯಾವುದೇ ತೊಂದರೆಯಾಗದಂತೆ ಮನೆಯ ಬಾವಿಯ ಬಳಿ ಸಣ್ಣ ಗುಡಿಸಲು ಮಾಡಿ ದೈವದ ಪೀಠ ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿದಿನ ದೈವಕ್ಕೆ ಶರಣಾಗಿ ತಮ್ಮ ಕಷ್ಟಗಳನ್ನು ಬಗೆಹರಿಸು ಅಂತಾ ದೈವದ ಮುಂದೆ ಸುಹಾಸಿನಿ ಶೆಟ್ಟಿ ಕುಟುಂಬ ಬೇಡುತ್ತಿದೆ. ತಮಗೆ ಮನೆ ಇಲ್ಲದಿದ್ದರೂ ತಾವು ನಂಬುವ ದೈವಕ್ಕೆ ಯಾವುದೇ ಅಪಚಾರ ಆಗದಂತೆ ಮುರಿದುಬಿದ್ದ ಮನೆಯ ಮುಂದೆ ಶ್ರಧ್ಧೆಯಿಂದ ದೈವದ ಪೀಠಕ್ಕೆ ಕೈಮುಗಿಯುತ್ತಾರೆ. ತಮ್ಮ‌ ಜೊತೆಗೆ ತಾವು ನಂಬಿದ ದೈವವೂ ಚಳಿ,ಮಳೆ‌ ಬಿಸಿಲಿಗೆ ಹೊರಗಡೆ ಇರುವುದು ಸುಹಾಸಿನಿ ಶೆಟ್ಟಿ ಕುಟುಂಬಕ್ಕೂ ದುಃಖ ತಂದಿದೆ.

ದಾನಿಗಳ ನಿರೀಕ್ಷೆಯಲ್ಲಿ ಬಡ ಕುಟುಂಬ

ದಾನಿಗಳ ನಿರೀಕ್ಷೆಯಲ್ಲಿ ಬಡ ಕುಟುಂಬ

ಸುಹಾಸಿನಿ ಶೆಟ್ಟಿ ಹಾಗೂ ಕುಟುಂಬ ಮನೆ ಇಲ್ಲದೆ ಕಷ್ಟದಲ್ಲಿದ್ದಾರೆ. ಸರ್ಕಾರದ ಯೋಜನೆಯಿಂದಾರೂ ಮನೆ ಸಿಗುವ ನಿರೀಕ್ಷೆಯಲ್ಲಿ ಸುಹಾಸಿನಿ ಮನೆಗಾಗಿ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸುಹಾಸಿನಿಯವರಿಗೆ ಜಮೀನಿನ ತಾಂತ್ರಿಕ ಕಾರಣದಿಂದ ಮನೆ ಒದಗಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಮಕ್ಕಳು ಓದಿನಲ್ಲಿ ಮುಂದಿದ್ದು ,ಅವರಿಗೆ ಮುಂದಿನ ವಿದ್ಯಾರ್ಜನೆ ಮಾಡಿಸಲು ಸುಹಾಸಿನಿ ದಂಪತಿಯಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಡೀ ಕುಟುಂಬ ಈಗ ಸಹಾಯ ಮಾಡುವ ದಾನಿಗಳ ನಿರೀಕ್ಷೆಯಲ್ಲಿದೆ.

English summary
Mangaluru kinnigoli Daiva worshipper Family Lost Their House in Fire Accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X