• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ

|

ಮಂಗಳೂರು, ಅಕ್ಟೋಬರ್. 09: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2015ರ ಏಪ್ರಿಲ್ 17ರಂದು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಉಮ್ಮರ್ ಫಾರೂಕ್' ಎಂಬುವವರಿಗೆ ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 5 ವರ್ಷ ಕಠಿಣ ಸಜೆ ವಿಧಿಸಿದೆ ಶಿಕ್ಷೆ ಪ್ರಕಟಿಸಿದೆ.

ಮಗಳನ್ನೇ ಅತ್ಯಾಚಾರಗೈದ ಧೂರ್ತ ತಂದೆಗೆ 20 ವರ್ಷ ಜೈಲು

ಜಿಡೆಕಲ್ಲು ಎಂಬಲ್ಲಿ ಜೊಹರಾ ಎಂಬುವರ ಮಗಳು ತಸ್ಮಿಯಾಗೆ ಆರೋಪಿ ಉಮ್ಮರ್ ಫಾರೂಕ್ ಹಲ್ಲೆ ನಡೆಸಿ ಕೊಲೆ ನಡೆಸಲು ಯತ್ನಿಸಿದ್ದನು. ಆಗ ಸಂತ್ರಸ್ಥೆ ಠಾಣೆಗೆ ಪೋನ್ ಮಾಡಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆಡ್ ಕಾನ್ಸ್ ಟೇಬಲ್ ನಾರಾಯಣ ಹಾಗೂ ವಿಶ್ವನಾಥ್ ರೈ ವಿಚಾರಣೆಗೆ ತೆರಳಿದ್ದರು.

ಈ ಸಂದರ್ಭ ಆರೋಪಿ ಉಮ್ಮರ್ ಫಾರೂಕ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಮ್ಮರ್ ಫಾರೂಕ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ

ಈ ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಐಪಿಸಿ 333 ಅನ್ವಯ ಆರೋಪಿ ಉಮ್ಮರ್ ಫಾರೂಕ್ ಗೆ 5 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂಪಾಯಿ ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ 1ವರ್ಷ ಸಜೆ.

ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ

504 ಐಪಿಸಿಯಲ್ಲಿ ಆರೋಪಿಗೆ 1ವರ್ಷ ಸಾದಾ ಸಜೆ ಹಾಗೂ 7 ಸಾವಿರ ರೂಪಾಯಿ ದಂಡ. ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ 3 ತಿಂಗಳ ಸಜೆ ವಿಧಿಸಿ ಶಿಕ್ಷೆ ವಿಧಿಸಿದೆ.

English summary
Mangaluru 5 JMFC court announced 5 year jail punishment to accused Ummar Faruq one who attacked police constables. This incident happened in Puttur on April 17 , 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X