• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ದಸರಾ 2022: ದಸರಾ ಉತ್ಸವ ಯಶಸ್ವಿ, ಹುಲಿ ಕುಣಿತದಲ್ಲಿ ಮಿಂದೆದ್ದ ಜನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್‌, 06: ಪ್ರಸಿದ್ದ ಮಂಗಳೂರು ದಸರಾ ಸಂಪನ್ನವಾಗಿದೆ. ದಸರಾ ಮಹೋತ್ಸವ ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ದಸರಾ ಮೆರವಣಿಗೆ ಆರಂಭಗೊಂಡಿದ್ದು, ಇಂದಿಗೆ ದಸರಾ ಮೆರವಣಿಗೆ ಮುಕ್ತಾಯಗೊಂಡಿದೆ.

ಸುಮಾರು 80ಕ್ಕೂ ಅಧಿಕ ಸ್ಥಬ್ದಚಿತ್ರಗಳು ದಸರಾ ಮೆರವಣಿಗೆಗೆ ಮೆರಗು ನೀಡಿದ್ದವು. ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಜನ ಭಕ್ತರು ದಸರಾ ಮೆರವಣಿಗೆಗೆ ಸಾಕ್ಷಿಯಾದರು. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 9 ದಿನಗಳಿಂದ ಅದ್ದೂರಿಯಾಗಿ ನಡೆದ ನವರಾತ್ರಿ ಮಹೋತ್ಸವಕ್ಕೆ ಮೆರವಣಿಗೆಯೊಂದಿಗೆ ತೆರೆ ಬಿದ್ದಿದೆ. ಕಳೆದ ಸೆಪ್ಟೆಂಬರ್ 26ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವುದರೊಂದಿಗೆ ದಸರಾಗೆ ಚಾಲನೆ ನೀಡಿದ್ದರು. ಇದಿಗ ಬೃಹತ್‌ ಮೆರವಣಿಗೆಯೊಂದಿಗೆ ದಸರಾ ಉತ್ಸವ ಸಂಪನ್ನಗೊಂಡಿತು.

ಮಂಗಳೂರು ದಸರಾ ಎಷ್ಟೊಂದು ಸುಂದರ..ಎಲ್ಲೆಲ್ಲೂ ಬೆಳಕಿನ ಚಿತ್ತಾರ...ಮಂಗಳೂರು ದಸರಾ ಎಷ್ಟೊಂದು ಸುಂದರ..ಎಲ್ಲೆಲ್ಲೂ ಬೆಳಕಿನ ಚಿತ್ತಾರ...

ಬುಧವಾರ ಸಂಜೆ ಸುಮಾರು 4:30ಕ್ಕೆ ಕ್ಷೇತ್ರದಿಂದ ಹೊರಟ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ಥಬ್ದ ಚಿತ್ರದೊಂದಿಗೆ ಕೊಂಡೊಯ್ಯಲಾಯಿತು. ಕೇಂದ್ರ ಮಾಜಿ ಸಚಿವ ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಜನಸಾಗರವೇ ನೆರೆದಿದ್ದು, ದಸರಾ ಮೆರವಣಿಗೆಗೆ ಮೆರಗು ತಂದಿದ್ದಾರೆ.

 ಮಂಗಳೂರಿನಲ್ಲಿ ದಸರಾ ವೈಭವ

ಮಂಗಳೂರಿನಲ್ಲಿ ದಸರಾ ವೈಭವ

ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕೊರೊನಾದಿಂದಾಗಿ ಎರಡು ವರ್ಷ ದಸರಾ ಮೆರವಣಿಗೆ ಕಳೆಗುಂದಿದ್ದು, ಈ ಬಾರಿ ಅದ್ದೂರಿಯಾಗಿ ದಸರಾ ಮೆರವಣಿಗೆಯನ್ನು ಮಾಡಲಾಯಿತು. ಸುಮಾರು ಒಂದು ಸಾವಿರ ಆಕರ್ಷಕ ಕೇರಳ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು, 50 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ, ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 80ಕ್ಕೂ ಅಧಿಕ ಸ್ಥಬ್ದಚಿತ್ರಗಳು ದಸರಾ ಮೆರವಣಿಗೆಗೆ ಮೆರಗು ನೀಡಿದವು. ದಾರಿ ಉದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಜನ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದೊಂದು ಜಗತ್ ಪ್ರಸಿದ್ದ ದಸರಾ ಮೆರವಣಿಗೆ ಎಂದು ಜನರು ಸಂತಸ ವ್ಯಕ್ತಪಡಿಸಿದರು.

 7 ಕಿ.ಮೀ. ಸಾಗಿದ ದಸರಾ ಮೆರವಣಿಗೆ

7 ಕಿ.ಮೀ. ಸಾಗಿದ ದಸರಾ ಮೆರವಣಿಗೆ

ಶ್ರೀ ಕ್ಷೇತ್ರದಿಂದ ಬುಧವಾರ ಸಂಜೆ ಹೊರಟ ಮೆರವಣಿಗೆ ನಗರದ ಸುಮಾರು 7 ಕಿಲೋ ಮೀಟರ್ ಸಾಗಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಿದೆ. ಕ್ಷೇತ್ರದ ಪುಷ್ಕರಣಿಯಲ್ಲಿ ಗಣೇಶ, ಆದಿಶಕ್ತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗಿದೆ. ಇದರೊಂದಿಗೆ ಈ ದಸರಾ ಮೆರವಣಿಗೆಗೆ ತೆರೆಬಿದ್ದಿದೆ. ದಸರಾ ಇನ್ನಷ್ಟು ಪ್ರಸಿದ್ದಿ ಹೊಂದಲಿ ಅನ್ನುವುದು ಭಕ್ತರ ಆಶಯ ಆಗಿದೆ.

 ಗಮನ ಸೆಳೆದಿದ್ದ ಹುಲಿ ಕುಣಿತ

ಗಮನ ಸೆಳೆದಿದ್ದ ಹುಲಿ ಕುಣಿತ

ಹಾಗೆಯೇ ಮಂಗಳೂರಿನಲ್ಲಿ ದಸರಾ ಸಮಯದಲ್ಲಿ ಎಲ್ಲಿ ನೋಡಿದರೂ ಹುಲಿ ಕುಣಿತದ್ದೇ ಸದ್ದಾಗಿತ್ತು. ಇದು ಮಂಗಳೂರಿನ ಜನರಿಗೆ ಮೈ ರೋಮಾಂಚನಗೊಳಿಸುವ ಅನುಭವ ನೀಡಿದೆ. ಕುಡ್ಲಾ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಈ ಕಾರ್ಯಕ್ರಮ ಆಯೋಜನೆಯನ್ನು ಮಾಡಿದ್ದರು. ಹುಲಿ ಕುಣಿತ ಕರಾವಳಿಯ ಜಾನಪದ ಹಾಗೂ ಸಾಂಪ್ರದಾಯಿಕ ಕುಣಿತವಾಗಿದ್ದು, ಇದು ವಿಶ್ವದ ಗಮನ ಸೆಳೆದಿದೆ. ಹುಲಿ ವೇಷದ ಬ್ಯಾಂಡ್ ದೇಶ, ವಿದೇಶದಲ್ಲೂ ಪ್ರಖ್ಯಾತಿ ಪಡೆದಿದೆ. ಮದುವೆ, ಪಾರ್ಟಿ, ಎಲ್ಲಾ ಸಮಾರಂಭಗಳಲ್ಲೂ ಇದು ಬಳಕೆ ಆಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚು ಪ್ರಸಿದ್ಧಿಗೆ ತರಲು ಹಾಗೂ ಜಿಲ್ಲೆಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಪಿಲಿ ಪರ್ಬವನ್ನು ಆಯೋಜಿಸಿದ್ದರು.

 ವಿಭಿನ್ನವಾಗಿ ಸಾಹಸ ಪ್ರದರ್ಶನ

ವಿಭಿನ್ನವಾಗಿ ಸಾಹಸ ಪ್ರದರ್ಶನ

ಕರಾವಳಿಯ ಹುಲಿ ಕುಣಿತದಲ್ಲಿ ಹಲವು ಪ್ರಕಾರಗಳಿದ್ದು, ಅದು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಆದರೆ ಮಂಗಳೂರಿನ ಹುಲಿ ತಂಡಗಳು ಕುಣಿತದ ಜೊತೆಗೆ, ಸಾಹಸಗಳು ಮೈ ರೋಮಾಂಚನಗೊಳಿಸುತ್ತದೆ. ಇನ್ನು ಹುಲಿ ಬ್ಯಾಂಡ್‌ಗೆ ಎಂತಹವರೂ ಕೂಡ ಎದ್ದು ನಲಿಯಲು ಮುಂದಾಗುತ್ತಾರೆ ಅನ್ನುವುದಕ್ಕೆ ಇದೇ ವೇದಿಕೆಯಲ್ಲಿ ಪುಟಾಣಿ ಮಕ್ಕಳು ಹಾಕಿದ ಸ್ಟೆಪ್‌ಗಳೇ ಸಾಕ್ಷಿ ಆಗಿದೆ. ಇನ್ನು ಇಲ್ಲಿ ಆಯೋಜನೆ ಮಾಡಿದ್ದು ಕೇವಲ ಕುಣಿತ ಮಾತ್ರವಾಗಿರದೆ ಇದೊಂದು ಸ್ಪರ್ಧೆ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು ಹನ್ನೆರಡು ತಂಡಗಳು ಭಾಗವಹಿಸಿದ್ದವು.
ಬಾಯಿಯಲ್ಲಿ ಅಕ್ಕಿ ಮುಡಿ ಎತ್ತುವುದು, ಪಲ್ಟಿ ಹೊಡೆಯುದು, ಟೈಮಿಂಗ್, ಶಿಸ್ತು, ವಿಶಿಷ್ಟ ಸ್ಟೆಪ್ ಹೀಗೆ ಎಲ್ಲದಕ್ಕೂ ಪ್ರತ್ಯೇಕ ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರತೀ ತಂಡಕ್ಕೂ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಹುಲಿವೇಷ ಕುಣಿತಕ್ಕೆ ಎತ್ತರದ ಸ್ಟೇಜ್ ವ್ಯವಸ್ಥೆ ಮಾಡಲಾಗಿದ್ದು, ಪ್ರೇಕ್ಷಕರಿಗೆ ಸುತ್ತಲೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು.

English summary
Mangaluru Dasara procession ended today, people came for Dasara festival expressed happiness. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X